Focus News
Trending

ವರ್ಷ ಕಳೆಯುವುದರೊಳಗೆ ಹರ್ಷ ಕಸಿದ ಕರೋನಾತಂಕ| ಅಂಕೋಲಾದಲ್ಲಿ ಈ ವರೆಗೆ ಸಾವಿರದ ಗಡಿ ದಾಟಿದ ಸೊಂಕಿತರ ಸಂಖ್ಯೆ

ಅಂಕೋಲಾ: ವಿಶ್ವವನ್ನೇ ಕಾಡಿದ್ದ ಕರೊನಾ ಪಿಡುಗು , ದೇಶಕ್ಕೂ ಕಾಲಿರಿಸಿ, ನಂತರ ರಾಜ್ಯ ಹಾಗೂ ಜಿಲ್ಲೆಯತ್ತ ತನ್ನ ಕರಾಳ ಮುಖ ತೋರಿಸಲಾರಂಭಿಸಿತ್ತು. ಆದರೂ ಬಹುದಿನಗಳ ವರೆಗೆ ಅಂಕೋಲಾ ತಾಲೂಕಿನಲ್ಲಿ ಎಲ್ಲಿಯೂ ಕೊವಿಡ್ ಸೋಂಕು ಪ್ರಕರಣ ವರದಿಯಾಗದೇ ಜನತೆ ಕೊಂಚ ನೆಮ್ಮದಿ ಪಡುವಂತಾಗಿತ್ತು.

ಮುಂಬೈನಿಂದ ಕುಮಟಾದಲ್ಲಿ ಬಂದು ಕ್ಷಾರಂಟೈನ್ ಗೆ ಒಳಪಟ್ಟ ತನ್ನ ತಂದೆಯ ಪ್ರಾಥಮಿಕ ಸಂಪರ್ಕದಿಂದ ಅಂಕೋಲಾದಲ್ಲಿ ಭಾವಿಕೇರಿ ಮಹಿಳೆ ಮೂಲಕ ಪ್ರಥಮ ಸೋಂಕಿನ ಪ್ರಕರಣ ದಾಖಲಾಗಿ ಜನರ ಅತಂಕಕ್ಕೆ ಎಡೆ ಮಾಡಿಕೊಟ್ಟಿತ್ತು. ತದನಂತರ ಅಗ್ರಗೋಣ ಶೇಡಿಕಟ್ಟಾ ವ್ಯಕ್ತಿಯ ಮೂಲಕ ಪಟ್ಟಣದ ಪ್ರತಿಷ್ಠಿತ ಖಾಸಗಿ ಆಸ್ಪ್ರತ್ರೆಯಲ್ಲಿ ಕಾಣಿಸಿಕೊಂಡ ಕರೊನಾ ಮಾರಿಯ ಅಟ್ಟಹಾಸ ಜನತೆ ತಲ್ಲಣ ಗೊಳ್ಳುವಂತಾಯಿತು .

ಅಂದಿನಿಂದ ಇಂದಿನ ವರೆಗೆ ತಾಲೂಕಿನಲ್ಲಿ ಒಟ್ಟೂ ಸಾವಿರಕ್ಕೂ ಮಿಕ್ಕಿದ ಸೋಂಕು ಪ್ರಕರಣಗಳು ವರದಿಯಾಗಿದೆ. ಅವರಲ್ಲಿ ಬಹುತೇಕರು ಗುಣಮುಖರಾಗಿದ್ದರೆ , ಪ್ರಸಿದ್ಧ ವೈದ್ಯರೂ ಸೇರಿದಂತೆ ಇತ್ತೀಚೆಗೆ ನಿಧನರಾದ ಶಿರಗುಜಿಯ ವೃದ್ಧ ಸೇರಿ 14 ಸಾವಿನ ಪ್ರಕರಣ ದಾಖಲಾಗಿದೆ. ವರ್ಷ ಕಳೆಯುವುದರೊಳಗೆ, ಮತ್ತೆ ಕೊವಿಡನ 2 ನೇ ಅಲೆ ಕಾಡುತ್ತಿದ್ದು, 34 ಹೊಸ ಪ್ರಕರಣಗಳು ಸಕ್ರೀಯವಾಗಿದೆ…

ಇನ್ನಷ್ಟೇ ಚೇತರಿಸಿಕೊಳ್ಳಬೇಕಿದ್ದ ವ್ಯಾಪಾರ – ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅಂತೆಯೇ ಮದುವೆ , ಸಭೆ, ಸಮಾರಂಭ, ಜಾತ್ರೆ – ಉತ್ಸವಗಳ ಮೇಲೂ ತನ್ನ ಕರಾಳ ನೆರಳು ಬೀರಿ ಹಲವರ ಹರ್ಷ ಕಸಿದುಕೊಳ್ಳುತ್ತಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888

Back to top button