ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಸೋಮವಾರ 987 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಸಿದ್ದಾಪುರದಲ್ಲಿ ಅತಿಹೆಚ್ಚು ಅಂದರೆ 272 ಸೋಂಕು ಕಾಣಿಸಿಕೊಂಡಿದೆ.
ಉಳಿದಂತೆ ಕಾರವಾರದಲ್ಲಿ 80, ಅಂಕೋಲಾದಲ್ಲಿ 27, ಕುಮಟಾದಲ್ಲಿ 145, ಶಿರಸಿಯಲ್ಲಿ 66, ಸಿದ್ದಾಪುರದಲ್ಲಿ 272 , ಯಲ್ಲಾಪುರದಲ್ಲಿ 79, ಹೊನ್ನಾವರ 102, ಭಟ್ಕಳದಲ್ಲಿ 18, ಮುಂಡಗೋಡ 97, ಹಳಿಯಾಳದಲ್ಲಿ 83, ಮತ್ತು ಜೋಯಿಡಾದಲ್ಲಿ 18 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಇದೇ ವೇಳೆ ಜಿಲ್ಲೆಯಲ್ಲಿ ಕೋವಿಡ್ ನಿಂದಾಗಿ ಸೋಮವಾರ 15 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 409ಕ್ಕೆ ಏರಿಕೆಯಾಗಿದೆ.
ಶಿರಸಿ 2, ಸಿದ್ದಾಪುರ 2, ಮುಂಡಗೋಡ 4, ಹಳಿಯಾಳ 5, ಜೋಯ್ಡಾ 2 ಸಾವಾಗಿದ್ದು ಒಟ್ಟು 15 ಸೋಂಕಿತರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 7202ಕ್ಕೆ ಏರಿಕೆಯಾಗಿದೆ.
ವಿಸ್ಮಯ ನ್ಯೂಸ್ ಕಾರವಾರ