Important
Trending

MBBS ನೀಟ್ ಪಿಜಿ ಪರೀಕ್ಷೆಯಲ್ಲಿ ದೇಶದಲ್ಲಿ 636 Rank ಗಳಿಸಿ, ಸಾಧನೆ

ಕುಮಟಾ: ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗೋಕರ್ಣ ತದಡಿ ಮೂಲದ ಡಾ.ಚೇತನ ನಾಯ್ಕ ಅವರು ಎಂ.ಬಿ.ಬಿ.ಎಸ್ ನೀಟ್ ಪಿಜಿ ಪರೀಕ್ಷೆಯಲ್ಲಿ ದೇಶದಲ್ಲಿ 636 ರ್ಯಾಂಕ್ ಗಳಿಸಿ, ಸಾಧನೆ ಮಾಡಿದ್ದಾರೆ. ಕುಮಟಾ ತಾಲೂಕಿನ ಗೋಕರ್ಣದ ತದಡಿ ಮೂಲರವರಾದ ಚೇತನ ನಾಯ್ಕ ಕಾರವಾರದ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಅಧ್ಯಯನ ಮಾಡಿ, ಆನಂತರ ನೀಟ್ ಪಿಜಿ ಪರೀಕ್ಷೆ ಎದುರಿಸಿದ್ದಾರೆ. ಈ ಪರೀಕ್ಷೆಯಲ್ಲಿ ದೇಶ ಮಟ್ಟದಲ್ಲಿ 636 ನೆಯ ರ್ಯಾಂಕ್ ಪಡೆದು ಜಿಲ್ಲೆ ಹಾಗೂ ತಾಲೂಕಿನ ಕೀರ್ತಿಯನ್ನು ದೇಶಮಟ್ಟದಲ್ಲಿ ಬೆಳಗಿಸಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Related Articles

Back to top button