Follow Us On

WhatsApp Group
Important
Trending

ವಿಧಿಯಾಟದ ಮುಂದೆ ಬದುಕಿನಾಟ ಮುಗಿಸಿದ ಕ್ರೀಡಾಪಟು: ಹಬ್ಬಕ್ಕೆ ಅಕ್ಕನ ಕರೆತರಲು ಹೋದವ ಮನೆಗೆ ಮರಳಲೇ ಇಲ್ಲ: ಮಾವನೊಂದಿಗೆ ಪುಟಾಣಿ ಬಾಲೆಯೂ ವಿಧಿವಶ

ಪುಟಾಣಿ ಸಂಜನಾಳ ಸಾವಿನ ದುಃಖ ಎಂಥವರಿಗೂ ಕರಳು ಚುರ್ ಎನ್ನದಿರದು. ಹಬ್ಬ ಆಚರಿಸಿ ಸಂಭ್ರಮ ಪಡಬೇಕಿದ್ದ ಮನೆಯಲ್ಲಿ, ಸೂತಕದ ಕರಾಳ ಛಾಯೆ ಆವರಿಸಿದ್ದು, ವಿಧಿಯಾಟದ ಮುಂದೆ ಎಲ್ಲವೂ ಗೌಣ ಎನ್ನುವಂತಾಗಿದೆ.

ಅಂಕೋಲಾ: ಅಂಕೋಲಾ- ಹುಬ್ಬಳ್ಳಿ  ಮಾರ್ಗಮಧ್ಯೆ ಹೆಬ್ಬುಳ ಬಳಿ   ಕಾರ್ ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರನಲ್ಲಿ ಪ್ರಯಾಣಿಸುತ್ತಿದ್ದ ಈರ್ವರು ಸ್ಥಳದಲ್ಲೇ ಮೃತಪಟ್ಟ ಧಾರುಣ ಘಟನೆ , ಮಂಗಳವಾರ ಬೆಳಿಗ್ಗೆ 6.30ರ ಸುಮಾರಿಗೆ ನಡೆದಿದೆ.   

ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಮಾರ್ಗವಾಗಿ ಮಹಾರಾಷ್ಟ್ರ ಕಡೆಗೆ ಹೊರಟಿದ್ದ ಲಾರಿ, ಜವರಾಯನಂತೆ ಬಂದು ಬಲಬದಿಗೆ ಹೊರಳಿ, ಎದುರಿನಿಂದ ಬರುತ್ತಿದ್ದ ಕಾರ್ ಒಂದಕ್ಕೆ ಜೋರಾಗಿ ಡಿಕ್ಕಿ ಡಿಕ್ಕಿಹೊಡೆದಿದೆ. ©Copyright reserved by Vismaya tv ಪರಿಣಾಮ, ಗುರುಪ್ರಸಾದ ಅಣ್ಣೇಕರ (34), ಮತ್ತು ಅವನ ಅಕ್ಕನ ಮಗಳು ಪುಟಾಣಿ ಸಂಜನಾ (7) ಸ್ಥಳದಲ್ಲೇ ಮೃತಪಟ್ಟಿದ್ದಾರೆ..   

ದೂರದ ಪೂನಾದಲ್ಲಿ ನೆಲೆಸಿದ್ದ ತನ್ನ ಅಕ್ಕ- ಭಾವಂದಿರನ್ನು ಹಬ್ಬಗ್ಗೆ ಮನೆಗೆ ಕರೆತರಲು ತನ್ನ ಗೆಳೆಯ ಪ್ರೀತಮ್ ಜೊತೆ ತೆರಳಿದ್ದ ಗುರು, ಮುಂಬೈಯಿಂದ ಮನೆಗೆ ವಾಪಸ್ತಾಗುವ ವೇಳೆ ಈ ದುರ್ಘಟನೆ ಸಂಭವಿಸಿದ್ದು , ಕುಟುಂಬ ಹಾಗೂ ಗ್ರಾಮಸ್ಥರಲ್ಲಿ ಶೊಕದ ಛಾಯೆ ಮನೆ ಮಾಡಿದೆ. ಮೃತಪಟ್ಟವರು ಅಂಕೋಲಾ ತಾಲೂಕಿನ ಅವರ್ಸಾದವರು ಎಂದು ತಿಳಿದುಬಂದಿದೆ.

ಮೃತ ಗುರುಪ್ರಸಾದ, ವಾಲಿಬಾಲ್ ನಲ್ಲಿ ಸರ್ವಶ್ರೇಷ್ಠ ಆಟಗಾರನಾಗಿ ಗುರುತಿಸಿ ಕೊಂಡಿದ್ದಲ್ಲದೇ, ಕ್ರಿಕೆಟ್ ನಲ್ಲಿಯೂ ತನ್ನ ಪ್ರತಿಭೆ ಮೂಲಕ ಹೆಸರಾಗಿದ್ದ. ಅಪಘಾತದ. ತೀವ್ರತೆಗೆ ಕಾರ್ ಸಂಪೂರ್ಣ ನುಜ್ಜು ಗುಜ್ಜಾಗಿದ್ದು, ಕಾರನಲ್ಲಿ ಪ್ರಯಾಣಿಸುತ್ತಿದ್ದ ಉಳಿದ ನಾಲ್ವರಿಗೆ ಪೆಟ್ಟಾಗಿದ್ದು, ಅದ್ರಷ್ಟವಶಾತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೃತ ದೇಹ ಸಾಗಿಸಲು ಸಾಮಾಜಿಕ ಕಾರ್ಯಕರ್ತವಿಜಯ ಕುಮಾರ ನಾಯ್ಕ ಮತ್ತಿತರರು ಸಹಕರಿಸಿದರು. ಮರಣೋತ್ತರ ಪರೀಕ್ಷ ನಡೆಸಿ ಮೃತದೇಹವನ್ನು ಮನೆಗೆ ತಂದಾಗ, ಕುಟುಂಬಸ್ಥರು ಮತ್ತು ಊರ ನಾಗರಿಕರ ದುಃಖದ ಕಟ್ಟೆ ಒಡೆದು, ಆಕ್ರಂದನ ಮುಗಿಲು ಮುಟ್ಟಿತ್ತು.

ಪುಟಾಣಿ ಸಂಜನಾಳ ಸಾವಿನ ದುಃಖ ಎಂಥವರಿಗೂ ಕರಳು ಚುರ್ ಎನ್ನದಿರದು. ಹಬ್ಬ ಆಚರಿಸಿ ಸಂಭ್ರಮ ಪಡಬೇಕಿದ್ದ ಮನೆಯಲ್ಲಿ, ಸೂತಕದ ಕರಾಳ ಛಾಯೆ ಆವರಿಸಿದ್ದು, ವಿಧಿಯಾಟದ ಮುಂದೆ ಎಲ್ಲವೂ ಗೌಣ ಎನ್ನುವಂತಾಗಿದೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಹೆದ್ದಾರಿ ಗಸ್ತು ವಾರ್ಹದ ಸಿಬ್ಬಂದಿಗಳು , cpi ಕೃಷ್ಣಾನಂದ ನಾಯಕ, ಪಿಎಸೈ ಈ ಸಿ. ಸಂಪತ್ ಘಟನಾ ಸ್ಥಳಕ್ಕೆ ತೆರಳಿ, ಸ್ಥಳೀಯರ ಸಹಕಾರದಲ್ಲಿ ಗಾಯಾಳುಗಳನ್ನು ಅಸ್ಪತೈಗೆ ಸಾಗಿಸಿದರು.         

ಅಂಕೋಲಾ ತಾಲೂಕಿನಲ್ಲಿ ಹಾದು ಹೋಗಿರುವ ರಾ ಹೆ 63ರಲ್ಲಿ ಇತ್ತೀಚೆಗೆ ಹೆಚ್ಚಿನ ಅಪಘಾತದ ಸುದ್ದಿಗಳು ಕೇಳಿ ಬರುತ್ತಿವೆ. ಈ ನಡುವೆ ತಾಲೂಕು ವ್ಯಾಪ್ತಿಯ ಅಡ್ಲೂರು, ಅಗಸೂರು, ಸುಂಕಸಾಳ, ಹೆಬ್ಬುಳ, ಮಾಸ್ತಿಕಟ್ಟೆ ಮತ್ತಿತರೆಡೆ ಕಳೆದ ಕೆಲ ದಿನಗಳಲ್ಲಿಯೇ  ಹೆಚ್ಚಿನ  ಅಪಘಾತ ಘಟಿಸಿದ್ದು,, ಸಾವು- ನೋವುಗಳ ಪ್ರಕರಣ ಹೆಚ್ಚಿದೆ.  ಹೆದ್ದಾರಿ ಸಂಚಾರದ ವೇಳೆ ಹೆಚ್ಚಿನ ಜಾಗರೂಕತೆ ತೆಗೆದುಕೊಂಡು ಸುರಕ್ಷಿತ ಚಾಲನೆಗೆ ಒತ್ತು ನೀಡುವಂತೆ ಮೋಲೀಸ್ ಇಲಾಖೆ ತಿಳಿಸಿದೆ.           

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

Back to top button