ಸೆಲ್ಫಿ ಹುಚ್ಚು: ಜೀವಕ್ಕೆ ಕುತ್ತು ? ವಿವಿಧ ಭಂಗಿಯಲ್ಲಿ ಸೆಲ್ಫಿ ತೆಗೆಯಲು ಹೋಗಿ ನದಿಗೆ ಬಿದ್ದ ಪ್ರೇಮಿಗಳು
ಡ್ಯಾಮ್ ಗೆ ಭೇಟಿ ನೀಡಿದ್ದ ಪ್ರೇಮಿಗಳು ಅಲ್ಲಿನ ಸುಂದರ ಪರಿಸರದಲ್ಲಿ ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದಾರೆ. ಈ ವೇಳೆ ಡ್ಯಾಮ್ ನ ಮುಂದುಗಡೆಯಿರುವ ಸೇತುವೆಯ ಕಟ್ಟೆಯ ಮೇಲೆ ನಿಂತು ಸೆಲ್ಫಿ ತೆಗೆದಿದ್ದಾರೆ. ಇದೇ ಸೆಲ್ಫಿ ಹುಚ್ಚು, ಇದೀಗ ಅವರ ಜೀವನದ ಕೊನೆಯ ಸೆಲ್ಫಿಯಾದಂತಿದೆ.
ಜೋಯಿಡಾ: ಆ ಇಬ್ಬರು ಪ್ರೇಮಿಗಳು ದೂರದೂರಿನಿಂದ ಇಲ್ಲಿನ ಪ್ರಕೃತಿ ಸೌಂದರ್ಯ ಸವಿಯಲು ಬಂದಿದ್ದರು. ಆದರೆ ವಿಧಿಯಾಟ. ಆಗಿದ್ದೆ ಇನ್ನೊಂದು. ಸಣ್ಣದೊಂದು ಅಚಾತುರ್ಯ, ಇಬ್ಬರ ಜೀವಕ್ಕೆ ಕುತ್ತು ತಂದಿದೆ.
ಹೌದು, ಸೆಲ್ಫಿ ತೆಗೆಯಲು ಹೋದ ಪ್ರೇಮಿಗಳು ಸೇತುವೆ ಕೆಳಗೆ ಬಿದ್ದು ನಾಪತ್ತೆಯಾದ ಘಟನೆ ಜೋಯಿಡಾ ತಾಲೂಕಿನ ಗಣೇಶಗುಡಿ ಬಳಿಯ ಕಾಳಿ ಸೇತುವೆ ಬಳಿ ನಡೆದಿದೆ. ಇಬ್ಬರು ಪ್ರೇಮಿಗಳು ಗಣೇಶಗುಡಿ ಡ್ಯಾಮ್ ಭಾಗಕ್ಕೆ ಆಟೋದಲ್ಲಿ ಆಗಮಿಸಿದ್ದರು.
ಈ ವೇಳೆ ಸೂಫಾ ಡ್ಯಾಮ್ ಗೆ ಭೇಟಿ ನೀಡಿದ್ದ ಪ್ರೇಮಿಗಳು ಡ್ಯಾಮ್ ನ ಮುಂದುಗಡೆಯಿರುವ ಸೇತುವೆಯ ಕಟ್ಟೆಯ ಮೇಲೆ ನಿಂತು ಸೆಲ್ಫಿ ತೆಗೆದಿದ್ದಾರೆ ಎನ್ನಲಾಗಿದೆ.
ವಿವಿಧ ಭಂಗಿಯ ಸೆಲ್ಫಿ ತೆಗೆಯುವ ಭರದಲ್ಲಿ ಇಬ್ಬರೂ ಕಾಲು ಜಾರಿ ಕಾಳಿ ನದಿಗೆ ಬಿದ್ದಿದ್ದು, ಕೋಚ್ಚಿಕೊಂಡು ಹೋಗಿದ್ದಾರೆ. ಅಲ್ಲೆ ಇದ್ದ ಆಟೋ ಚಾಲಕ ಈ ಬಗ್ಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದು, ನೀರಿನಲ್ಲಿ ಕೊಚ್ಚಿಕೊಂಡು ಹೋದ ಜೋಡಿಗಳಿಗೆ ಹುಡುಕಾಟ ನಡೆಸುತ್ತಿದ್ದಾರೆ. ಕಾಣೆಯಾದ ಯುವತಿಯನ್ನು ಬೀದರ್ ಮೂಲದ ರಕ್ಷಿತಾ ಎಂದು ಗುರುತಿಸಲಾಗಿದೆ. ಯುವಕನ ಕುರಿತು ಇನ್ನು ಮಾಹಿತಿ ತಿಳಿದುಬಂದಿಲ್ಲ.
ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..
ವಿಸ್ಮಯ ನ್ಯೂಸ್ ಜೋಯ್ಡಾ