Trending

ನೀರಿಗಾಗಿ ನೀರೆಯರ ನಿಲ್ಲದ ಪರದಾಟ: ಮಿರ್ಜಾನ ಗ್ರಾ ಪಂ ಮುಂದೆ ಪ್ರತಿಭಟನೆಗೆ ನಿರ್ಧಾರ

ಮಿರ್ಜಾನ: ಇಲ್ಲಿನ ಗ್ರಾಮ ಪಂ ವ್ಯಾಪ್ತಿಯ ರಾಮ ನಗರದ ಸನಿಹ ವಿರುವ ಕಬ್ಗಾಲ್‌ಜಡ್ಡಿ ಪುಟ್ಟ ಗುತ್ತಲಗ್ರಾಮ ಈ ಗ್ರಾಮದಲ್ಲಿ 20 ನೆಗಳಿದ್ದು ಪ್ರತಿ ವರ್ಷ ಬೆಸಿಗೆಯಲ್ಲಿ ನೀರಿನ ತುಟ್ಟಾಗ್ರತೆಇದ್ದರೂ ಬಡ ಜನರಿಗಾಗುವ ತೊಂದರೆಯನ್ನು ಮಿರ್ಜಾನ ಗ್ರಾ ಪಂ ಪರಿಹರಿಸುತ್ತಿಲ್ಲವೆಂದು ಈ ಭಾಗದ ಮಹಿಳೆಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಕಬ್ಗಾಲ್‌ಜಡ್ಡಿ ಸನಿಹವೇ ರಾಮನಗರವಿದೆ, ಅಲ್ಲಿ ನಿರಂತರ 3 ತಾಸು ನೀರು ಹರಿಸಲಾಗುತ್ತದೆ. ಕಬ್ಗಾಲ್‌ಜಡ್ಡಿಯ ಬಡ ಜನರಾದ ನಮಗೆ ಓಟು ಹಾಕುವ ಸಮಯ ಮಾತ್ರ ಬಳಸಿಕೊಳ್ಳುತ್ತಾರೆ. ಓಟು ಪಡೆದು ಆಯ್ಕೆಯಾದಮೇಲೆ ನಮ್ಮ ಸಮಸ್ಯೆಗೆ ಸ್ಪಂದಿಸುವವರೇ ಇಲ್ಲ ಪ್ರಜೆಗಳಾದ ನಮಗೆ ಓಟು ಹಾಕಲು ಮಾತ್ರ ಅಧಿಕಾರ ನೀರು ಪಡೆಯುವ ಆಧಿಕಾರ ಇಲ್ಲವೆ ಎಂದು ನೋವಿನಿಂದ ನುಡಿಯುತ್ತಾರೆ.

ಬೆಸಿಗೆ ಆರಂಭಕ್ಕು ಮೊದಲು 3 ತಿಂಗಳ ಹಿಂದೆಯೇ ಇಲ್ಲಿಯ ಮಹಿಳೆಯರೆಲ್ಲ ಸೇರಿ ಲಿಖಿತ ಮನವಿಯನ್ನು ಮಿರ್ಜಾನ ಗ್ರಾ ಪಂ ಗೆ ನೀಡಿದ್ದೇವೆ, ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಿಂದ ಅರ್ಜಿಗೆ ಸಂಬoಧಿಸಿದoತೆ ಪಿ.ಡಿ.ಓ ಆಗಲಿ, ಈ ಭಾಗದ ಗ್ರಾ ಪಂ ಸದಸ್ಯರೇ ಆಗಲಿ ಭೇಟಿ ನೀಡಿ ಇಲ್ಲಿನ ಜನರ ಸಮಸ್ಯೆ ಪರಿಶೀಲನೆ ನಡೆಸಿಲ್ಲವೆಂದು ದೂರಿದ್ದಾರೆ.

ಕಬ್ಗಾಲ್‌ಜಡ್ಡಿಯ 20 ಮನೆಗಳಿಗೆ ಕೇವ 30 ನಿಮಿಷ ನೀರು ಪೂರೈಸಲಾಗುತ್ತಿದೆ, ಒಮ್ಮೊಮ್ಮೆ 10 ನಿಮಿಷಕ್ಕೆ ಕರಂಟ್ ಹೋಯಿತೆಂದು ನೀರನ್ನು ಸ್ಥಗಿತಗೊಳಿಸಲಾಗುತ್ತದೆ. ಕರಂಟ ಬಂದಮೇಲಾದರೂ, ಸಮರ್ಪಕವಾಗಿ ನೀರು ಪೂರೈಸಬಾರದೇ? ಎಂದು ಪ್ರಶ್ನಿಸುವ ಮಹಿಳೆಯರು ಕಬ್ಗಾಲ್‌ಜಡ್ಡಿಯಲ್ಲಿ ಸರಕಾರಿ ಬಾವಿ ಇದ್ದು ಆ ಬಾವಿಯಲ್ಲಿ ನೀರಿದ್ದರು ಅದನ್ನು ಪಂಚಾಯತ ಸ್ವಚ್ಚಗೊಳಿಸದೆ ಹಾಳುಗೆಡವಿದೆ. ಪರೀಸ್ಥಿತಿ ಇದೇ ರೀತಿಯಲ್ಲಿ ಮುಂದುವರಿದರೆ ಮಿರ್ಜಾನ ಗ್ರಾ ಪಂ ಎದುರು ಪ್ರತಿಭಟನೆ ನಡೆಸುವುದಾಗಿ ಅನಿತಾ, ರೂಜಾಯಿ, ಫಾತಿಮಾ ಜೂಲೆಟ್, ಆಶಿಸಾಂವ, ಮಾಂತೋಲಿನ್ ಹಾಗೂ ಮುಂತಾದ ಮಹಿಳೆಯರು ಎಚ್ಚರಿಸಿದರು.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

ವಿಸ್ಮಯ ನ್ಯೂಸ್, ಕುಮಟಾ

Back to top button