Follow Us On

WhatsApp Group
Important
Trending

ಬೀಚ್ ಒಂದರಲ್ಲಿ ನಿಲ್ಲಿಸಿಟ್ಟಿದ್ದ ದೋಣಿಯನ್ನು ಕದ್ದು ಲೈಟ್ ಹೌಸ್ ಗೆ ತೆರಳಿದ ಪ್ರವಾಸಿಗ: ಅಪಾಯದಲ್ಲಿದ್ದ ವ್ಯಕ್ತಿಯನ್ನು ರಕ್ಷಿಸಿದ ಕರಾವಳಿ ಕಾವಲುಪಡೆ ಸಿಬ್ಬಂದಿ

ಕಾರವಾರ : ಇಲ್ಲಿನ ಬೀಚ್ ಒಂದರಲ್ಲಿ ನಿಲ್ಲಿಸಿಟ್ಟಿದ್ದ ದೋಣಿಯನ್ನು ಕದ್ದು ವ್ಯಕ್ತಿಯೊಬ್ಬ ಲೈಟ್ ಹೌಸ್ ನೋಡಲು ಹೋದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕೋಣಿ ಬೀಚ್ ಗೆ ಬಂದಿದ್ದ ಪ್ರವಾಸಿಗನೊಬ್ಬನಿಗೆ ಅರಬ್ಬಿ ಸಮುದ್ರದ ಮಧ್ಯಭಾಗದಲ್ಲಿರುವ ಲೈಟ್ ಹೌಸ್ ನೋಡೋ ಹಂಬಲವಾಗಿದೆ. ಮೊದಲೇ ಕುಡಿದ ಮತ್ತಲ್ಲಿ ಪ್ರವಾಸಿಗ ಬೀಚ್ ನಲ್ಲಿ ಇಟ್ಟಿದ್ದ ನಾಡದೋಣಿ ಯನ್ನು ಕದ್ದು ಲೈಟ್ ಹೌಸ್ ತಲುಪಿದ್ದಾನೆ.

ಸಮುದ್ರದ ಮಧ್ಯದಲ್ಲಿರುವ ಲೈಟ್ ಹೌಸ್ ಪಕ್ಕದ ದ್ವೀಪದಲ್ಲಿ ಸಿಲುಕಿಕೊಂಡಿದ್ದು, ಕರಾವಳಿ ಕಾವಲುಪಡೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಬಳಿಕ ಈತನನ್ನು ಕಾರವಾರದ ಆಸ್ಪತ್ರೆಗೆ ದಾಖಲಿಸಿಲಾಗಿದೆ.ಮಹಾರಾಷ್ಟ್ರ ಮೂಲದ 21 ರ ಯುವಕ ಸಪ್ನಲ್ ಎಂಬ ವ್ಯಕ್ತಿಯೇ ಸಿಕ್ಕಿಬಿದ್ದ ಪ್ರವಾಸಿಗ.

ವಿಸ್ಮಯ ನ್ಯೂಸ್ ಕಾರವಾರ

Back to top button