ದೇವಸ್ಥಾನದಲ್ಲಿದ್ದ ಕಾಣಿಕೆ ಡಬ್ಬಿಯಲ್ಲಿನ ಹಣವನ್ನು ಕಳುವು ಯತ್ನ: ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳನ್ನು ನೋಡಿ
ಭಟ್ಕಳ: ಇಲ್ಲಿನ NH 66 ರ ಕೋಟೇಶ್ವರ ನಗರದಲ್ಲಿರುವ ತಾಲ್ಲೂಕಿನ ಶಕ್ತಿದೇವತೆ ಎಂದೇ ಹೆಸರಾಗಿರುವ ಶ್ರೀ ದಂಡಿನ ದುರ್ಗಾ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನ ನಡೆದಿದ್ದು,ದೇಗುಲದಲ್ಲಿ ಅಳವಡಿಸಿರುವ ಸಿ.ಸಿ. ಕ್ಯಾಮೆರಾದಲ್ಲಿ ಕಳ್ಳನ ದೃಶ್ಯಗಳನ್ನು ಸೆರೆ ಯಾಗಿದ ಘಟನೆ ನಡೆದಿದೆ.
ಮಧ್ಯರಾತ್ರಿ ಕಳ್ಳನೋರ್ವ ದೇವಸ್ಥಾನದ ಹಿಂಬದಿಯ ಬಾಗಿಲನ್ನು ತೆರೆದು ಒಳಪ್ರವೇಶಿಸಿ ಕಳ್ಳತನಕ್ಕೆ ಯತ್ನಿಸಿದ್ದು ನಂತರ ದೇವಸ್ಥಾನಕ್ಕೆ ಅಳವಡಿಸಿದ ಸಿ.ಸಿ ಕ್ಯಾಮರಾವನ್ನು ಗಮನಿಸಿದ ಆತ ಸಿಸಿಟಿವಿ ಕ್ಯಾನರ ಒಡೆದು ಹಾನಿಪಡಿಸಿದ್ದಾನೆ. ಈ ವೇಳೆ ದೇವಸ್ಥಾನದಲ್ಲಿದ್ದ ಕಾಣಿಕೆ ಡಬ್ಬಿಯಲ್ಲಿನ ಹಣವನ್ನು ಕಳುವು ಮಾಡಲು ಪ್ರಯತ್ನಿಸಿದಾನೆ.
ಕಾಣಿಕೆ ಹುಂಡಿಗಳನ್ನು ತೆರೆಯಲು ಆಗದೆ ಇರುವ ಕಾರಣ ಯಾವ ವಸ್ತು, ನಗ-ನಾಣ್ಯವೂ ದೊರಕದಿದ್ದರಿಂದ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಕಳ್ಳತನಕ್ಕೆ ಯತ್ನಿಸಿದ ಕಳ್ಳತನದ ದ್ರಶ್ಯಗಳು ಸಿ.ಸಿ.ಟಿ ಯಲ್ಲಿ ಸೆರೆಯಾಗಿದೆ.
ಕಳ್ಳನು ಬಹುತೇಕ ಮುಖ ಮುಚ್ಚಿಕೊಂಡಿದ್ದ ಕಾರಣ ಗುರುತು ಪತ್ತೆ ಹಚ್ಚಲು ಕಷ್ಟಕರವಾಗಿದ್ದು. ದೇವಸ್ಥಾನದ ದೃಶ್ಯಾವಳಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬOಧ ನಗರ ಪೊಲೀಸ್ ಠಾಣೆಯಲ್ಲಿ ಮೋಹನ ಶಿರಾಲೇಕರ ದೂರು ನೀಡಿದ್ದು ದೂರು ದಾಖಲಿಸಿ ಕೊಂಡ ಪಿ.ಎಸ್.ಐ ಹೆಚ್.ಕುಗುಂಟಿ ತನಿಖೆ ಕೈಗೊಂಡಿದ್ದಾರೆ. ಕಳೆದ ವರ್ಷ ಕೂಡ ಈ ದೇವಸ್ಥಾನದಲ್ಲಿ ಒಂದು ಬಾರಿ ಕಳ್ಳತನ ನಡೆಡಿದ್ದು ದೇವಸ್ಥಾನದ ಹುಂಡಿ ಒಡೆದು ನಗುದು ದೋಚಿ ಕಳ್ಳರು ಪರಾರಿಯಾಗಿದ್ದು ಕಳ್ಳನ ಸುಳಿವು ಸಿಕ್ಕಿರಲ್ಲಿ. ಬಳಿಕ ದೇವಸ್ಥಾನದಲ್ಲಿ ಸಿಸಿಟಿವಿ ಅಳವಡಿಸಿದ್ದರು. ಈ ಬಾರಿಯಾದರು ಕಳ್ಳರು ಸಿಕ್ಕಿಬೀಳುತ್ತಾರೋ ಕಾದು ನೋಡಬೇಕಿದೆ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ
ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..