ಜಿಲ್ಲೆಯಾದ್ಯಂತ 75ನೇ ಸ್ವಾತಂತ್ರ್ಯ ದಿನಾಚರಣೆ: ಶಾಲೆ-ಕಾಲೇಜಿನಲ್ಲಿ ಹಾರಾಡಿದ ತಿರಂಗ

ಕಾರವಾರ: 75ನೇ ಸ್ವಾತಂತ್ರ್ಯ ದಿನಾಚರಣೆ, ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆಯಿತು. ರಾಜ್ಯ ಕಾರ್ಮಿಕ ಮ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ನಡೆದ ಪರೇಡ್ ಗಮನಸೆಳೆಯಿತು.

ಕುಮಟಾ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಕುಮಟಾ ಇವರ ವತಿಯಿಂದ 75 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ನಿಮಿತ್ತ ಸಾರ್ವಜನಿಕ ಧ್ವಜಾರೋಹಣ ಮತ್ತು ಸಂದೇಶ ಕಾರ್ಯಕ್ರಮವನ್ನು ಇಂದು ಕುಮಟಾ ಮಣಕಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರತಿ ವರ್ಷ ಅತ್ಯಂತ ಅದ್ದೂರಿಯಾಗಿ ಆಚರಿಸುತ್ತಿದ್ದ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಕರೋನಾ ಹಿನ್ನೆಲೆಯಲ್ಲಿ ಈ ಭಾರಿ ಅತ್ಯಂತ ಸರಳವಾಗಿ ಆಚರಿಸಲಾಯಿತು. ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ, ಕುಮಟಾ ಸಹಾಯಕ ಆಯುಕ್ತರಾದ ರಾಹುಲ್ ರತ್ಮಮ್ ಪಾಂಡೆ ಅವರು ದ್ವಜಾರೋಹಣ ನೆರವೇರಿಸಿದರು.

ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕವಲಕ್ಕಿಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ

ಕವಲಕ್ಕಿ: ಅಗಸ್ಟ 15 ರಂದು ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕವಲಕ್ಕಿಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಶಿಕ್ಷಣ ಇಲಾಖೆಯ ಆದೇಶದಂತೆ ಕೋವಿಡ್ ನಿಯಮಾವಳಿ ಅನುಸರಿಸಿ ಸಾಂಕೇತಿಕವಾಗಿ ಆಚರಿಸಲಾಯಿತು. ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಆನ್‍ಲೈನ್ ಮೂಲಕ ನೇರವಾಗಿ ಭಾಗಿ ಆಗಿದ್ದರು. ಎಲ್.ಕೆ.ಜಿ ಯಿಂದ ಹತ್ತನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡರು.

ಪಾಲಕರು ಮನೆಯಲ್ಲಿಯೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು. ಶ್ರೀ ಭಾರತೀ ಎಜ್ಯುಕೇಶನ್ ಟ್ರಸ್ಟನ ಅಧ್ಯಕ್ಷರಾದ ಶ್ರೀ ಉಮೇಶ ಹೆಗಡೆ, ಅಬ್ಳಿಯವರು ದ್ವಜಾರೋಹಣ ನೆರವೇರಿಸಿ ಶುಭ ಕೋರಿದರು. ಹಾಗೂ ಉಪಾಧ್ಯಕ್ಷರಾದ ಶ್ರೀ ವಿನಯ್ ಭಟ್ ಸೂರಿ ಯವರು ಉಪಸ್ಥಿತರಿದ್ದರು. ಮತ್ತು ಮುಖ್ಯಾಧ್ಯಾಪಕಿಯಾದ ಶ್ರೀಮತಿ ವೈಲೆಟ್ ಫರ್ನಾಂಡಿಸರವರು ಹಾಗೂ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.

ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ

ಕುಮಟಾ : ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ: ಶ್ರೀಮತಿ ಪ್ರೀತಿ ಭಂಡಾರ್‍ಕರವರು ಧ್ವಜಾರೋಹಣ ನೇರವೇರಿಸಿ ದೇಶಕಟ್ಟುವ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದದ್ದು ಹಾಗೂ ಶಿಕ್ಷಕರಾಗುವವರಿಗೆ ದೇಶದ ಇತಿಹಾಸ ಅರಿಯುವುದು ಬಹಳ ಮುಖ್ಯ ಎಂದು ಮಾತನಾಡಿದರು. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಧ್ವಜವಂದನೆ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

ಕೊಂಕಣದಲ್ಲಿ ಸಂಭ್ರಮದ 75ರ ಸ್ವಾತಂತ್ರ್ಯೋತ್ಸವ

ಕುಮಟಾ: ಇಲ್ಲಿನ ಕೊಂಕಣಎಜ್ಯುಕೇಶನ್ ಟ್ರಸ್ಟ್ನಅಂಗಸಂಸ್ಥೆಗಳಿಂದ 75ರ ಸಂಭ್ರಮದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಟ್ರಸ್ಟ್ನ ಅಧ್ಯಕ್ಷರಾದ ವಿಠ್ಠಲ ನಾಯಕ ನೆರವೇರಿಸಿದರು. ಸಂಸ್ಥೆಯಕಾರ್ಯದರ್ಶಿಮುರಲಿಧರ ಪ್ರಭುಮಾತನಾಡಿ, ನನಗಿಂತ ದೇಶಮುಖ್ಯ ಅನ್ನುವುದು ಪ್ರತಿಯೊಬ್ಬರ ನಿಲುವಾದಾಗ ಮಾತ್ರ ದೇಶದ ಅಭಿವೃದ್ಧಿಸಾಧ್ಯ ಎಂದರು. 75ರ ಸಂಭ್ರಮದನೆನಪಿಗೆ 75 ಸ್ವಾತಂತ್ರ್ಯಹೋರಾಟಗಾರರ ಭಾವಚಿತ್ರಗಳನ್ನು ಅನಾವರಣಗೊಳಿಸಿ ಭಾರತಮಾತೆಯನಕಾಶೆಯಸುತ್ತ 75 ಹಣತೆಯನ್ನು ಬೆಳಗಿಸಿದ್ದು ಕಾರ್ಯಕ್ರಮಕ್ಕೆ ಮೆರಗನ್ನು ತಂದಿತ್ತು.

ಸೆಕೆಂಡರಿ ಹೈಸ್ಕೂಲಿನಲ್ಲಿ ಹಿರೇಗುತ್ತಿಯಲ್ಲಿ 75 ನೇ ಸ್ವಾತಂತ್ರ್ಯೋತ್ಸವ

ಕುಮಟಾ : ಸೆಕೆಂಡರಿ ಹೈಸ್ಕೂಲಿನಲ್ಲಿ ಹಿರೇಗುತ್ತಿಯಲ್ಲಿ ಮಹಾತ್ಮಗಾಂಧೀ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಹೊನ್ನಪ್ಪ ಎನ್ ನಾಯಕ 75 ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ “ಸ್ವಾತಂತ್ರ್ಯೋತ್ಸವದ ಧ್ಯೇಯೋದ್ದೇಶಗಳನ್ನು ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು” ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ಪ್ರಥಮ ಸ್ಥಾನ ಪಡೆದ ಸುಹಾಸ ಕೃಷ್ಣ ಶೆಟ್ಟಿ, ದ್ವಿತೀಯ ಸ್ಥಾನ ಪಡೆದ ಶೃತಿ ಭಂಡಾರಿ, ತೃತೀಯ ಸ್ಥಾನ ಪಡೆದ ನಾಗಶ್ರೀ ಪಟಗಾರ ರವರಿಗೆ ಸನ್ಮಾನಿಸಲಾಯಿತು. ಕಳೆದ ಸಾಲಿನಲ್ಲಿ 2019-20ರಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀದೇವಿ ಶಂಕರ ಹಳ್ಳೇರರವರಿಗೆ ಬೀರಣ್ಣ ಮೋನಪ್ಪ ನಾಯಕ ಹಿರೇಗುತ್ತಿ ನಿವೃತ್ತ ಶಿಕ್ಷಕರು 1000ರೂ ಬಹುಮಾನ ನೀಡಿದರು.

ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿಯಾದ ಮೋಹನ ಬಿ ಕೆರೆಮನೆ, ಉಪಾಧ್ಯಕ್ಷರಾದ ಶ್ರೀಕಾಂತ ನಾಯಕ, ಸದಸ್ಯರಾದ ನಾಗಪ್ಪ ಕೆರೆಮನೆ, ರಮಾನಂದ ಜಿ ಪಟಗಾರ, ಹಿರೇಗುತ್ತಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪ್ರೇಮಾನಂದ ಗಾಂವಕರ, ಮುಖ್ಯಾಧ್ಯಾಪಕರಾದ ರೋಹಿದಾಸ ಎಸ್ ಗಾಂವಕರ, ಶಿಕ್ಷಕರಾದ ಬಾಲಚಂದ್ರ ಹೆಗಡೇಕರ್, ನಾಗರಾಜ ಜಿ ನಾಯಕ, ಎನ್ ರಾಮು ಹಿರೇಗುತ್ತಿ, ಮಹಾದೇವ ಗೌಡ, ವಿಶ್ವನಾಥ ಬೇವಿನಕಟ್ಟಿ, ಇಂದಿರಾ ನಾಯಕ, ಜಾನಕಿ ಗೊಂಡ, ಶಿಲ್ಪಾ ನಾಯಕ ಮತ್ತು ಕವಿತಾ ಅಂಬಿಗ, ದೇವಾಂಗಿನಿ ನಾಯಕ, ಗೋಪಾಲಕೃಷ್ಣ ಗುನಗಾ, ಮಹಾತ್ಮಾಗಾಂಧಿ ಇಂಗ್ಲೀಷ್ ಮೀಡಿಯಂ ಸ್ಕೂಲಿನ ಸುಮನ್, ವಸಂತಬಾಯಿ ಉಪಸ್ಥಿತರಿದ್ದರು. ನಾಗಶ್ರೀ, ಸ್ವಾತಿ, ಪ್ರೀತಿ, ಶಿವಾನಿ ಸಂಗಡಿಗರು ವಂದೇಮಾತರಂ, ರೈತಗೀತೆ, ಧ್ವಜಗೀತೆ ಹಾಗೂ ರಾಷ್ಟ್ರ ಗೀತೆ ಹಾಡಿದರು. ದೈಹಿಕ ಶಿಕ್ಷಕರಾದ ನಾಗರಾಜ ನಾಯಕ ಧ್ವಜಾರೋಹಣ ಕಾರ್ಯಕ್ರಮದ ಸಂಯೋಜನೆ ಮಾಡಿದರು. ಎಲ್ಲರೂ ಸ್ವಾತಂತ್ರ್ಯೋತ್ಸವದ ಸವಿಯನ್ನು ಅನುಭವಿಸಿದರು.

ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಸರಳವಾಗಿ ಸ್ವಾತಂತ್ರ್ಯ ದಿನಾಚರಣೆ

ಶಿರಸಿ: 75 ನೇ ಸ್ವಾತಂತ್ಸ್ಯೋತ್ಸವದ ಅಂಗವಾಗಿ ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಸರಳವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಸಹಾಯಕ ಆಯುಕ್ತೆ ಆಕೃತಿ ಬನ್ಸಾಲ್, ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ನೀಡಿದರು. ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಭೋಸ್ ಸೇರಿದಂತೆ ವಿವಿಧ ನಾಯಕರ ತ್ಯಾಗದ ಫಲವಾಗಿ ನಮಗೆ ಸ್ವಾತಂತ್ರ್ಯ ದೊರೆತಿದ್ದು, ಅದನ್ನು ರಕ್ಷಿಸುವ ಕೆಲಸ ನಮ್ಮಿಂದಾಗಬೇಕು.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888

Exit mobile version