ಅಂಕೋಲಾದಲ್ಲಿ ಹೆಚ್ಚಿದ ಹೊಸ ಕೊವಿಡ್ ಕೇಸ್ | ಜುಲೈ 15 ರ ಗುರುವಾರ ವ್ಯಾಕ್ಸಿನೇಷನ್ ಇಲ್ಲ.

ಅಂಕೋಲಾ ಜುಲೈ 14: ತಾಲೂಕಿನಲ್ಲಿ ಬುಧವಾರ 12 ಹೊಸ ಕೊವಿಡ್ ಕೇಸಗಳು ದಾಖಲಾಗಿದೆ. ಈ ಮೂಲಕ ಒಟ್ಟೂ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 47 ಕ್ಕೆ ಏರಿಕೆಯಾಗಿದೆ.

ಕಳೆದವಾರ ಸೊಂಕು ಪ್ರಕರಣಗಳು ಇಳಿಮುಖವಾಗುತ್ತ ಸಾಗಿದ್ದು ಕೇವಲ 15 ಸಕ್ರಿಯ ಪ್ರಕರಣಗಳಿದ್ದವು. ಆದರೆ ಈ ವಾರದಲ್ಲಿ ದಿನಗಳೆದಂತೆ ಹೊಸ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಿದೆಯಲ್ಲ ದೆ ,ಇಂದು ದಿನವೊಂದರಲ್ಲಿಯೇ 12 ಹೊಸ ಪಾಸಿಟಿವ್ ಪ್ರಕರಣ ದಾಖಲಾಗಿದೆ.

ಅಂಕೋಲಾ ತಾಲೂಕಾಸ್ಪತ್ರೆ (5), ಕಾರವಾರ ಕ್ರಿಮ್ಸ್ (5), ಸಿರ್ಸಿ (1) ಸೇರಿ ಒಟ್ಟೂ 11 ಸೊಂಕಿತರು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ಲಕ್ಷಣಗಳುಳ್ಳ ಇತರೆ 36 ಜನರು ಹೋಂ ಐಸೋಲೇಶನ್ ನಲ್ಲಿ ಇದ್ದಾರೆ.

ಇಂದು ತಾಲೂಕಿನ ಗ್ರಾಮೀಣ ವ್ಯಾಪ್ತಿಯ ಬೆಲೇಕೇರಿ110), ಅಗಸೂರು (57), ಸುಂಕಸಾಳ (59),ಅಚವೆ (108) ಸೇರಿ ಒಟ್ಟೂ 334 ಡೋಸ್ ಲಸಿಕೆ ನೀಡಲಾಗಿದೆ.ಲಸಿಕೆಗಳ ಪೂರೈಕೆ ವ್ಯತ್ಯಯದಿಂದ ಜುಲೈ 15ರ ಗುರುವಾರ ತಾಲೂಕಿನ ಯಾವುದೇ ಭಾಗಗಳಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆ ನಡೆಸಲಾಗುವುದಿಲ್ಲ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version