Join Our

WhatsApp Group
Important
Trending

ಗಂಡಬಿಟ್ಟ ಮಹಿಳೆಗೆ ನಂಬಿಸಿ ಮದುವೆಯಾಗಿ ಜೀವನ ನಡೆಸುವ ನಾಟಕ| ಮಹಿಳೆಯ ಮನೆಯಲ್ಲಿದ್ದ ಹಣ, ಮೊಬೈಲ್ ಸೇರಿ ಸಿಕ್ಕ ಸಿಕ್ಕ ವಸ್ತುಗಳನ್ನು ದೋಚಿದ ವ್ಯಕ್ತಿ ಪರಾರಿ

ಶಿರಸಿ: 10 ವರ್ಷದ ಮಗನನ್ನು ಹೊಂದಿದ್ದ ಅಂಗವಿಕಲ ಮಹಿಳೆಯೊಬ್ಬಳನ್ನು ಮದುವೆಯಾಗಿ ನಂಬಿಸಿ, ಮೌಲ್ವಿಯೊಬ್ಬ ಆಕೆಯ ಹಣವನ್ನು ದೋಚಿ ಪರಾರಿಯಾದ ಘಟನೆ ತಾಲೂಕಿನ ದಾಸನಕೊಪ್ಪದಲ್ಲಿ ನಡೆದಿದೆ.

ಅಂಗವಿಕಲ ಮಹಿಳೆಗೆ ವಂಚಿಸಿದ ವ್ಯಕ್ತಿಯನ್ನು ಉತ್ತರ ಪ್ರದೇಶ ಮೂಲದ ಮೌಲ್ವಿ ಮಹ್ಮದ್ ಜಾಕಿರ್ ಎಂದು ಗುರುತಿಸಲಾಗಿದೆ. ಈತ ಬನವಾಸಿಯ ದಾಸನಕೊಪ್ಪದ ಕುರೇಷಿ ಮಕ್ಬುಲ್ ಸಾಬ್ ದರ್ಗಾದ ಲ್ಲಿ ಮೌಲ್ವಿಯಾಗಿದ್ದ.

ಮೋಸಹೋದ ಮಹಿಳೆಗೆ ಹತ್ತು ವರ್ಷದ ಮಗನಿದ್ದು, ಗಂಡ ಬಿಟ್ಟು ಹೋಗಿದ್ದರಿಂದ ದರ್ಗಾ ಬಳಿಯೇ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದಳು ಎನ್ನಲಾಗಿದೆ.

ಈ ವೇಳೆ ಮಹಿಳೆಯನ್ನು ಪರಿಚಯ ಮಾಡಿಕೊಂಡು, ಬಾಳು ಕೊಡುವುದಾಗಿ ನಂಬಿಸಿ, ಈ ಮೌಲ್ವಿ ಮದುವೆಯಾಗಿದ್ದಾನೆ. ಕೆಲವು ತಿಂಗಳ ಕಾಲ ಜೀವನ ನಡೆಸುವ ನಾಟಕವಾಡಿ, ಮಹಿಳೆಯ ಮನೆಯಲ್ಲಿದ್ದ ಹಣ, ಮೊಬೈಲ್ ಸೇರಿದಂತೆ ಎಲ್ಲವನ್ನೂ ದೋಚಿ ಓಡಿಹೋಗಿದ್ದಾನೆ.

ಈ ಸಂಬಂಧ ಮಹಿಳೆ ಇದೀಗ ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿಯ ಪತ್ತೆಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಸ್ಮಯ‌ ನ್ಯೂಸ್ ಶಿರಸಿ

Back to top button