Follow Us On

WhatsApp Group
Focus News
Trending

ಉತ್ತರಕನ್ನಡದಲ್ಲಿ ಕಡಿಮೆಯಾಗುತ್ತಿದೆ ಕೋವಿಡ್ ಆತಂಕ: ಸಾವಿನ ಸಂಖ್ಯೆಯಲ್ಲೂ ಗಣನೀಯ ಇಳಿಕೆ

ಕಾರವಾರ : ಉತ್ತರಕನ್ನಡದಲ್ಲಿ ಇಂದು 346 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಕಾರವಾರದಲ್ಲಿ 41, ಅಂಕೋಲಾದಲ್ಲಿ 15, ಕುಮಟಾದಲ್ಲಿ 28, ಹೊನ್ನಾವರ 59, ಭಟ್ಕಳದಲ್ಲಿ 32, ಶಿರಸಿಯಲ್ಲಿ 79, ಸಿದ್ದಾಪುರದಲ್ಲಿ 19 , ಯಲ್ಲಾಪುರದಲ್ಲಿ 18, ಮುಂಡಗೋಡ 21, ಹಳಿಯಾಳದಲ್ಲಿ 33, ಮತ್ತು ಜೋಯಿಡಾದಲ್ಲಿ 1 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇದೇ ವೇಳೆ ಇಂದು ಜಿಲ್ಲೆಯಾದ್ಯಂತ ಆರು ಮಂದಿ ಮೃತಪಟ್ಟಿದ್ದಾರೆ. ಅಂಕೋಲಾ 1,ಭಟ್ಕಳ 3, ಶಿರಸಿ 1, ಮುಂಡಗೋಡ 1, ಹಳಿಯಾಳ 1, ಸಾವಾಗಿದ್ದು ಒಟ್ಟು 6‌ ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಒಟ್ಟು 650 ಕ್ಕೆ ಏರಿಕೆಯಾಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button