ಅಮೇರಿಕಾದಿಂದ ಭಾರತಕ್ಕೆ ಮೃತ ದೇಹ ತರಲು ಸರ್ಕಾರದ ಸಹಾಯ ಕೋರಿದ ಕುಟುಂಬಸ್ಥರು: ಶಾಸಕಿ ರೂಪಾಲಿ ನಾಯ್ಕ ಸಮ್ಮುಖದಲ್ಲಿ ಕೇಂದ್ರ  ಸಚಿವ ರೂಪಾಲಗೆ ಮನವಿ

ಅಂಕೋಲಾ : ಕಾರವಾರ ಮೂಲದ ವ್ಯಕ್ತಿಯೋರ್ವರು ಅಮೇರಿಕಾದ ವಾಷಿಂಗ್ಟನ್ ನಲ್ಲಿ  ಹೃದಯಾಘಾತದಿಂದ ನಿಧನರಾಗಿದ್ದು, ಮೃತದೇಹವನ್ನು  ಭಾರತಕ್ಕೆ ತರಲು ಸಹಾಯ ಕೋರಿ ಮೃತನ ಕುಟುಂಬದ ಸದಸ್ಯರು ಕೇಂದ್ರ ಸಚಿವರ ಮೊರೆ ಹೋಗಿದ್ದಾರೆ. ಅಮೇರಿಕಾದಲ್ಲಿ  ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ ಕಾರವಾರ ಸದಾಶಿವಗಡದ ಫರ್ನಾಂಡಿಸ ಜೊಸೆಫ ಮೇಟ್ಸ್ (46) ಮಾರ್ಚ 14 ರಂದು ಮೃತಪಟ್ಟಿದ್ದರು.  ಕೇಂದ್ರ ಮೀನುಗಾರಿಕೆ ಮತ್ತು ಪಶು ಸಂಗೋಪನಾ ಸಚಿವ ಪುರುಶೋತ್ತಮ ರುಪಾಲಾ ಅಂಕೋಲಾದ ಬೆಳಂಬಾರದ ಬಂದರು ಸ್ಥಳ ವೀಕ್ಷಣೆಗೆಂದು ಆಗಮಿಸಿದ ವೇಳೆ ಅವರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡ  ಮೃತನ ಪತ್ನಿ ಹಾಗೂ ಆಕೆಯ ಸಹೋದರಿ, ಅಮೇರಿಕಾದಿಂದ ಮೃತರ ಶವವನ್ನು ತವರು ನಾಡಿಗೆ ತರಲು ಸಹಾಯ ಕೋರಿ ಮನವಿಯನ್ನು ಅರ್ಪಿಸಿದರು.

ಕೇಂದ್ರ ವಿದೇಶಾಂಗ ಸಚಿವರಿಗೂ ಪತ್ರ ಬರೆದಿದ್ದು ಮೀನುಗಾರಿಕೆಯ ಸಚಿವರು ಮುತುವರ್ಜಿವಹಿಸಿ ಸಹಾಯ ಮಾಡಬೇಕಾಗಿ ವಿನಂತಿಸಿದರು. ಮನವಿಯನ್ನು ಸ್ವೀಕರಿಸಿದ ಕೇಂದ್ರ ಸಚಿವ ಪುರುಷೋತ್ತಮ ರುಪಾಲಾ ತಕ್ಷಣ ನೆರವು ನೀಡುವದಾಗಿ  ಭರವಸೆಯಿತ್ತರು ಹಾಗೂ ಈ ಕೂಡಲೇ ಕೇಂದ್ರ ವಿದೇಶಾಂಗ ಸಚಿವಾಲಯವನ್ನು ಸಂಪತರ್ಕಿಸುವದಾಗಿ ಭರವಸೆ ನೀಡಿದರು. ಶಾಸಕಿ ರೂಪಾಲಿ ನಾಯ್ಕ ಅವರು ನೊಂದ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ,ಕೇಂದ್ರ ಸರ್ಕಾರ  ತ್ವರಿತವಾಗಿ ಸ್ಪಂದಿಸುವ ವಿಶ್ವಾಸ ವ್ಯಕ್ತಪಡಿಸಿ, ಧೈರ್ಯ ತುಂಬಿದರು .           

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version