ಬೆಳಗಿನ ಜಾವ 5 ಗಂಟೆಗೆ ಬಂದು ಸರತಿ ಸಾಲಿನಲ್ಲಿ‌‌ ಬಂದು ವಾಕ್ಸಿನ್ ಪಡೆಯಲು ನಿಂತಿದ್ದರು: ಜನಸಾಗರ ನಿಯಂತ್ರಣವೇ ಸವಾಲು

ಅಂಕೋಲಾ: ಬಹುದಿನಗಳಿಂದ ಕೋವಿಡ್ ಪ್ರಥಮ ಹಂತದ ಲಸಿಕೆಗಾಗಿ ಕಾದಿರುವ ತಾಲೂಕಿನ ಜನತೆ,,ಆಗಸ್ಟ್ 2ರ ಸೋಮವಾರದಿಂದ ಪುನರ್ ಆರಂಭವಾದ 1st ಡೋಸ್ ಲಸಿಕೆ ಪಡೆಯಲು ಸಾಲುಸಾಲಾಗಿ ನಿಲ್ಲುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನದಲ್ಲಿ ಕೆಲವರು ನಸುಕಿನ 5 ಗಂಟೆಗೆ ಬಂದು, ಸರತಿ ಸಾಲಿನಲ್ಲಿ ಟೋಕನ್ ಪಡೆಯಲು ನಿಂತಿದ್ದರು.ಬೆಳಗಿನ 7 ಗಂಟೆಯ ನಂತರ ಸಾಲು ಬೆಳೆಯುತ್ತಾ ಉದ್ದವಾಗಿ ಕೆಎಲ್ಇ ಪ್ರವೇಶದ್ವಾರದ ವರೆಗೂ ಮುಂದುವರೆಯಿತು.

ಮೊದಲು ಬಂದ 150 ಜನರಿಗಷ್ಟೇ ಪ್ರಥಮ ಡೋಸ್ ಲಸಿಕೆಯ ಟೋಕನ್ ನೀಡಲಾಗಿ, ವ್ಯಾಕ್ಸಿನ್ ಕೊರತೆಯಿಂದ ಸಾಲಿನಲ್ಲಿ ನಿಂತವರು ನಿರಾಶರಾಗುವಂತಾಯಿತು. ಅಷ್ಟೇ ಪ್ರಮಾಣದ ಎರಡನೇ ಡೋಸ್ ಲಭ್ಯವಿದ್ದರೂ ಎಡನೆ ಲಸಿಕೆ ತೆಗೆದುಕೊಳ್ಳಲು ಹೆಚ್ಚಿನಜನರು ಆಗಮಿಸದಿದ್ದರಿಂದ ಉಳಿಕೆ ಆದ ಕೆಲವು ಡೋಸಗಳನ್ನು ಮೊದಲನೇ ಡೋಸಗಾಗಿ ಬೆಳಿಗ್ಗೆಯಿಂದಲೇ ಕಾಯುತ್ತಿದ್ದ ಕೆಲವರಿಗೆ ನೀಡಲಾಯಿತು. ಈ ವೇಳೆ ಸಾರ್ವಜನಿಕರು ತೋರಿದ ತಾಳ್ಮೆ ಮೆಚ್ಚುವಂತದ್ದು.

ಬೆಳಂಬಾರದ ಮೂಡ್ರಾಣಿಯಲ್ಲಿ ತಲಾ 250 ಲಸಿಕೆ ಪ್ರಥಮ ಮತ್ತು ದ್ವಿತೀಯ ಡೋಸ್ ಗೆ ಲಭ್ಯವಿದ್ದರೂ, ಆರಂಭದಲ್ಲಿ ಅದಾವುದೋ ಕಾರಣದಿಂದ ಕೆಲವೇ ಟೋಕನ್ ಹಂಚಿ ಸಣ್ಣ ಪ್ರಮಾಣದ ಗೊಂದಲ ಮೂಡುವಂತಾದರೆ,ಇತರೆ ಕಾರಣಗಳಿಂದಲೂ ಲಸಿಕಾಕರಣ ತುಸು ವಿಳಂಬವಾಗಿ ಆರಂಭವಾಗುವಂತಾಯಿತು.

ಆರೋಗ್ಯ,ಇಲಾಖೆ ಹಾಗೂ ಪೋಲೀಸ್ ಇಲಾಖೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಾತಾವರಣ ತಿಳಿಗೊಂಡು, ಸ್ಥಳೀಯ ಜನಪ್ರತಿನಿಧಿಗಳು,ಶಿಕ್ಷಣ ಇಲಾಖೆ ಸಿಬ್ಬಂದಿಗಳು,ಆಶಾ ಅಂಗನವಾಡಿ ಕಾರ್ಯಕರ್ತೆಯರು,ಆರೋಗ್ಯ ಇಲಾಖೆ ಸಿಬ್ಬಂದಿಗಳು,ಊರ ಯುವ ಪ್ರಮುಖರ ಸಹಕಾರದಲ್ಲಿ ಲಸಿಕಾಕರಣ ಉತ್ತಮ ಮಟ್ಟದಲ್ಲಿ ನಡೆಯುವಂತಾಯಿತು. ತಾಲೂಕಿನ ಇತರ ಕೆಲ ಭಾಗಗಳಲ್ಲಿಯೂ ಆಯಾ ವ್ಯಾಪ್ತಿಯ ಸಂಬಂಧಿಸಿದ ಎಲ್ಲರ ಸಹಕಾರದಿಂದ, ಹೆಚ್ಚಿನ ಬೇಡಿಕೆ ಹಾಗೂ ಕಡಿಮೆ ಪೂರೈಕೆಯ ನಡುವೆಯೂ ಲಸಿಕಾಕರಣ ಯಶಸ್ಸಿನತ್ತ ಸಾಗುವಂತಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

Exit mobile version