ಭಟ್ಕಳದಲ್ಲಿ ಬಂಧಿತ ಶಂಕಿತ ಉಗ್ರನ ವಿಚಾರಣೆ ತೀವ್ರ: ಆರೋಗ್ಯ ತಪಾಸಣೆ ನಡೆಸಿ ನ್ಯಾಯಲಯಕ್ಕೆ ಹಾಜರು ಪಡಿಸಿ ವಶಕ್ಕೆ ಪಡೆದ ಅಧಿಕಾರಿಗಳು
ಸುರಕ್ಷತಾ ದೃಷ್ಟಿಯಿಂದ ಪೋಲಿಸ್ ಠಾಣೆಯ ಮೇಲಿನ ಮಹಡಿಯಲ್ಲಿ ಇರಿಸಿಕೊಂಡು ವಿಚರಣೆ ನಡೆಸಲಾಗಿತ್ತು ಎಂದು ಹೇಳಲಾಗುತ್ತಿದೆ. ಪ್ರತೇಕ ಕೋಠಡಿಯಲ್ಲಿ ವಿಚಾರಣೆ ನಡೆಸಿ, ಶನಿವಾರ ತಾಲೂಕ ಆಸ್ಪತ್ರೆಯಲ್ಲಿ ಆರೊಗ್ಯ ತಪಾಸಣೆ ನಡೆಸಿ ಹೊನ್ನಾವರದ ಸಿವಿಲ್ ನ್ಯಾಯಲಯಕ್ಕೆ ಅಧಿಕಾರಿಗಳು ಕರೆತಂದು ಬಳಿಕ ತಮ್ಮ ವಶಕ್ಕೆ ಪಡೆದರು.
ಭಟ್ಕಳದಲ್ಲಿ ಎನ್‌ಐಎ ನಿನ್ನೆ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪದ ಮೇಲೆ ಬಂಧಿಸಲ್ಪಟ್ಟ ಜುಫ್ರಿ ಜವಾಹರ್ ದಾಮುದಿ ವಿಚಾರಣೆ ತೀವ್ರಗೊಂಡಿದೆ. ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದ್ದು, ಕೆಲ ಸುರಕ್ಷತೆಯ ದೃಷ್ಟಿಯಿಂದ ಯಾವುದನ್ನು ಬಹಿರಂಗ ಪಡಿಸಲಾಗುತ್ತಿಲ್ಲ ಎನ್ನಲಾಗಿದೆ.
ಭದ್ರತಾ ದೃಷ್ಠಿಯಿಂದ ವಿಚಾರಣೆಗೆ ತೊಂದರೆಯಾಗಬಹುದು ಎಂದು ಸುರಕ್ಷತಾ ದೃಷ್ಟಿಯಿಂದ ಮಂಕಿಯ ಪೋಲಿಸ್ ಠಾಣೆಯ ಮೇಲಿನ ಮಹಡಿಯಲ್ಲಿ ಇರಿಸಿಕೊಂಡು ವಿಚರಣೆ ನಡೆಸಲಾಗಿತ್ತು ಎಂದು ಹೇಳಲಾಗುತ್ತಿದೆ. ಈತನನ್ನು ನಿನ್ನೆ ಮಂಕಿ ಪೋಲಿಸ್ ಠಾಣೆಯ ಪ್ರತೇಕ ಕೋಠಡಿಯಲ್ಲಿ ವಿಚಾರಣೆ ನಡೆಸಿ, ಶನಿವಾರ ತಾಲೂಕ ಆಸ್ಪತ್ರೆಯಲ್ಲಿ ಆರೊಗ್ಯ ತಪಾಸಣೆ ನಡೆಸಿ ಹೊನ್ನಾವರದ ಸಿವಿಲ್ ನ್ಯಾಯಲಯಕ್ಕೆ ಅಧಿಕಾರಿಗಳು ಕರೆತಂದು ಬಳಿಕ ತಮ್ಮ ವಶಕ್ಕೆ ಪಡೆದರು©Copyright reserved by Vismaya tv.
ಇದೇ ವೇಳೆ, ಭಟ್ಕಳ ಮೂಲದ ಜುಫ್ರಿ ಜವಾಹರ್ ದಾಮುದಿ ಎಂದು ಗುರುತಿಸಿಕೊಂಡಿರುವವನೇ ಅಬು ಹಾಜಿರ್ ಅಲ್ ಬದ್ರಿ ಎನ್ನುವುದನ್ನು ಎನ್‌ಐಎ ಖಚಿತಪಡಿಸಿಕೊಂಡಿದೆ. ಜಾಲಿಯ ಉಮರ್ ಸ್ಟ್ರೀಟ್ ನಿವಾಸಿ ಜುಫ್ರಿ ಜವಾಹರ್ ದಾಮುದಿ (30) ಬಂಧಿತ ಆರೋಪಿ. ಈತ ಉಗ್ರ ಸಂಘಟನೆಯ ನಿಯತಕಾಲಿಕೆ ‘ವಾಯ್ಸ್ ಆಫ್ ಹಿಂದ್’ ಅನ್ನು ದಕ್ಷಿಣ ಭಾರತದ ಭಾಷೆಗಳಿಗೆ ಭಾಷಾಂತರ ಮಾಡುತ್ತಿದ್ದ.
ಈತನ ಹಾಗೂ ಭಟ್ಕಳದ ಸಾಗರ ರಸ್ತೆಯಲ್ಲಿರುವ ಬೇರೊಬ್ಬರ ಮನೆಯಲ್ಲಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿದರು. ಎರಡೂ ಕಡೆಗಳಿಂದ ಮೊಬೈಲ್ ಫೋನ್, ಸಿಮ್‌ಕಾರ್ಡ್ಗಳು, ಹಾರ್ಡ್ ಡಿಸ್ಕ್, ಮೆಮೊರಿ ಕಾರ್ಡ್ಗಳು ಸೇರಿದಂತೆ ವಿವಿಧ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.
ಭಟ್ಕಳ ಅತ್ಯಂತ ಸೂಕ್ಷ್ಮ ಪ್ರದೇಶ ವಾಗಿದ್ದು, ಅಲ್ಲಿನ ಪೊಲೀಸ್ ಠಾಣೆಯಲ್ಲಿ ಇಟ್ಟರೆ, ಕೆಲ ಸಮಸ್ಯೆಗಳಾಗಬಹುದು ಎಂದು ಊಹಿಸಿ, ಮಂಕಿಯಲ್ಲಿ ಅತ್ಯಂತ ಭದ್ರತೆಯಲ್ಲಿ ಈತನ್ನು ಈಡಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಇದೀಗ ಎನ್‌ಐಎ ಅಧಿಕಾರಿಗಳು, ದೆಹಲಿಗೆ ಕರೊದೊಯ್ದಿದ್ದಾರೆ ಎನ್ನಲಾಗಿದೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ ಮತ್ತು ಉದಯ್ ನಾಯ್ಕ, ಭಟ್ಕಳ