Follow Us On

Google News
Important
Trending

ಮಾಸ್ಕ ಧರಿಸದವರಿಗೆ ಸ್ಥಳದಲ್ಲಿಯೇ ಕೋವಿಡ್ ಟೆಸ್ಟ್: ಕುಮಟಾದಲ್ಲಿ ಪುರಸಭಾ ಅಧಿಕಾರಿಗಳ ಕಾರ್ಯಾಚರಣೆ

ಮಾಸ್ಕ್ ಇಲ್ಲದೆ ತಿರುಗಾಡಿದರೆ ಹುಷಾರ್!

ಕುಮಟಾ: ತಾಲೂಕಿನಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಪುನಃ ಏರಿಕೆಯಾಗುತ್ತಿರುವ ಕಾರಣ, ಪಟ್ಟಣದಲ್ಲಿ ಮಾಸ್ಕ್ ಹಾಕದವರಿಗೆ ಸ್ಥಳದಲ್ಲಿಯೇ ಸ್ವಾಬ್ ಟೆಸ್ಟ್ ಮಾಡುವು ಕಾರ್ಯವನ್ನು ಕುಮಟಾ ಪುರಸಭೆ ಮತ್ತು ಆರೋಗ್ಯ ಇಲಾಖೆ ಪ್ರಾರಂಭ ಮಾಡಿದೆ. ಮೂರುಕಟ್ಟೆ ಸರ್ಕಲ್‌ನಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಮಾಸ್ಕ್ ಬಳಕೆ ಮಾಡದೆ ಇರುವವರನ್ನು ಕುಮಟಾ ಪುರಸಭಾ ಮುಖ್ಯಧಿಕಾರಿಗಳಾದ ಸುರೇಶ ಎಮ್.ಕೆ ಮತ್ತು ಸಿಬ್ಬಂದಿಗಳ ತಂಡವು ಸ್ವಾಬ್ ಟೆಸ್ಟ್ ಗೆ ಕಳುಹಿಸಿದೆ. ಚೈತ್ರಪ್ರಭಾ ನಾಯ್ಕ್ ಮತ್ತು ಲ್ಯಾಬ್ ಟೆಕ್ನಿಷನ್ ಶರಾವತಿ ಅವರ ತಂಡವು ಅದೇ ಸ್ಥಳ ದಲ್ಲಿ 12 ಜನರಿಗೂ ಗಂಟಲು ದ್ರವದ ಟೆಸ್ಟ್ ಮಾಡಿದೆ.,

ಈ ಸಂದರ್ಭದಲ್ಲಿ ಇಂಜಿನಿಯರ್ ಹೇಮಚಂದ್ರ ನಾಯ್ಕ್, ಕಂದಾಯ ಅಧಿಕಾರಿ ದಿಲೀಪ್ ನಾಯ್ಕ್, ಹೆಲ್ತ್ ಇನ್ಸೆ÷್ಪಕ್ಟರ್ ವೀಣಾ, ಆರೋಗ್ಯ ಇಲಾಖೆಯ ದಿನೇಶ್ ನಾಯಕ್, ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು. ಈ ಒಂದು ಕಾರ್ಯಾಚರಣೆಯು ಇನ್ನೂ ಮುಂದೆಯೂ ನಡೆಯುತ್ತದೆ. ಆದ ಕಾರಣ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದು ಕುಮಟಾ ಪುರಸಭೆ ತಿಳಿಸಿದೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

ವಿಸ್ಮಯ ನ್ಯೂಸ್, ಕುಮಟಾ

Back to top button