Follow Us On

WhatsApp Group
Important
Trending

ನೆರೆ ಅವಾಂತರ: ಕೊಚ್ಚಿಹೋದ ಬ್ರಿಡ್ಜ್ ? ಗುಳ್ಳಾಪುರ – ಹಳವಳ್ಳಿ ರಸ್ತೆ ಸಂಪರ್ಕ ಸಂಪೂರ್ಣ ಕಡಿತ. 3000ಕ್ಕೂ ಹೆಚ್ಚು ಜನರು ಅತಂತ್ರ

ಅಂಕೋಲಾ: ತಾಲೂಕು ಜಿಲ್ಲೆ ಹಾಗೂ ಪಕ್ಕದ ಜಿಲ್ಲೆಗಳಲ್ಲಿ ಸುರಿದ ಬಾರಿ ಮಳೆಯಿಂದ ಗಂಗಾವಳಿ ನದಿ ನೀರಿನ ಮಟ್ಟ ವಿಪರೀತ ಏರಿಕೆಯಾಗಿ ನದಿ ತೀರಕ್ಕೆ ಹೊಂದಿಕೊಂಡ 10 ಕ್ಕೂ ಹೆಚ್ಚು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಹುತೇಕ ಗ್ರಾಮಗಳು ಜಲಾವೃತವಾಗಿ ಅಪಾರ ಹಾನಿಯಾಗಿದೆ.  ಡೊಂಗ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೂ ಮಳೆಯ ಆರ್ಭಟಕ್ಕೆ ಜನಜೀವನ ತತ್ತರಗೊಂಡಿದೆ.ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ನಿರ್ದೇಶನದಲ್ಲಿ  ತಾ.ಪಂ ಮಾರ್ಗದರ್ಶನದಂತೆ ,ಸ್ಥಳೀಯ ಗ್ರಾಮ ಪಂಚಾಯತ್ ವತಿಯಿಂದ,ಈಗಾಗಲೇ ಕೋನಾಳ,ಕಲ್ಲೇಶ್ವರ,ವೈದ್ಯಹೆಗ್ಗಾರ ಮತ್ತಿತರೆಡೆಯ ಹಲವು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.ಕಾಳಜಿ ಕೇಂದ್ರಗಳನ್ನು ತೆರೆದು ನಾಗರಿಕ ಸುರಕ್ಷತೆಗೆ ಒತ್ತು ನೀಡಲಾಗಿದೆ. 

ಈ ಭಾಗದ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದ,ಗುಳ್ಳಾಪುರ ಹಳವಳ್ಳಿ ಮಾರ್ಗಮಧ್ಯದ ಸೇತುವೆಯೊಂದು,ಉಕ್ಕೇರಿದ ಗಂಗಾವಳಿ ನದಿ ಹರಿವಿನ ರಭಸಕ್ಕೆ,ಭಾಗಶಹ ಕೊಚ್ಚಿಹೋಗಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದರಿಂದ ಹಳವಳ್ಳಿ, ಕಮ್ಮಾಣಿ, ಶೇವಕಾರ ಸೇರಿದಂತೆ ಹತ್ತಾರು ಹಳ್ಳಿಗಳ 3000 ಕ್ಕೂ ಹೆಚ್ಚು ಜನ ರಸ್ತೆ ಸಂಪರ್ಕ ಇಲ್ಲದೇ ಅತಂತ್ರ ವಾಗುವಂತೆ ಮಾಡಿದೆ.

ಬದಲಿ ಮಾರ್ಗವಾಗಿ ಮಳಲಗಾಂವ್ ಮೂಲಕ ಸುತ್ತಿಬಳಸಿ ಸಾಗಬಹುದಾದರೂ , ಮಳಲಗಾಂವ್ ಸೇತುವೆ ದುಸ್ಥಿತಿಯಲ್ಲಿದೆ ಮತ್ತು ಈ ಸಂದರ್ಭದಲ್ಲಿ ಈ ಸೇತುವೆ ಮೇಲಿನ ಪ್ರಯಾಣಅತ್ಯಂತ ಅಪಾಯಕಾರಿ ಎನ್ನುತ್ತಾರೆ ಕೆಲ ಸ್ಥಳೀಯರು. ಈ ಬಾರಿ ರಾ.ಹೆ ಸುಂಕಸಾಳ ಬಳಿ  ಹೆದ್ದಾರಿಗೆ ನುಗ್ಗಿದ ಹೆಚ್ಚಿನ ಪ್ರಮಾಣದ ನೀರಿನಿಂದ ಸಂಚಾರ ಸಮಸ್ಯೆಗೆ ತೀವ್ರ ವ್ಯತ್ಯಯವಾಗಿ,ಹೆದ್ದಾರಿ ಸಂಚಾರ ದಿನಗಟ್ಟಲೆ ಬಂದಾಗಿತ್ತು.

ಕಳೆದ ಸಾಲುಗಳಲ್ಲಿ ನೆರೆಯಿಂದ ರಾಮನಗುಳಿ ತೂಗು ಸೇತುವೆಯೂ ಕೊಚ್ಚಿ ಹೋಗಿತ್ತು.ನದಿನೀರಿನ ರಭಸಕ್ಕೆ ದೋಣಿ ನಡೆಸುವುದು ಕಷ್ಟಸಾಧ್ಯವಾಗಿದೆ. ಅನಾರೋಗ್ಯ ಮತ್ತಿತರ ಪರಿಸ್ಥಿತಿಗಳಲ್ಲಿ ಜನರನ್ನು ಆಸ್ಪತ್ರೆಗೆ ಕರೆತರಲು ಸಹ ಹೆಣಗಬೇಕಾದ ಪರಿಸ್ಥಿತಿ ಏರ್ಪಟ್ಟಿದೆ. ಮತ್ತು ರಸ್ತೆ ಸಂಪರ್ಕ ಕೊರತೆಯಿಂದ ನೆರೆಪೀಡಿತರಿಗೆ ನೆರವು ನೀಡಲು ಗ್ರಾಪಂ  ಮತ್ತು ಸಂಬಂಧಿಸಿದ ಇಲಾಖೆಗಳಿಗೆ ಹಿನ್ನಡೆಯಾಗುತ್ತಿದೆ.   

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

Back to top button