ಮಾಹಿತಿ
Trending

ದೀಪದಾನ ಸಮಾರಂಭ ಹಾಗೂ ಶಿಷ್ಯವೇತನ ಪುರಸ್ಕಾರ

ಶ್ರೀ ಚೆನ್ನಕೇಶವ ಪ್ರೌಢಶಾಲೆಯ ಸಭಾಂಗಣದಲ್ಲಿ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೋಡುಗೆ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಭಾಸಂಪನ್ನರಿಗೆ 2020-2021 ಶಿಷ್ಯವೇತನ ಪುರಸ್ಕಾರ ಪ್ರದಾನ ಮಾಡಲಾಯಿತು. ಸಭೆಯ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಬಿ ಎಸ್ ಎನ್ ಎಲ್ ಅಧಿಕಾರಿಯಾದ ಶ್ರೀ ಕೃಷ್ಣಮೂರ್ತಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಜೀವನದಲ್ಲಿ ಸಂಸ್ಕಾರ,ಸಂಸ್ಕೃತಿ ವಿದ್ಯೆಗೆ ಭೂಷಣವಾಗಿದೆ ಎಂದರು. ಕಲಿತ ಶಾಲೆ,ಋಣ ತೀರಿಸಲಾರದ ತಂದೆ,ತಾಯಿ ಮತ್ತು ಸಮಾಜವನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಶಾಲೆಗೆ 10000/- ದೇಣಿಗೆ ನೀಡಿದರು. ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಪ್ರಾರ್ಥನೆ ಸಲ್ಲಿಸಿದರು.

ಶಾಲೆಯ ಇತಿಹಾಸದ 10 ನೇ ತರಗತಿಯ ದಾಖಲೆಯ ಫಲಿತಾಂಶವನ್ನು ಮುರಿದ ಮತ್ತು ಜಿಲ್ಲೆಗೆ 8 ನೇ ಸ್ಥಾನ ಹೊನ್ನಾವರ ತಾಲೂಕಿಗೆ 6 ನೇ ಸ್ಥಾನ ಪಡೆದ ಕುಮಾರ ಅಮಿತ ಪೈಗೆ ಶ್ರೀ ಜಿ.ಜಿ.ಭಟ್ಟ, ಗದ್ದೆಯವರು 20000/- ಶಿಷ್ಯವೇತನ ನೀಡಿದರು. ಹೀಗೆ ಶಾಲೆಯ ವಿಧ್ಯಾಭಿಮಾನಿಗಳು ನೀಡಿದ ಶಿಷ್ಯವೇತನ ಪುರಸ್ಕಾರವನ್ನು ಸುಮಾರು 20 ವಿದ್ಯಾರ್ಥಿಗಳು ಪಡೆದರು. ಕುಮಾರ ಚರಣ,ಕುಮಾರಿ ಮೇಘಾ,ಪರ‍್ಣಿಮಾ ಅನಿಸಿಕೆ ವ್ಯಕ್ತ ಪಡಿಸಿದರು.

ಇದೇ ಸಂದರ್ಭದಲ್ಲಿ ಡಿ ಎಸ್ ಆರ್.ಟಿ ಸಿ ನಡೆಸುವ ಎನ್ ಎಮ್ ಎಮ್ ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ 7 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ ಶ್ರೀ ಗಜಾನನ ಹೆಗಡೆಯವರು ಶುಭ ಹಾರೈಸಿದರು. ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಎಮ್.ಕೆ.ಭಟ್ಟ, ಶ್ರೀಮತಿ ದರ‍್ಗಾಬಾಯಿ ಜೋಷಿ ಆಶರ‍್ವಚನ ಮಾಡಿ ಉತ್ತಮ ಭವಿಷ್ಯದ ಸೂತ್ರ ತಿಳಿಸಿದರು.ಶ್ರೀ ಜಿ.ಕೆ.ಭಟ್ಟರವರು ಸ್ವಾಗತಿಸಿದರು.ಮುಖ್ಯಾಧ್ಯಾಪಕರಾದ ಶ್ರೀ ಎಲ್.ಎಮ್.ಹೆಗಡೆಯವರು ಮುಖ್ಯ ಅತಿಥಿಗಳನ್ನು ಸನ್ಮಾನಿಸಿ ಅಭಿನಂದಿಸಿದರು.ಶ್ರೀ ಸುಬ್ರಹ್ಮಣ್ಯ ಭಟ್ಟರು ವಿದ್ಯಾರ್ಥಿಗಳಿಗೆ ಎಲ್ಲಾ ಶಿಕ್ಷಕರ ಪರವಾಗಿ ಶುಭ ಹಾರೈಸಿದರು. ಶ್ರೀಮತಿ ಮುಕ್ತಾ ನಾಯ್ಕ ಮತ್ತು ಶ್ರೀಮತಿ ಸೀಮಾ ಭಟ್ಟರು ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ರೇಷ್ಮಾ ದೇಶಭಂಡಾರಿಯವರು ವಂದಿಸಿದರು.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

ವಿಸ್ಮಯ ನ್ಯೂಸ್, ಹೊನ್ನಾವರ

Back to top button