Follow Us On

WhatsApp Group
ಮಾಹಿತಿ
Trending

ಜಿಲ್ಲೆಯ ಜನರಿಗೆ ಸಮಾಧಾನದ ಸುದ್ದಿ: ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡ ಕೋವಿಡ್ ಕೇಸ್

ಕಾರವಾರ: ಕಳೆದ ಕೆಲ ವಾರಗಳಿಂದ ಸ್ವಲ್ಪ ಮಟ್ಟಿನ ಏರಿಕೆ ಕಂಡು ಆತಂಕ ಸೃಷ್ಟಿಸಿದ್ದ ಕೋವಿಡ್ ಇಂದು ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಜಿಲ್ಲೆಯಲ್ಲಿ ಇಂದು 29 ಕೋವಿಡ್ ಕೇಸ್ ದಾಖಲಾಗಿದೆ. ಕಾರವಾರ 2, ಅಂಕೋಲಾ 5, ಕುಮಟಾ 7, ಹೊನ್ನಾವರ 4, ಭಟ್ಕಳ 5, ಶಿರಸಿ 3, ಸಿದ್ದಾಪುರ 1, ಮತ್ತು ಮುಂಡಗೋಡಿನಲ್ಲಿ 2 ಕೇಸ್ ಕಾಣಿಸಿಕೊಂಡಿದೆ.

ಇದೇ ವೇಳೆ ಜಿಲ್ಲೆಯಾದ್ಯಂತ ಇಂದು 64 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಅಂಕೋಲಾ 32, ಕಾರವಾರ 5, ಕುಮಟಾ 8., ಹೊನ್ನಾವರ 13, ಭಟ್ಕಳ 4, ಹಳಿಯಾಳ ಮತ್ತು ಜೋಯ್ಡಾದಲ್ಲಿ ತಲಾ ಒಬ್ಬರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಕುಮಟಾ ಮತ್ತು ಶಿರಸಿಯಲ್ಲಿ ಒಂದು ಸಾವಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 740ಕ್ಕೆ ಏರಿಕೆಯಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button