Important
Trending

ಮೀನುಗಾರಿಕೆಗೆ ತೆರಳಿದ ವೇಳೆ ಬಂಪರ್! 6 ಲಕ್ಷ ಕ್ಕೂ ಅಧಿಕ ಬೆಲೆಯ ಮೀನು ಬಲೆಗೆ

ಭಟ್ಕಳ: ತಾಲೂಕಿನ ಬಂದರನಿoದ ಮೀನುಗಾರಿಕೆಗೆ ತೆರಳಿದ ಮೀನುಗಾರರ ತಂಡದ ಬಲೆಗೆ ಹೇರಳವಾಗಿ ಭೂತಾಯಿ ಮೀನು ಸಿಕ್ಕಿರುವ ಘಟನೆ ನಡೆದಿದೆ. ಎರಡು ತಿಂಗಳು ಮೀನುಗಾರಿಕೆ ನಿಷೇಧದ ನಂತರ ಮೀನುಗಾರಿಕೆಗೆ ತೆರಳಿದ ಮೀನುಗಾರಿಕೆ ತಂಡದ ಬಲೆಗೆ ಹೇರಳವಾದ ಭೂತಾಯಿ ಮೀನು ಸಿಕಿದ್ದು , ಮೀನುಗಾರ ಮುಖದಲ್ಲಿ ಸಂತಸ ತಂದಿದೆ. ಬಿಸಿದ ಬಲೆಗೆ ಸಿಕ್ಕ ಭೂತಾಯಿ ಮೀನಿಗೆ ಸುಮಾರು 6 ಲಕ್ಷ ಕ್ಕೂ ಅಧಿಕ ಬೆಲೆ ಬರಬಹುದು ಎಂದು ಅಂದಾಜಿಸಲಾಗಿದೆ.

ಕರಾವಳಿಯಲ್ಲಿ ಭೂತಾಯಿ ಮೀನಿಗೆ ಬೇಡಿಕೆ ಹೆಚ್ಚು. ಸ್ಥಳೀಯವಾಗಿ ಇದನ್ನು ಬೈಗೆ ಎಂತಲೂ ಕರೆಯಲಾಗುತ್ತದೆ. ಇತರ ಮೀನುಗಳಿಗಿಂತ ಭೂತಾಯಿ ಮೀನಿನ ರುಚಿ ಭಿನ್ನ. ಹೊರ ರಾಜ್ಯಗಳಲ್ಲೂ ಈ ಮೀನಿಗೆ ಬೇಡಿಕೆ ಹೆಚ್ಚು ಎನ್ನುತ್ತಾರೆ ಸ್ಥಳೀಯ ಮೀನುಗಾರರು.

ಅಪರೂಪಕ್ಕೊಮ್ಮೆ ಈ ರೀತಿ ರಾಶಿ ಮೀನುಗಳು ಸಾಂಪ್ರದಾಯಿಕ ಮೀನುಗಾರರ ಬಲೆಗೆ ಬೀಳುತ್ತವೆ. ಹೆಚ್ಚಾಗಿ ಬಂಗುಡೆ, ಭೂತಾಯಿ ಹಾಗೂ ನಂಗ್ ಜಾತಿಯ ಮೀನುಗಳು ಸಿಗುತ್ತವೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕರೆ ಬಂಪರ್ ಲಾಟರಿ ಹೊಡೆದಂತೆ ಎನ್ನುತ್ತಾರೆ ಮೀನುಗಾರರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button