Follow Us On

WhatsApp Group
Big News
Trending

ರಸ್ತೆಯಲ್ಲಿ ಹೋಗುತ್ತಿರುವಾಗ ಚೀಲದಲ್ಲಿ ಸಿಕ್ಕಿತ್ತು ಹಣದ ಬ್ಯಾಗ್ ! ಮೆಚ್ಚುಗೆಗೆ ಪಾತ್ರವಾಯ್ತು ಈತನ ಪ್ರಾಮಾಣಿಕತೆ

ಇಂಥವರು ನಿಜವಾಗ್ಲು ಕೋಟಿಗೊಬ್ಬರು. ಮೋಸ, ಕಪಟ, ಕಳ್ಳತನ ಮೂಲಕ ಹಣ ದೋಚುತ್ತಿರುವ ಇಂದಿನ ದಿನಮಾನದಲ್ಲಿ ಇವರು ಮಾಡಿದ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ರಸ್ತೆಯಲ್ಲಿ ಸಿಕ್ಕಿದ ಹಣವನ್ನು ಮರಳಿಸಿದ ಅಪರೂಪದ ವ್ಯಕ್ತಿ ಇವರು.

ಕುಮಟಾ: ಆತ ಹೋಗುತ್ತಿರುವಾಗ ರಸ್ತೆಯ ಮೇಲೆ ಚೀಲವೊಂದು ಸಿಕ್ಕಿತ್ತು. ಚೀಲ ತೆಗೆದುನೋಡಿದಾಗ ಅದರಲ್ಲಿ ಹಣವಿತ್ತು. ಈ ಮಾಹಿತಿಯನ್ನು ತನ್ನ ಸ್ನೇಹಿತರಿಗೆ ತಿಳಿಸಿ, ಸಾಮಾಜಿಕ ಜಾಲತಾಣದಲ್ಲಿ ತನಗೆ ಸಿಕ್ಕಿರುವ ಹಣದ ಕುರಿತು ಮಾಹಿತಿ ನೀಡಿದ್ದ. ಚೀಲದಲ್ಲಿ ಹಣ ಎಷ್ಟಿದೆ ಮತ್ತು ಇದಕ್ಕೆ ಸಂಬಂಧಪಟ್ಟ ದಾಖಲೆ ನೀಡಿ, ಹಣವನ್ನು ಪಡೆದುಕೊಳ್ಳುವಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿತ್ತು. ಕೆಲವೇ ಗಂಟೆಗಳ ಅಂತರದಲ್ಲಿ ಈ ಪೋಸ್ಟ್ ಹಣಕಳೆದುಕೊಂಡ ವ್ಯಕ್ತಿಯನ್ನು ತಲುಪಿತ್ತು.

ಸಂಬಂಧಪಟ್ಟವರು ಹಣದ ಮೊತ್ತ ಮತ್ತು ದಾಖಲೆ ತೋರಿಸಿ, ಪೊಲೀಸ್ ಠಾಣೆಗೆ ತೆರಳಿ ಹಣ ಮರಳಿ ಪಡೆದುಕೊಳ್ಳುವಂತೆ ಕೇಳಿಕೊಂಡಿದ್ದ. ಹೌದು, ತನಗೆ ರಸ್ತೆಯಲ್ಲಿ ಸಿಕ್ಕಿರುವ ಹಣವನ್ನು ಮರಳಿ ನೀಡಿ, ಮಾನವೀಯತೆ ಮೆರೆದ ವ್ಯಕ್ತಿ ಉತ್ತರಕನ್ನಡ ಜಿಲ್ಲೆಯ ಕುಮಟಾದ ಬಗ್ಗೋಣ ಗ್ರಾಮದ ನಿವಾಸಿ ಮಾದೇವ ಅನಂತ ನಾಯ್ಕ.

ಕುಮಟಾದ ಗುಡಿಗಾರಗಲ್ಲಿ ಶಾಲೆಯ ಎದರುಗಡೆ ಏಪ್ರಿಲ್ 9 ರಂದು ಸಂಜೆ ಹೊತ್ತಿನಲ್ಲಿ ಬಿಳಿ ಬಣ್ಣದ ಕ್ಯಾರಿಬ್ಯಾಗ್ ವೊಂದು ಮಾದೇವ ನಾಯ್ಕರಿಗೆ ಸಿಕ್ಕಿತ್ತು. ಅದನ್ನು ತೆರೆದು ನೋಡಿದಾಗ ಬ್ಯಾಗ್‌ನಲ್ಲಿ 29 ಸಾವಿರ ರೂಪಾಯಿ ಹಣ ಇತ್ತು. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೋಸ್ಟ್ ನೋಡಿ, ಕುಮಟಾದ ಹಳಕಾರ ನಿವಾಸಿ ಗಣೇಶ ಹರಿಕಂತ್ರ ಹಣ ತನ್ನದು ಎಂದು ಹೇಳಿ ಕರೆ ಮಾಡಿದ್ದ.

ಅಲ್ಲದೆ, ತಾನು ಕುಮಟಾ ಸಿವಿಲ್ ಕೋರ್ಟ್ ಕಡೆ ಬಂದಾಗ ಹಣ ಕಳೆದುಕೊಂಡ ಬಗ್ಗೆ ಮಾಹಿತಿ ನೀಡಿದ್ದ. ಠಾಣೆಗೆ ಬಂದು ಹಣದ ಮೊತ್ತ ಮತ್ತು ಸಂಬಂಧಪಟ್ಟ ದಾಖಲೆ ತೋರಿಸಿದಾಗ, ಪೊಲೀಸರ ಸಮ್ಮುಖದಲ್ಲಿ ಹಣವನ್ನು ಮರಳಿಸಲಾಗಿದೆ. ರಸ್ತೆಯಲ್ಲಿ ಸಿಕ್ಕ ಹಣವನ್ನು ಮರಳಿಸಿದ ಮಾದೇವ ನಾಯ್ಕ ಅವರ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

ವಿಸ್ಮಯ ನ್ಯೂಸ್, ಕುಮಟಾ

Back to top button