ಕರ್ನಾಟಕ ವಿವಿ ಬಿ.ಕಾಮ್ ವಿಭಾಗ: ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿಗೆ ರ‍್ಯಾಂಕ್

ಭಟ್ಕಳ: ಕರ್ನಾಟಕ ವಿಶ್ವವಿದ್ಯಾಲಯ 2020 ರಲ್ಲಿ ನಡೆಸಿದ ಬಿ.ಕಾಂ ಪರೀಕ್ಷೆಯಲ್ಲಿ ಭಟ್ಕಳ ಶ್ರೀ ಗುರು ಸುಧೀಂದ್ರ ಬಿ.ಕಾಂ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ರೋಹಿಣಿ ಮೊಗವೀರ ಶೇ 94.68 ಪಡೆದು ವಿಶ್ವವಿದ್ಯಾಲಯದ ಬಿ.ಕಾಂ ವಿಭಾಗದಲ್ಲಿ 7ನೇ ರ‍್ಯಾಂಕ್ ಪಡೆದಿದ್ದಾರೆ.. ವಿದ್ಯಾರ್ಥಿನಿಯ ಈ ಸಾಧನೆಯಿಂದ ಭಟ್ಕಳ ತಾಲೂಕು ಹೆಮ್ಮೆ ಪಡುವಂತಾಗಿದೆ. ಈ ಯುವಪ್ರತಿಭೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಚಾರ್ಯರು, ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

ವಿಸ್ಮಯ ನ್ಯೂಸ್, ಭಟ್ಕಳ

Exit mobile version