Follow Us On

WhatsApp Group
Important
Trending

ಅಕ್ಕನ ಮನೆಗೆ ಶಿಪ್ಟ್ ಗೆ ಬಂದ ವೇಳೆ ದುರಂತ : ಸೆಲ್ಪಿ ತೆಗೆಯುವ ವೇಳೆ ಕಾಲುಜಾರಿಬಿದ್ದ ಯುವಕನ ಮೃತದೇಹ ಪತ್ತೆ

ಕುಮಟಾ: ಸೆಲ್ಫಿ ತೆಗೆಯುವಾಗ ಎಚ್ಚರತಪ್ಪಿದ್ರೆ ಅಪಾಯ ತಪ್ಪಿದ್ದಲ್ಲ. ಇಲ್ಲೂ ಕೂಡಾ ಇಂತಹದೇ ಘಟನೆ ನಡೆದಿದೆ. ಹೌದು, ಗುರುವಾರದಂದು ಕುಮಟಾ ಕಡಲತೀರದಲ್ಲಿ ಸೆಲ್ಪಿ ತೆಗೆಯಲು ಹೋಗಿ ಕಾಲು ಜಾರಿ ಬಿದ್ದು ಯುವಕ ನೀರಿನಲ್ಲಿ ಕಣ್ಮರೆಯಾಗಿದ್ದ. ಆದರೆ ಆತನ ಮೃತ ದೇಹವು ಇಂದು ಬೆಳಿಗ್ಗೆ ಅಳ್ವೇದಂಡೇಯ ಕಡಲ ತೀರದ ಬಳಿ ದೊರೆತಿದೆ.

ಮೃತ ವ್ಯಕ್ತಿಯನ್ನು ಕೊಪ್ಪಳದ ಹೊಸಲಿಂಗಪುರ ನಿವಾಸಿ ಅಭಿಷೇಕ್ ಹನುಮಂತ ಬೋಮ್ ಎಂದು ಗುರುತಿಸಲಾಗಿದೆ. ಈತ ತನ್ನ ಅಕ್ಕನ ಮನೆಗೆ ಬಂದಿದ್ದ. ಈತನ ಅಕ್ಕ ಭಟ್ಕಳ ಸ್ಟೇಟ್ ಬ್ಯಾಂಕ್ ನಿಂದ ಕುಮಟಾಕ್ಕೆ ವರ್ಗಾವಣೆಯಾಗಿದ್ದಳು. ಹೀಗಾಗಿ ಅಕ್ಕನಿಗೆ ಸಹಾಯ ಮಾಡಲು ರೂಮ್ ಖಾಲಿಮಾಡಿ ಸಮಾನುಗಳನ್ನು ಶಿಫ್ಟ್ ಮಾಡಲು ಬಂದಿದ್ದ. ಕೋವಿಡ್ ಲಾಕ್‌ಡೌನ್ ಕಾರಣ ಊರಿಗೆ ಮರಳಲು ಸಾಧ್ಯವಾಗದೇ ಕುಮಟಾದಲ್ಲಿಯೇ ಉಳಿದುಕೊಂಡಿದ್ದ.

ಈ ವೇಳೆ ಕುಮಟಾದ ಕಡಲತೀರಕ್ಕೆ ತೆರಳಿದ್ದಾನೆ. ಅಲ್ಲಿ ಬಂಡೆಗಲ್ಲಿನ ಮೇಲೆ ನಿಂತು ಸೆಲ್ಫಿ ತೆಗೆಯಲು ಮುಂದಾಗಿದ್ದು, ಈ ವೇಳೆ ಅನಾಹುತವಾಗಿದೆ. ಆಕಸ್ಮಿಕವಾಗಿ ಕಾಲು ಜಾರಿಬಿದ್ದು, ಸಮುದ್ರ ಪಾಲಾಗಿದ್ದಾನೆ. ಈ ವೇಳೆ ಸ್ಥಳೀಯರು ಮಾಹಿತಿ ನೀಡಿದ್ದರು.

ವಿಸ್ಮಯ ನ್ಯೂಸ್, ಕುಮಟಾ

Back to top button