Follow Us On

WhatsApp Group
Important
Trending

ಬೋಟ್ ಹೂಳಿನಲ್ಲಿ ಸಿಲುಕಿ ಅವಾಂತರ: ಈಜಿ ದಡ ಸೇರಿದ 23 ಮಂದಿ: ಇಬ್ಬರು ಬೋಟಿನಲ್ಲಿ ಸಿಲುಕಿಕೊಂಡು ಆತಂಕ

ಹೊನ್ನಾವರ: ಕಾಸರಕೋಡ ಬಂದರು ಅಳಿವೆಯಲ್ಲಿ ಗಂಗೋಳ್ಳಿ ಮೂಲದ ಪರ್ಶಿನ್‌ ಬೋಟ್ ಹೂಳಿನಲ್ಲಿ ಸಿಲುಕಿಕೊಂಡು ಆತಂಕ ಸೃಷ್ಠಿಯಾಗಿತ್ತು.

ಬೋಟಿನಲ್ಲಿದ 25 ಜನರಲ್ಲಿ 23 ಜನರು ಈಜಿ ದಡ ಸೇರಿದರು. ಆದರೆ ಇಬ್ಬರು ಬೋಟನಲ್ಲಿ ಸಿಲುಕಿ ಕೊಂಡಿದ್ದರು. ಕರಾವಳಿ ಕಾವಲು ಪಡೆಯವರಿಗೆ ವಿಷಯ ತಿಳಿಸಿದರೂ ಯಾವುದೆ ಪ್ರಯೋಜನವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.

ಮದ್ಯಾಹ್ನ ಎರಡು ಗಂಟೆಯ ಸುಮಾರಿಗೆ ಸ್ಥಳೀಯ ಬೋಟ್ ಮಾಲಿಕ ಇಕ್ಬಾಲ್ ತಮ್ಮ ಎರಡು ಬೋಟ್ ಗಳ ಮೂಲಕ ಘಟನಾ ಸ್ಥಳಕ್ಕೆ ಒಂದು ಬೋಟನ್ನು ತಾವೆ ಖುದ್ದಾಗಿ ಚಲಾಯಿಸಿಕೊಂಡು , ಇನ್ನೊಂದು ಬೋಟನ್ನು ಚಾಲಕ ಶಂಕರ ಉಪ್ಪಾರ್ ಅವರ ಜೊತೆ ಕೇಲಸಗಾರರ ಜೊತೆ ತೆರಳಿ ಬೋಟ್ ಮತ್ತು ಇಬ್ಬರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಿಗ್ಗೆ 11 ಘಂಟೆಯ ಸುಮಾರಿಗೆ ಘಟನೆ ನಡೆದಿದ್ದು ತಕ್ಷಣ ಕರಾವಳಿ ಕಾವಲು ಪಡೆಯವರಿಗೆ ವಿಷಯ ತಿಳಿಸಿದಾಗ , ಸಿಬ್ಬಂದಿ ಬಂದು ನಮ್ಮಲ್ಲಿ ಬೋಟ್ ಇಲ್ಲ ಎಂದು ಹೇಳಿ ಹೋಗಿದ್ದು ಬಿಟ್ಟರೆ ಯಾವುದೆ ಕ್ರಮ ಕೈಗೊಂಡಿಲ್ಲ‌ ಎನ್ನಲಾಗಿದೆ.

ಬೋಟ್ ರಕ್ಷಣೆ

ಇಲಾಖೆಯವರು ಯಾವುದೆ ಕ್ರಮ ಕೈಗೊಳ್ಳದೆ ಇರುವುದನ್ನು ಗಮನಿಸಿದ ಕಾಸರಕೋಡ ಬೋಟ್ ಮಾಲಕ ಎರಡು ಗಂಟೆಯ ಸುಮಾರಿಗೆ ತಮ್ಮ ಬೋಡ್ ಮತ್ತು ಕೆಲಸಗಾರರ ಜೊತೆ ಘಟನಾ ಸ್ಥಳಕ್ಕೆ ತೆರಳಿ ಬೋಟ್ ಮತ್ತು ಇಬ್ಬರು ಸಿಬ್ಬಂದಿಯನ್ನು ರಕ್ಷಿಸಿದ್ದಾರೆ. ಇನ್ನು ಸ್ವಲ್ಪ ಸಮಯ ಆಗಿದ್ದರೆ ಬೋಟ್ ಮತ್ತು ಇಬ್ಬರು ಕೆಲಸಗಾರರನ್ನು ಕಳೆದು ಕೊಳ್ಳಬೇಕಾಗಿತ್ತು ಎಂದು ಹೇಳಲಾಗುತ್ತಿದೆ.

ಪ್ರತಿ ಬಾರಿ ಅವಘಡವಾದಾಗ ಕರಾವಳಿ ಕಾವಲು ಪಡೆಯವರು ನಮ್ಮಲ್ಲಿ ಬೋಟ್ ಇಲ್ಲ. ತದಡಿಯಲ್ಲಿದೆ ಎಂದು ಹೇಳುತ್ತಾರೆ . ಒಂದು ವೇಳೆ ಹೊನ್ನಾವರದಲ್ಲಿ ಇದ್ದರೆ ರಿಪೇರಿ ಇದೆ ಎಂದು ಉಡಾಪೆ ಉತ್ತರಗಳನ್ನು ಹೇಳುತ್ತಾರೆ ಎನ್ನುವುದು ಮೀನುಗಾರರ ಆರೋಪವಾಗಿದೆ.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ

ಪ್ರಮುಖ ಸುದ್ದಿಗಳು: ಇದನ್ನೂ ಓದಿ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888

Back to top button