Follow Us On

WhatsApp Group
Focus News
Trending

ಉತ್ತರಕನ್ನಡದಲ್ಲಿ‌ ಕಡಿಮೆಯಾದ ಕೋವಿಡ್ ಸೋಂಕು: ಇಂದು ಮೂವರ ಸಾವು: 94 ಮಂದಿ ಗುಣಮುಖರಾಗಿ ಬಿಡುಗಡೆ

ಕಾರವಾರ: ಉತ್ತಕನ್ನಡದಲ್ಲಿ ನಿಧಾನವಾಗಿ ಕೋವಿಡ್ ಆತಂಕ ಕಡಿಮೆಯಾಗುತ್ತಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದ್ದು, ಇಂದು ಜಿಲ್ಲೆಯಲ್ಲಿ 59 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಶಿರಸಿಯಲ್ಲಿ 14, ಸಿದ್ದಾಪುರದಲ್ಲಿ 0, ಯಲ್ಲಾಪುರದಲ್ಲಿ 4, ಹೊನ್ನಾವರ 12, ಭಟ್ಕಳದಲ್ಲಿ 5, ಮುಂಡಗೋಡ 1, ಹಳಿಯಾಳದಲ್ಲಿ 2, ಮತ್ತು ಜೋಯಿಡಾದಲ್ಲಿ 0 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇದೇ ವೇಳೆ ಇಂದು ಜಿಲ್ಲೆಯಲ್ಲಿ 94 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕುಮಟಾ 26, ಹೊನ್ನಾವರ 16, ಭಟ್ಕಳ 03, ಶಿರಸಿ 10, ಸಿದ್ದಾಪುರ 4, ಕಾರವಾರ 3, ಅಂಕೋಲಾ 8, ಯಲ್ಲಾಪುರ 0, ಮುಂಡಗೋಡ 7, ಹಳಿಯಾಳ 17 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಇನ್ನೊಂದೆಡೆ ಜಿಲ್ಲೆಯಲ್ಲಿ ಇಂದು ಮೂವರು ಸಾವನ್ನಪ್ಪಿದ್ದು, ಕುಮಟಾ, ಹೊನ್ನಾವರ, ಭಟ್ಕಳದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ನಿಂದ ಸಾವನ್ನಪ್ಪಿದವರ ಸಂಖ್ಯೆ 703ಕ್ಕೆ ಏರಿಕೆಯಾಗಿದೆ.

ಅಂಕೋಲಾದಲ್ಲಿಂದು 3 ಪಾಸಿಟಿವ್ ಕೇಸ್.  ಸಕ್ರಿಯ 26:ಮತ್ತೆ ಲಸಿಕೆ ಕೊರತೆ ? ಗುರುವಾರ ವ್ಯಾಕ್ಸಿನೇಶನ್ ಇಲ್ಲಾ!

ಅಂಕೋಲಾ ಜೂ 30: ತಾಲೂಕಿನಲ್ಲಿ ಬುಧವಾರ 3 ಹೊಸ ಕೋವಿಡ್ ಕೇಸ ದಾಖಲಾಗಿದ್ದು ಒಟ್ಟೂ 26ಪ್ರಕರಣಗಳು ಸಕ್ರಿಯವಾಗಿದೆ.                                                  

ಸೋಂಕು ಮುಕ್ತರಾದ 8ಜನರನ್ನು ಬಿಡುಗಡೆ ಗೊಳಿಸಲಾಗಿದೆ. ಒಟ್ಟು 8 ಸೋಂಕಿತರು  ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೋಂ ಐಸೋಲೇಶನ್ ನಲ್ಲಿ 18 ಜನರಿದ್ದಾರೆ. ಕರೊನಾದಿಂದಾಗಿ ಈ ವರೆಗೆ ತಾಲೂಕಿನಲ್ಲಿ ಒಟ್ಟೂ 58 ಸಾವಿನ ಪ್ರಕರಣಗಳು ದಾಖಲಾಗಿವೆ.

ಲಸಿಕೆ ಕೊರತೆ ಮತ್ತಿತರ ಕಾರಣಗಳಿಂದ ಗುರುವಾರ  ವ್ಯಾಕ್ಸಿನೇಶನ್ ಕಾರ್ಯಕ್ಕೆ ಹಿನ್ನಡೆಯಾಗಲಿದ್ದು, ಲಸಿಕೆ ಪೂರೈಕೆಯಾದ ಬಳಿಕ ವ್ಯಾಕ್ಸಿನೇಶನ್ ಆರಂಭಿಸಲಾಗುತ್ತದೆ. ತಾಲೂಕಿನ ಜನತೆ ಅಲ್ಲಿಯವರೆಗೆ ಕಾದು ಸಹಕರಿಸುವಂತೆ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಲಯದ ಪ್ರಕಣಣೆಯಲ್ಲಿ ತಿಳಿಸಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

Back to top button