Trending

ಮಂಗಳೂರು ವಿವಿ: ಕುಮಟಾ ವಿದ್ಯಾರ್ಥಿನಿಗೆ ಚಿನ್ನದ ಪದಕ

ಕುಮಟಾ: ಮಂಗಳೂರು ವಿಶ್ವವಿದ್ಯಾಲಯದ 39 ನೇ ಘಟಿಕೋತ್ಸವ ವಿಶ್ವವಿದ್ಯಾಲಯದ ಕ್ಯಾಂಪಸ್ ನ ಮಂಗಳಾ ಸಂಭಾಗಣದಲ್ಲಿ ಜರುಗಿತು. ಈ ಘಟಿಕೋತ್ಸವದಲ್ಲಿ ಒಟ್ಟು 10 ಚಿನ್ನದ ಪದಕಗಳನ್ನು ಪ್ರಧಾನಿಸಲಾಯಿತು. ವಿದ್ಯೆ ಎಂಬುದು ಯಾರ ಸ್ವತ್ತು ಅಲ್ಲ ಅದಕ್ಕೆ ನಿದರ್ಶನವೆಂಬಂತೆ ಉತ್ತರಕನ್ನಡ ಜಿಲ್ಲೆಯ ಕಡಲ ನಗರಿ ಕುಮಟಾದ ನಿವಾಸಿಯಾದ ಶ್ರೀ ಹರೀಶ ಗೋಳಿ ಹಾಗೂ ಶ್ರೀಮತಿ ಅಂಜಲಿ ಗೋಳಿಯವರ ಪುತ್ರಿ ಪ್ರಜ್ಞಾ ಶಾನಭಾಗ ಗೋಳಿ ಅವರು ಉಡುಪಿಯ ಪೂರ್ಣಪ್ರಜ್ಞಾ ಇನ್ಸ್ಟಿಟ್ಯೂಟ್ ಆಪ್ ಮ್ಯಾನೇಜ್ಮೆಂಟ್ ವಿಧ್ಯಾರ್ಥಿನಿಯಾಗಿದ್ದು 2020 ರ ಸೆಪ್ಟೆಂಬರ್ ನಲ್ಲಿ ಮಂಗಳೂರು ವಿಶ್ವವಿದ್ಯಾಲಯ ನಡೆಸಿದ ಎಂ.ಬಿ.ಎ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.

ಮಂಗಳೂರು ವಿಶ್ವವಿದ್ಯಾಲಯದ 39 ನೇ ಘಟಿಕೋತ್ಸವದಲ್ಲಿ ಎನ್.ರಾಘವೇಂದ್ರ ಮೆಮೋರಿಯಲ್ ಚಿನ್ನದ ಪದಕವನ್ನು ಕುಲಪತಿಗಳಾದ ಪ್ರೊ. ಪಿ.ಎನ್.ಯಡಪದಿತ್ತಾಯರು ಪ್ರಧಾನಿಸಿದರು. ಮಗಳು ಚಿನ್ನದ ಪದಕ ಪಡೆದ ವಿಷಯ ತಿಳಿದು ತಂದೆ, ತಾಯಿ, ಸಹೋದರ ಹಾಗೂ ಕುಟುಂಬದವರು ಪ್ರಜ್ಞಾ ಶಾನಭಾಗ ಗೋಳಿಯವರ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

Back to top button