Follow Us On

WhatsApp Group
Big News
Trending

ತೂಗು ಸೇತುವೆಯೊಂದಿಗೆ ಕೊಚ್ಚಿಹೋದ ಬದುಕು: ಇವರ ಗೋಳು ಹೇಳತೀರದು

ಕಾರವಾರ: ನದಿಯಂಚಿನ ಗ್ರಾಮಗಳಿಗೆ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಆ ಭಾಗದಲ್ಲಿ ತೂಗುಸೇತುವೆಯೊಂದನ್ನ ನಿರ್ಮಾಣ ಮಾಡಲಾಗಿತ್ತು. ತೂಗುಸೇತುವೆಯಿಂದಾಗಿ ಆ ಭಾಗದ ಹತ್ತಾರು ಗ್ರಾಮಗಳ ಜನರಿಗೆ ಓಡಾಟಕ್ಕೆ ಸಾಕಷ್ಟು ಅನುಕೂಲ ಕೂಡ ಆಗಿತ್ತು. ಆದ್ರೆ ಕಳೆದೆರಡು ವರ್ಷಗಳ ಹಿಂದೆ ಅಪ್ಪಳಿಸಿದ ಭಾರೀ ಪ್ರಮಾಣದ ನೆರೆಗೆ ತೂಗುಸೇತುವೆ ಕೊಚ್ಚಿಹೋಗಿದ್ದು ಎರಡು ವರ್ಷದಿಂದ ಗ್ರಾಮಸ್ಥರಿಗೆ ಮತ್ತೆ ದೋಣಿ ಓಡಾಟವೇ ಗತಿ ಎನ್ನುವಂತಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಇಂತಹದೊಂದು ದಯನೀಯ ಸ್ಥಿತಿ ಎದುರಾಗಿರುವುದು ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ರಾಮನಗುಳಿ ಗ್ರಾಮದಲ್ಲಿ. ಗ್ರಾಮದ ಜನರ ಓಡಾಟಕ್ಕೆ ಆಸರೆಯಾಗಿದ್ದ ತೂಗುಸೇತುವೆ ಕೊಚ್ಚಿಹೋಗಿ ಎರಡು ವರ್ಷ ಕಳೆದಿದ್ದು ಗ್ರಾಮಸ್ಥರು ದೋಣಿಯಲ್ಲೇ ಓಡಾಡಬೇಕಾದ ಸ್ಥಿತಿ ಎದುರಾಗಿದೆ.

ರಾಮನಗುಳಿ ಗ್ರಾಮದಲ್ಲಿ ಹರಿಯುವ ಗಂಗಾವಳಿ ನದಿಗೆ ಹೊಂದಿಕೊಂಡು ಹತ್ತಾರು ಗ್ರಾಮಗಳಿವೆ. ದ್ವೀಪದಂತಿರುವ ಈ ಗ್ರಾಮಗಳಿಗೆ ತೆರಳಲು ದೋಣಿಯೊಂದೇ ಆಧಾರವಾಗಿದ್ದು ಈ ಭಾಗದ ಗ್ರಾಮಸ್ಥರಿಗೆ ಅನುಕೂಲವಾಗಲೀ ಎನ್ನುವ ಉದ್ದೇಶದಿಂದ ರಾಮನಗುಳಿಯಿಂದ ಕಲ್ಲೇಶ್ವರ ಗ್ರಾಮಕ್ಕೆ 2011ರಲ್ಲಿ ತೂಗುಸೇತುವೆಯೊಂದನ್ನ ನಿರ್ಮಾಣ ಮಾಡಲಾಗಿತ್ತು. ಇದರಿಂದ ಈ ಭಾಗದ ಗ್ರಾಮಗಳ ಜನರಿಗೆ ಸಾಕಷ್ಟು ಅನುಕೂಲವಾಗಿದ್ದು ಕೆಲಸಕ್ಕೆ ತೆರಳಲು ಸಹ ಸಾಕಷ್ಟು ಹತ್ತಿರದ ಸುರಕ್ಷಿತ ಮಾರ್ಗವಾಗಿತ್ತು.

ಆದರೆ 2019ರಲ್ಲಿ ಸುರಿದ ಧಾರಾಕಾರ ಮಳೆಗೆ ಗಂಗಾವಳಿ ನದಿ ಉಕ್ಕಿ ಹರಿದಿದ್ದು ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ತೂಗುಸೇತುವೆ ಸಂಪೂರ್ಣ ಕೊಚ್ಚಿ ಹೋಗಿದೆ. ಇದರಿಂದಾಗಿ ಕಳೆದೆರಡು ವರ್ಷಗಳಿಂದ ಈ ಭಾಗದ ಗ್ರಾಮಸ್ಥರಿಗೆ ಮತ್ತೆ ದೋಣಿ ಮೇಲೇ ಓಡಾಡಬೇಕಾದ ಪರಿಸ್ಥಿತಿ ಎದುರಾಗಿದ್ದು ನಮಗೊಂದು ಸೇತುವೆ ಕಟ್ಟಿಕೊಡಿ ಎಂದು ಇಲ್ಲಿನ ಸ್ಥಳೀಯರು ಮನವಿ ಮಾಡಿದ್ದಾರೆ.

ಇನ್ನು ಗಂಗಾವಳಿ ನದಿಯ ಇನ್ನೊಂದೆಡೆ ಕಲ್ಲೇಶ್ವರ, ಹೆಗ್ಗಾರ, ಕಮ್ಮಾಣಿ, ಹಳವಳ್ಳಿ ಸೇರಿದಂತೆ ಸಾಕಷ್ಟು ಗ್ರಾಮಗಳಿವೆ. ಈ ಗ್ರಾಮಗಳಿಂದ ಅಂಕೋಲಾ ಅಥವಾ ಯಲ್ಲಾಪುರಕ್ಕೆ ತೆರಳಬೇಕಾದಲ್ಲಿ ನದಿ ದಾಟಲೇಬೇಕಾಗಿರುವುದು ಅನಿವಾರ್ಯವಾಗಿದೆ.

ಅಲ್ಲದೇ ರಾಮನಗುಳಿ ಭಾಗದಿಂದ ಸಾಕಷ್ಟು ಮಂದಿ ಕಲ್ಲೇಶ್ವರ ಗ್ರಾಮಕ್ಕೆ ಕೆಲಸಕ್ಕೂ ತೆರಳುವುದರಿಂದ ತೂಗು ಸೇತುವೆ ನಿರ್ಮಾಣವಾಗಿದ್ದು ಸಾಕಷ್ಟು ಅನುಕೂಲವಾಗಿತ್ತು. ಅಲ್ಲದೇ ಶಾಲಾ, ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳಿಗೂ ತೂಗು ಸೇತುವೆ ಸುರಕ್ಷಿತ ಮಾರ್ಗವಾಗಿತ್ತು.

ಆದರೆ ಇದೀಗ ದೋಣಿಯಲ್ಲಿಯೇ ನದಿಯನ್ನ ದಾಟಬೇಕಾದ ಅನಿವಾರ್ಯತೆ ಇದ್ದು ಜೀವ ಕೈಯಲ್ಲಿ ಹಿಡಿದು ಸಾಗಬೇಕು. ಅಲ್ಲದೇ ಮಳೆಗಾಲದಲ್ಲಿ ನದಿ ಮೈದುಂಬಿ ಹರಿಯುವುದರಿಂದ ದೋಣಿ ಓಡಿಸುವುದು ಸದ ಸಾಧ್ಯವಿಲ್ಲವಾಗಿದ್ದು ಜನರು ಹತ್ತಾರು ಕಿಲೋಮೀಟರ್ ಸುತ್ತುವರೆದು ಓಡಾಡಬೇಕಾಗಿದೆ.


ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಈಗಾಗಲೇ ರಾಮನಗುಳಿ ಬಳಿ 25 ಕೋಟಿ ವೆಚ್ಚದಲ್ಲಿ ಶಾಶ್ವತ ಸೇತುವೆ ನಿರ್ಮಾಣಕ್ಕೆ ಕ್ಯಾಬಿನೆಟ್‍ನಲ್ಲಿ ಅನುಮೋದನೆ ಸಿಕ್ಕಿದ್ದು ಶೀಘ್ರದಲ್ಲೇ ಸೇತುವೆ ನಿರ್ಮಾಣವಾಗಲಿದೆ ಎಂದು ಭರವಸೆ ನೀಡಿದ್ದಾರೆ.

ಒಟ್ಟಾರೇ ಹಲವಾರು ಗ್ರಾಮಗಳಿಗೆ ಆಸರೆಯಾಗಿದ್ದ ಸಂಪರ್ಕ ಸೇತುವೆ ಕೊಚ್ಚಿಹೋಗಿ ಜನರು ದೋಣಿ ಓಡಾಟ ನಡೆಸುವಂತಾಗಿರೋದು ನಿಜಕ್ಕೂ ದುರಂತವೇ. ಈ ಬಗ್ಗೆ ಸಂಬಂಧಪಟ್ಟವರು ಕೂಡಲೇ ಗಮನಹರಿಸಿ ಆದಷ್ಟು ಬೇಗ ಸೇತುವೆ ನಿರ್ಮಿಸಿಕೊಡಲು ಮುಂದಾಗಬೇಕಾಗಿದೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

ವಿಸ್ಮಯ ನ್ಯೂಸ್, ಕಾರವಾರ

Back to top button