Follow Us On

WhatsApp Group
Important
Trending

ಉಗ್ರರೊಂದಿಗೆ ಸಂಪರ್ಕ ಶಂಕೆ ಹಿನ್ನಲೆಯಲ್ಲಿ ಭಟ್ಕಳದಲ್ಲಿ NIA ದಾಳಿ: ಮೂವರು ವಶಕ್ಕೆ

ಭಟ್ಕಳ: ಐಸಿಸ್ ನಂಟಿರೋ ಶಂಕೆ ಹಿನ್ನೆಲೆ ಕೇಂದ್ರ ಎನ್‌ಐಎ ತಂಡದಿಂದ ಭಟ್ಕಳ ತಾಲೂಕಿನ ಎರಡು ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದೆ. ತಾಲೂಕಿನ ಸಾಗರ ರಸ್ತೆ ಹಾಗೂ ಉಮರ್ ಸ್ಟ್ರೀಟನಲ್ಲಿರುವ ಎರಡು ಮನೆಗಳ ಮೇಲೆ ಕೇಂದ್ರದ ಎನ್.ಐಎ ತಂಡದಿಂದ ಈ ದಾಳಿ ನಡೆದಿದೆ.

ಈ ಹಿಂದೆ ಬಂಧನಕ್ಕೊಳಕ್ಕಾಗಿರುವ ಭಯೋತ್ಪಾದಕ ಓರ್ವನ ಸಂಬಂಧಿಯನ್ನು ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಅತ್ಯಂತ ಗುಪ್ತವಾಗೇ ಈ ಕಾರ್ಯಾಚರಣೆ ನಡೆದಿದ್ದು, ಸ್ಥಳೀಯ ಪೊಲೀಸರಿಗೂ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎನ್ನಲಾಗಿದೆ.

ದಾಳಿಯ ವಿಡಿಯೋ ದೃಶ್ಯ

ಜಿಲ್ಲೆಯ ಉನ್ನತಾಧಿಕಾರಿಗಳ ಜತೆ ಗುಪ್ತವಾಗಿ ಎನ್‌ಐಎ ತಂಡ ದಾಳಿ ನಡೆಸಿದೆ. ಈ ವಿಚಾರಕ್ಕಾಗಿ ನಿನ್ನೆಯಿಂದಲೇ ಭಟ್ಕಳದಲ್ಲಿ ಜಿಲ್ಲಾ ಪೊಲೀಸವರಿಷ್ಠಾಧಿಕಾರಿ ಮೊಕ್ಕಾಮ್ ಹೂಡಿದ್ದರು. ಇನ್ನೇನು ಹೆಚ್ಚಿನ ಮಾಹಿತಿ ವಿಚಾರಣೆ ಬಳಿಕವೇ ತಿಳಿದು ಬರಬೇಕಿದೆ. ಈ ಸಂಭಂದ ತಾಲೂಕಿನ ಹಲವೆಡೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಉತ್ತರಕನ್ನಡ ಜಿಲ್ಲೆಯ ಭಟ್ಕಳ ಅತ್ಯಂತ ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿದೆ. ಅಲ್ಲದೆ, ಉಗ್ರರ ಸಂಪರ್ಕ ವಿಷಯ ಬಂದಾಗ ಈ ಹಿಂದೆ ಹಲವರು ಬಾರಿ ರಾಷ್ಟ್ರಮಟ್ಟದಲ್ಲಿ ರಾಜ್ಯಮಟ್ಟದಲ್ಲಿ ಭಟ್ಕಳ ಸುದ್ದಿಯಾಗಿದೆ. ಇದೀಗ ಮತ್ತೆ ಪದೇ ಪದೇ ಉಗ್ರರ ಸಂಪರ್ಕ ವಿಷಯದಲ್ಲಿ ಭಟ್ಕಳದ ಸದ್ದು ಮಾಡುತ್ತಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

ಪ್ರಮುಖ ಸುದ್ದಿಗಳ ಲಿಂಕ್ ಇಲ್ಲಿದೆ

Back to top button