ಮಹಿಳೆಗೆ ನಾದಿನಿಯಿಂದಲೇ ಮಾರಣಾಂತಿಕ ಹಿಂಸೆ? ಗೃಹ ಬಂಧನದಲ್ಲಿರಿಸಿ ಕಿರುಕುಳ: ತಂಗಿಯ ಕೃತ್ಯಕ್ಕೆ ಪತಿಯೂ ಸಾಥ್
ತೀರಾ ಅಸ್ವಸ್ಥಗೊಂಡ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಭಟ್ಕಳ: ತನ್ನ ಅಣ್ಣನ ದುಡಿಮೆ ಹಾಗೂ ಆತನ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ಆತನ ಪತ್ನಿಯನ್ನು ಗ್ರಹಬಂಧನದಲ್ಲಿಟ್ಟುಕೊಂಡು ಚಿತ್ರ ಹಿಂಸೆ ನೀಡಿದ್ದು ಮಹಿಳೆಗೆ ತೀವ್ರತರವಾಗಿ ದೈಹಿಕ ಹಲ್ಲೆಯ ಮಾಡಿದ್ದು, ಸದ್ಯ ಮಹಿಳೆ ಯನ್ನು ಬೆಂಗಳೂರಿನಿಂದ ಭಟ್ಕಳಕ್ಕೆ ಕರೆತಂದು ಸರಕಾರಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಶನಿವಾರದಂದು ವರದಿಯಾಗಿದೆ. ತನ್ನ ಗಂಡನ ತಂಗಿಯಿಂದ ತೀವ್ರತರವಾಗಿ ದೈಹಿಕ, ಮಾನಸಿಕ ಹಿಂಸೆ, ಹಲ್ಲೆಗೊಳಗಾದ ಮಹಿಳೆ ತಾಲೂಕಿನ ಕುಂಟವಾಣಿ ನಿವಾಸಿ ಸುಧಾ ನರಸಿಂಹ ಗಾಣಿಗಾ ಎಂದು ತಿಳಿದು ಬಂದಿದೆ.
ಕಳೆದ 6 ವರ್ಷದ ಹಿಂದೆ ಹಲ್ಲೆಗೊಳಗಾದ ಮಹಿಳೆಯನ್ನು ಪಕ್ಕದ ಕುಂದಾಪುರದ ಬಡಾಕೆರೆ ನಿವಾಸಿ ಆರೋಪಿ ನರಸಿಂಹ ಗಾಣಿಗಾ ಮದುವೆ ಮದುವೆ ಮಾಡಿಕೊಟ್ಟಿದ್ದರು. ಸುಂದರ ಜೀವನ ಸಾಗಿಸುತ್ತಿದ್ದ ಇವರು 2 ವರ್ಷದ ಹಿಂದೆ ಬೆಂಗಳುರಿಗೆ ತೆರಳಿ ಅಲ್ಲಿ ತನ್ನ ಸಂಸಾರ ನಡೆಸುತ್ತಿದ್ದರು. ಮಹಿಳೆಯ ಪತಿಯ ಜೊತೆಗೆ ಆತನ ತಂಗಿ ಆರೋಪಿ ನೇತ್ರಾವತಿ ಹಾಗೂ ಆಕೆಯ 12 ವರ್ಷದ ಮಗಳು ವಾಸವಿದ್ದರು.
ನರಸಿಂಹ ಹಾಗೂ ಸುಧಾ ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಪತಿ ಬೆಂಗಳೂರಿನ ಹೋಟೆಲವೊಂದರಲ್ಲಿ ಅಡುಗೆ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದು, ಕೈತುಂಬ ಸಂಬಳ ಪಡೆಯುತ್ತಿದ್ದು ಹಾಗೂ ಆತನಿಗೆ ಪಿತ್ರಾರ್ಜಿತ ಆಸ್ತಿಯು ಬಹಳಷ್ಟಿದ್ದವು ಎಂದು ತಿಳಿದು ಬಂದಿದೆ.
ಮಹಿಳೆಯ ಪತಿಯ ಆಸ್ತಿಯ ಆಸೆಗೆ ಆತನ ತಂಗಿ , ಅತ್ತಿಗೆಯನ್ನು ಗ್ರಹ ಬಂಧನದಲ್ಲಿರಿಸಿದ್ದಳು. ಸತತ ತಿಂಗಳಿಗೂ ಹೆಚ್ಚು ಕಾಲ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ, ಚಿತ್ರಹಿಂಸೆ ನೀಡಿದ್ದಲ್ಲದೇ ಆಕೆಯ ತಾಯಿ ಮನೆಗೆ ವಿಚಾರ ತಿಳಿಯದಂತೆ ಅವರ ಸಂಪರ್ಕಕ್ಕೂ ಸಿಗದಂತೆ ಮಹಿಳೆಯ ಮೊಬೈಲ್ ಅನ್ನು ಎತ್ತುಕೊಂಡಿದ್ದಳು ಎಂಬ ಆರೋಪ ಕೇಳಿಬಂದಿದೆ.
ಈ ಹಲ್ಲೆ ಚಿತ್ರಹಿಂಸೆಯಲ್ಲಿ ಮಹಿಳೆಯ ಪತಿ ಸಹ ಶ್ಯಾಮಿಲಿದ್ದು ತಂಗಿಯ ಈ ಕುಕ್ರತ್ಯ ತಡೆಯುವ ಬದಲು ತನ್ನ ಕಣ್ಣ ಮುಂದೆಯೇ ಪತ್ನಿಗೆ ಹೊಡೆಯುತ್ತಿದ್ದರು ಸಹ ಮೌನಕ್ಕೆ ಶರಣಾಗಿದ್ದು ತಂಗಿಯ ಕುಕ್ರತ್ಯಕ್ಕೆ ಸಾಥ್ ನೀಡಿದಂತಾಗಿದೆ. ಮಹಿಳೆಯ ಜೊತೆಗೆ ಆಕೆಯ ಹಿರಿಯ ಮಗಳಿಗೆ ಮಾತ್ರೆಯನ್ನು ನೀಡಿ ಮಾನಸಿಕವಾಗಿ ಕುಗ್ಗಿಸುವಲ್ಲಿ ಸಹ ಆರೋಪಿ ನೇತ್ರಾವತಿ ಅಮಾನವೀಯ ಕೆಲಸ ಮಾಡಿದ್ದಾಳೆ ಎನ್ನಲಾಗಿದೆ.
ಮಹಿಳೆ ಸತತ ಹಲ್ಲೆ ಚಿತ್ರಹಿಂಸೆಯಿಂದ ಅಸ್ವಸ್ಥತೆಗೊಂಡಿದ್ದು ಮನೆಯಲ್ಲಿ ಯಾರು ಇಲ್ಲದ ವೇಳೆ ಹೇಗೋ ಮನೆಯಿಂದ ತಪ್ಪಿಸಿಕೊಂಡು ರಸ್ತೆಗೆ ಬಂದಿದ್ದು ಆಕೆಯನ್ನು ಕಂಡ ಅಕ್ಕಪಕ್ಕದ ಮನೆಯವರು, ಸಾರ್ವಜನಿಕರು ಅಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದ್ರಷ್ಟವಶಾತ್ ಅಲ್ಲಿನ ಸಿಬ್ಬಂದಿಯೋರ್ವರು ದೂರದ ಭಟ್ಕಳದ ಮಹಿಳೆಯ ಅಣ್ಣನ ಪತ್ನಿಗೆ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ಮಹಿಳೆಯ ಫೋಟೋ ಕಳುಹಿಸಿದ್ದಾರೆ.
ತಕ್ಷಣ ಮಹಿಳೆಯ ದೂರದ ಸಂಬಂಧಿಯಾದ ಕುಂದಾಪುರ ನಾಗೇಂದ್ರ ಗಾಣಿಗಾ ಹಾಗೂ ಮಹಿಳೆಯ ತಾಯಿ ಬೆಂಗಳೂರಿನ ಸರಕಾರಿ ಆಸ್ಪತ್ರೆಗೆ ತೆರಳಿ ಮಹಿಳೆಯ ಸ್ಥಿತಿ ಕಂಡು ಮರುಗಿದ್ದಾರೆ. ಆ ತಕ್ಷಣಕ್ಕೆ ಮಹಿಳೆಯಿಂದ ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಂತರ ತನಿಖೆ ಕೈಗೊಂಡ ಅಲ್ಲಿನ ಪೊಲೀಸರು ಮಹಿಳೆಯ ಪತಿ ನರಸಿಂಹ ಹಾಗೂ ಆತನ ತಂಗಿ ನೇತ್ರಾವತಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ಸದ್ಯ ಮಹಿಳೆಯನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಮುಂದುವರೆಸಿದ್ದಾರೆ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ
ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888