ಕೊವಿಡ್ ನಿಯಂತ್ರಣಕ್ಕೆ ಕ್ರಮ: ಉತ್ತರಕನ್ನಡದ 19 ಗ್ರಾಮ ಪಂಚಾಯತಿಗಳನ್ನು ವಿಶೇಷ ಕಂಟೈನ್ಮೆಂಟ್ ವಲಯವಾಗಿ ಘೋಷಣೆ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕರೊನಾ ನಿಯಂತ್ರಣಕ್ಕಾಗಿ ಹಲವಾರು ಕ್ರಮಕೈಗೊಳ್ಳಲಾಗುತ್ತಿದೆ. ವಾಹನ ಸಂಚಾರ‌ ನಿರ್ಬಂಧದ ಮಧ್ಯೆಯೇ ಜಿಲ್ಲೆಯಾದ್ಯಂತ ಹೆಚ್ಚು ಕೊವಿಡ್ ರೋಗಿಗಳನ್ನು ಹೊಂದಿರುವ 19 ಪಂಚಾಯತಗಳನ್ನು ವಿಶೇಷ ಕಂಟೈನ್ಮೆಂಟ್ ವಲಯಗಳನ್ನಾಗಿ ಗುರುತಿಸಲಾಗಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ ಮಾಹಿತಿ‌ ನೀಡಿದ್ದಾರೆ.

ಕಾರವಾರದ ಚಿತ್ತಾಕುಲ, ಮಲ್ಲಾಪುರ, ಹೊನ್ನಾವರದ ಕರ್ಕಿ, ಭಟ್ಕಳದ ಶಿರಾಲಿ, ಶಿರಸಿಯ ಬನವಾಸಿ, ಸಿದ್ದಾಪುರದ ಅಣಲೆಬೈಲ್, ಮನ್ಮನೆ ಮತ್ತು ಕೋಲಸಿರ್ಸಿ, ಅಂಕೋಲಾದ ಬಬ್ರುವಾಡ, ಹಿಲ್ಲೂರು, ಯಲ್ಲಾಪುರದ ಮಾವಿನಮನೆ, ಉಮ್ಮಚಗಿ ಮತ್ತು ನಂದೊಳ್ಳಿ, ಜೋಯ್ಡಾ ತಾಲೂಕಿನ ರಾಮನಗರ ಮತ್ತು ಅಖೇತಿ, ಮುಂಡಗೋಡಿನ ಇಂದೂರು, ದಾಂಡೇಲಿಯ ಅಂಬೇವಾಡಿ ಹಾಗು ಅಂಬಿಕಾನಗರ ಹಳಿಯಾಳದ ಮುರ್ಕವಾಡ ಗ್ರಾಮ ಪಂಚಾಯತಗಳನ್ನು ವಿಶೇಷ ಕಂಟೈನ್ಮೆಂಟ್ ವಲಯಗಳನ್ನಾಗಿ ಘೋಷಣೆ ಮಾಡಲಾಗಿದೆ.

ಈ ಪ್ರದೇಶಗಳಲ್ಲಿ ಗ್ರಾಮ ಪಂಚಾಯತಿಗಳು ಸೋಂಕಿನ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಕಠಿಣ ಕ್ರಮಗಳನ್ನು ಜರುಗಿಸಬೇಕೆಂದು ‌ಶಿವರಾಮ್‌ ಹೆಬ್ಬಾರ್ ಸೂಚನೆ‌‌ ನೀಡಿದ್ದಾರೆ.

ವಿಸ್ಮಯ ನ್ಯೂಸ್ ಕಾರವಾರ

Exit mobile version