Follow Us On

Google News
Big News
Trending

ಯಾಣದಲ್ಲಿ ಥೈಲ್ಯಾಂಡ್ ಮಾದರಿಯ ರೋಪ್ ವೇ: ಪ್ರವಾಸೋದ್ಯಮಕ್ಕೆ ಸಿಗಲಿದೆ ಮತ್ತಷ್ಟು ಮೆರುಗು

ಕುಮಟಾ: ಉತ್ತರಕನ್ನಡ ಜಿಲ್ಲೆ ನೂರಾರು ವಿಶೇಷತೆಗಳನ್ನು ಹೊಂದಿರುವ ಪ್ರವಾಸಿ ತಾಣಗಳ ಸ್ವರ್ಗ. ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಯಾಣ ಕೂಡಾ ಒಂದು. ಇಲ್ಲಿನ ಬೃಹದಾಕಾರದ ಕಲ್ಲುಗಳು ಮತ್ತು ಮೊನಚಾಗಿರವ ಶಿಲೆಗಳು ಪ್ರವಾಸಿಗರ ಪ್ರಮುಖ ಆಕರ್ಷಣೆ. ಅಲ್ಲದೆ, ಪ್ರಕೃತಿ ಕೊಡಮಾಡಿದ ಸುಂದರ, ರುದ್ರರಮಣೀಯ ಕ್ಷೇತ್ರಗಳಲ್ಲಿ ಯಾಣ ಅಗ್ರಗಣ್ಯಸ್ಥಾನ ಪಡೆದಿದೆ. ಭೈರವೇಶ್ವರನ ದಿವ್ಯನೆಲೆಯಾಗಿ, ಭಗವದ್ ಭಕ್ತರನ್ನು ತನ್ನತ್ತ ಸೆಳೆಯುತ್ತಿರುವ ತಪೋಭೂಮಿಯೂ ಹೌದು.

ಬೃಹದಾಕಾರವಾದ ಭೈರವೇಶ್ವರ ಶಿಖರದ ಬುಡದಲ್ಲೇ ಭೈರವೇಶ್ವರ ದೇವಸ್ಥಾನವಿದೆ. ದೇವಸ್ಥಾನ ಬೆಳಗ್ಗಿನ 8 ರಿಂದ ಸಂಜೆ 6ರವರೆಗೆ ತೆಗೆದಿರುತ್ತದೆ. ಇಲ್ಲಿನ ಧ್ವಜಸ್ಥಂಭದ ಬಳಿ ನಿಂತು ತಲೆಯೆತ್ತಿ ನೋಡಿದರೆ ಕಾಣುವ ಭೈರವೇಶ್ವರ ಶಿಖರದ ದೃಶ್ಯವೇ ಅದ್ಭುತ.

ಆದರೆ, ಯಾಣಕ್ಕೆ ಹೋಗುವುದು ಸುಲಭದ ಮಾತಲ್ಲ. ದಟ್ಟಕಾನನದಲ್ಲಿ ನಡಿಗೆಯಲ್ಲಿ ಸಾಗಿ, ಕಿಲೋಮೀಟರ್ ನಡೆಯಬೇಕು. ಅಲ್ಲದೆ, ನೂರಾರು ಮೆಟ್ಟಿಲುಗಳನ್ನು ಹತ್ತಬೇಕಿದೆ. ಹೀಗಾಗಿ ಮಧ್ಯವಯಸ್ಕರು ಭೇಟಿ ನೀಡೋದು ಕಷ್ಟಸಾಧ್ಯವಾಗಿದೆ. ಹೀಗಾಗಿ ಎಲ್ಲಾ ವಯಸ್ಕರು ತೆರಳಲು ಅನುಕೂಲವಾಗುವಂತೆ ಮತ್ತು ಇಲ್ಲಿನ ಪ್ರವಾಸೋದ್ಯಮಕ್ಕೆ ಹೊಸ ಟಚ್ ನೀಡುವ ಉದ್ದೇಶದಿಂದ ರೋಪ್ ವೇ ನಿರ್ಮಾಣಕ್ಕೆ ತಯಾರಿ ನಡೆದಿದೆ.

ಈಗಾಗಲೇ ಲೋಕೋಪಯೋಗಿ ಇಲಾಖೆಯಿಂದ ಸರ್ವೇ ಕಾರ್ಯ ನಡೆದಿದೆ. ಸುಮಾರು 350 ಮೀಟರ್ ಉದ್ದದ ರೋಪ್ ವೇ ನಿರ್ಮಾಣ ಆಗಲಿದೆ. ಇದರಿಂದಾಗಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮತ್ತಷ್ಟು ಮೆರಗು ಸಿಗಲಿದ್ದು, ಪ್ರವಾಸಿಗರನ್ನು ಮತ್ತಷ್ಟು ಸೆಳೆಯಲು ಅನುಕೂಲವಾಗಲಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

Back to top button