Follow Us On

WhatsApp Group
Important
Trending

ಸೊಸೆ ಜೊತೆ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ರಸ್ತೆ ಮೇಲೆ ಬಿದ್ದು ಅತ್ತೆ ಸಾವು

ಕಾರವಾರ: ಅತ್ತೆ-ಸೊಸೆ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಹಿಂಬದಿಯಲ್ಲಿ ಕುಳಿತಿದ್ದ ಅತ್ತೆ ಆಯತಪ್ಪಿ ಬಿದ್ದು, ಸಾವನ್ನಪ್ಪಿದ ಘಟನೆ ಆರ್ಗಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮೃತಪಟ್ಟ ಮಹಿಳೆಯನ್ನು ನಗರದ ಬಾಡಾದ ನಂದನಗದ್ದಾ ನಿವಾಸಿ ಶಾಲಿನಿ ನಾಯ್ಕ (73) ಎಂದು ಗುರುತಿಸಲಾಗಿದೆ.

ಕೆಲ ಸಾಮಗ್ರಿ ತರಲು ಶಾಲಿನಿ ನಾಯ್ಕ ತನ್ನ ಸೊಸೆ ವೈಶಾಲಿ ನಾಯ್ಕ ಜೊತೆ ಸ್ಕೂಟಿ ಹಿಂಬದಿ ಕುಳಿತು ಆಗಮಿಸುತ್ತಿದ್ದಳು. ಮನೆಗೆ ಬೇಕಾದ ಸಾಮಗ್ರಿ ಖರೀದಿಸಿ ವಾಪಸ್ಸಾಗುತ್ತಿದ್ದ ವೇಳೆ ನೌಕಾನೆಲೆ ಗೇಟ್ ಬಳಿ, ಸ್ಕೂಟಿಯಿಂದ ಆಯತಪ್ಪಿ ರಸ್ತೆ ಮೇಲೆ ಬಿದ್ದಿದ್ದಾಳೆ. ಈ ವೇಳೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾಳೆ ಎನ್ನಲಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button