ಭಾಷಾ ಸಿದ್ಧಿ ಪರಿಶ್ರಮದಿಂದ ಸಾಧ್ಯ: ಜಿಲ್ಲಾ ಮಟ್ಟದ ವಿಚಾರ ಮಂಥನದಲ್ಲಿ ಪ್ರಾಚಾರ್ಯ ಈಶ್ವರ ನಾಯ್ಕ ಅಭಿಮತ

ಕುಮಟಾ : ಭಾಷೆಯು ಬದುಕಿನ ಜೀವದೃವ್ಯವಾಗಿದ್ದು, ಅದನ್ನು ಜೀವಿತದುದ್ದಕ್ಕೂ ಕಲಿಯಾಗುತ್ತಿದ್ದು, ನಿರಂತರವಾದ ಪರಿಶ್ರಮದಿಂದ ಭಾಷಾ ಶುದ್ಧಿ ಮತ್ತು ಸಿದ್ಧಿಯು ಸಾಧ್ಯವೆಂದು ಪ್ರಾಚಾರ್ಯ ಈಶ್ವರ ನಾಯ್ಕ ನುಡಿದರು.ಅವರು ಕುಮಟಾದ ಡಯಟ್‌ನಲ್ಲಿ ಬೆಳಗಾವಿಯ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ “ಆಲೂರು ವೆಂಕಟರಾವ್ ಭಾಷಾ ಕೌಶಲ ತರಬೇತಿ ಕೇಂದ್ರ”ದ ನಿಯೋಜಿತ ಕಾರ್ಯಕ್ರಮವಾಗಿ “ಪರಿಣಾಮಕಾರಿ ಭಾಷಾ ಬೋಧನೆಯ ತಂತ್ರಾ0ಶಗಳು ಮತ್ತು ಇತರ ಅನ್ವಯಿಕಗಳು” ಎಂಬ ವಿಷಯದ ಕುರಿತಾದ “ವಿಚಾರ ಮಂಥನ”ವನ್ನು ಉದ್ಘಾಟಿಸಿ – ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಭಾಷೆಯು ಪ್ರಗತಿಶೀಲವಾದುದು. ಬಳಸಿದಷ್ಟು ಅದು ಪಕ್ವವಾಗುತ್ತದೆ. ಮಾತೃಭಾಷೆಯೊಂದಿಗೆ ಇತರ ಭಾಷೆಗಳಲ್ಲೂ ಹಿಡಿತವನ್ನು ಸಾಧಿಸುವ ಅಗತ್ಯತೆಯು ವರ್ತಮಾನದ ಜಗತ್ತಿನಲ್ಲಿದೆ ಎಂದು ಅವರು ನುಡಿದರು.
ಉಪಪ್ರಾಚಾರ್ಯ ನಾಗರಾಜ ನಾಯಕರವರು ಇತರ ಭಾಷೆಗಳನ್ನು ಕನ್ನಡಿಗರಷ್ಟು ಉದಾರವಾಗಿ ಸ್ವೀಕರಿಸುವ ಬೇರೆ ಭಾಷಿಗರಾರೂ ಇಲ್ಲವೆಂದರು, ಹಿರಿಯ ಉಪನ್ಯಾಸಕ ವ್ಹಿ. ಆರ್. ನಾಯ್ಕ ಕನ್ನಡ ನಾಡು-ನುಡಿಗೆ ಆಲೂರು ವೆಂಕಟರಾಯರ ಕೊಡುಗೆಯನ್ನು ಸ್ಮರಿಸಿ, ಅವರ ಹೆಸರಿನಲ್ಲಿ ರಾಜ್ಯದ ನಾಲ್ಕು ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯಗಳಲ್ಲಿ ಭಾಷಾ ಕೌಶಲ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿರುವುದು ಶ್ಲಾಘ್ಯವೆಂದರು.

ಸಂಸ್ಕೃತ ಅಧ್ಯಾಪಕ ಮಂಜುನಾಥ ಗಾಂವಕರ, ಬರ್ಗಿ ನಿರೂಪಿಸಿದರು. ಉಪನ್ಯಾಸಕ ನಾಗರಾಜ ಗೌಡ ಸ್ವಾಗತಿಸಿದರು. ಹೊನ್ನಾವರದ ನ್ಯೂ ಇಂಗ್ಲೀಷ್ ಸ್ಕೂಲ್‌ನ ಶಿಕ್ಷಕ ಸೂರಜ್ ಸಿ. ಎ. ವಂದಿಸಿದರು. ಮಲ್ಲಾಪುರದ ಗುರುಪ್ರಸಾದ ಪ್ರೌಢಶಾಲೆಯ ಶಿಕ್ಷಕ ರಾಜು ಲಮಾಣಿ ಪ್ರಾರ್ಥಿಸಿದರು. ಹೊನ್ನಾವರದ ಸೇಂಟ್ ಥಾಮಸ್ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕ ಬಿ. ಎಮ್. ಭಟ್ಟ ವಿಚಾರ ಮಂಥನದಲ್ಲಿ ವಿಷಯವನ್ನು ಮಂಡಿಸಿದರು.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888…

Exit mobile version