ಕಾರವಾರ: ಉತ್ತರಕನ್ನಡದಲ್ಲಿ ಇಂದು 66 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇಂದು ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ.
ಹೊನ್ನಾವರ 4, ಭಟ್ಕಳದಲ್ಲಿ 11,ಕಾರವಾರದಲ್ಲಿ 10, ಅಂಕೋಲಾದಲ್ಲಿ 9, ಕುಮಟಾದಲ್ಲಿ 21, ಶಿರಸಿಯಲ್ಲಿ 7, ಸಯಲ್ಲಾಪುರದಲ್ಲಿ 2, ಮುಂಡಗೋಡ 2 ಕೇಸ್ ಕಾಣಿಸಿಕೊಂಡಿದೆ.
ಇದೇ ವೇಳೆ ಇಂದು ಕಾರವಾರ 4, ಅಂಕೋಲಾ 2, ಕುಮಟಾ 13, ಹೊನ್ನಾವರ 9, ಶಿರಸಿ 9 ಯಲ್ಲಾಪುರ 6 ಮಂದಿ ಕೋವಿಡ್ ನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಅಂಕೋಲಾದಲ್ಲಿ 8ಹೊಸ ಕೊವಿಡ್ ಕೇಸ್: ಜುಲೈ 16 ರಂದು 300 ಡೋಸ್ ಲಸಿಕೆ ನೀಡಿಕೆಗೆ ಕ್ರಮ
ಅಂಕೋಲಾ ಜುಲೈ 15: ತಾಲೂಕಿನಲ್ಲಿ ಗುರುವಾರ 8 ಹೊಸ ಕೊವಿಡ್ ಕೇಸಗಳು ದಾಖಲಾಗಿದೆ. ಈ ಮೂಲಕ ಒಟ್ಟೂ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ ಅರ್ಧಶತಕದ ಗಡಿ ದಾಟಿ 52ಕ್ಕೆ ಏರಿಕೆಯಾಗಿದೆ. ಒಟ್ಟೂ 12 ಸೊಂಕಿತರು ತಾಲೂಕ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ಲಕ್ಷಣಗಳುಳ್ಳ ಇತರೆ 40 ಜನರು ಹೋಂ ಐಸೋಲೇಶನ್ ನಲ್ಲಿ ಇದ್ದಾರೆ.
ಜುಲೈ 16ರ ಶುಕ್ರವಾರ,ತಾಲೂಕಿನ ಗ್ರಾಮೀಣ ವ್ಯಾಪ್ತಿಯ ರಾಮನಗುಳಿ ಪ್ರಾ. ಆ ಕೇಂದ್ರ (50), ಪ್ರಾ. ಆ. ಕೇಂದ್ರ ಹಾರವಾಡ (50), ಪ್ರಾ. ಆ ಕೇಂದ್ರ ಹಿಲ್ಲೂರ (100), ಬೆಳೆಸೆ ಪಿ.ಎಚ್.ಸಿ ವ್ಯಾಪ್ತಿಯ ಉಪ ಕೇಂದ್ರ ಬೆಳಂಬಾರದಲ್ಲಿ (100) ಸೇರಿ ಒಟ್ಟೂ 300 ಲಸಿಕೆ ವಿತರಣೆ ಆಗಿದ್ದು, (2ನೇ ಡೋಸ್ ನವರಿಗೆ ಮಾತ್ರ) ಲಸಿಕೆ ನೀಡಲಾಗುತ್ತಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿಗಳು ಕಾರ್ಯಾಲಯದ ಪ್ರಕಟಣೆ ಯಲ್ಲಿ ತಿಳಿಸಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ