Important
Trending

44 ಸಾವಿರಕ್ಕೂ ಅಧಿಕ ಲಸಿಕೆ ನಾಳೆ ಉತ್ತರಕನ್ನಡದಲ್ಲಿ ಲಭ್ಯ: ಎಲ್ಲೆಲ್ಲಿ ವ್ಯಾಕ್ಸಿನೇಷನ್ ಇದೆ ನೋಡಿ?

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ ಒಟ್ಟು 44,500 ಕೋವಿಡ್ ಲಸಿಕೆ ಲಭ್ಯವಿದೆ. 41,800 ಕೋವಿಶೀಲ್ಡ್ ಮತ್ತು 2,700 ಕೋವ್ಯಾಕ್ಸಿನ್ ಲಭ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಂಕೋಲಾದಲ್ಲಿ 4 ಸಾವಿರ, ಭಟ್ಕಳ 4 ಸಾವಿರ, ಹೊನ್ನಾವರ 5 ಸಾವಿರ, ಕಾರವಾರ 2 ಸಾವಿರ, ಮುಂಡಗೋಡ 2 ಸಾವಿರ, ಕುಮಟಾ 5 ಸಾವಿರ, ಶಿರಸಿ 5 ಸಾವಿರ, ಸಿದ್ದಾಪುರ 4 ಸಾವಿರ, ಯಲ್ಲಾಪುರ 2 ಸಾವಿರ, ದಾಂಡೇಲಿ 1 ಸಾವಿರ, ಮತ್ತು ಜಿಲ್ಲಾಸ್ಪತ್ರೆಯಲ್ಲಿ 800 ಕೋವಿಶೀಲ್ಡ್ ಲಸಿಕೆ ಲಭ್ಯವಿದೆ. ©Copyright reserved by Vismaya tv

ಅಲ್ಲದೆ, ಹಳಿಯಾಳದಲ್ಲಿ 500, ಹೊನ್ನಾವರ 300, ಕುಮಟಾ 300, ಶಿರಸಿ 1 ಸಾವಿರ, ದಾಂಡೇಲಿ 200, ಜಿಲ್ಲಾಸ್ಪತ್ರೆಯಲ್ಲಿ 400 ಕೋವಿಶೀಲ್ಡ್ ಲಸಿಕೆ ಲಭ್ಯವಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಿಮ್ಮ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

ಅಂಕೋಲಾದಲ್ಲಿ ಮಹಾ ಲಸಿಕಾ ಮೇಳ :ಸೋಮವಾರ 4000  ಕೊವಿಡ್ ಲಸಿಕೆಗಳು ಲಭ್ಯ,                                           

ಅಂಕೋಲಾ ಸೆ. 5: ಜಿಲ್ಲಾಡಳಿತದ ನಿರ್ದೇಶನದಲ್ಲಿ ಎಲ್ಲೆಡೆಯೂ ಲಸಿಕಾಕರಣ ವೇಗ ಪಡೆದುಕೊಳ್ಳುತ್ತಿದೆ. ಇದೇ ವೇಳೆ ತಾಲೂಕಾ ಆರೋಗ್ಯ ಅಧಿಕಾರಿ ಮತ್ತಿತರ ವೈದ್ಯರು, ಇಲಾಖೆ ಹಾಗೂ ಇತರೆ ಸಿಬ್ಬಂದಿಗಳು ಪಟ್ಟಣ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಲಸಿಕಾಕರಣಕ್ಕೆ ಒತ್ತು ನೀಡಿ, ವಿಶೇಷ ಸೇವೆ ಸಲ್ಲಿಸುತ್ತಿದ್ದಾರೆ.          ಸಪ್ಟೆಂಬರ್ 6 ರ  ಸೋಮವಾರ  ಒಟ್ಟೂ 4000 ಡೋಸ್ ಕೋವಿಡ್ ಲಸಿಕೆಗಳ ವಿತರಣೆಗೆ ಆರೋಗ್ಯ ಇಲಾಖೆ ಕ್ರಮ  ಕೈಗೊಂಡಿದ್ದು. ಮಹಾ ಲಸಿಕಾ ಮೇಳಕ್ಕೆ ಸಿದ್ಧತೆ ನಡೆಸಿದೆ. ©Copyright reserved by Vismaya tv

ಶೇಡಿಕುಳಿ (3 20), ಹಿ.ಪ್ರಾ (ಉರ್ದು)ಶಾಲೆ   ಹುಲಿದೇವರ ವಾಡಾ (320), ಬೆಲೇಕೇರಿ (300), ಹಿ.ಪ್ರಾ.ಶಾಲೆ ತಾಳೇಬೈಲ್(500), ಕಿ..ಪ್ರಾ.ಶಾಲೆ ಹೊಸಗದ್ದೆ (400), ಪ್ರಾ. ಆ ಕೇಂದ್ರ ಹಿಲ್ಲೂರು (200), ಉಪಕೇಂದ್ರ ಅಗಸೂರು (360), ಕೋಡ್ಸಣಿ (360), ಗ್ರಾಪಂ ಅವರ್ಸಾ ( 500), ತಾಲೂಕಾ ಆಸ್ಪತ್ರೆ ಅಂಕೋಲಾ (300), ಡಾ. ಕಮಲಾ ಮತ್ತು ಆರ್. ಎನ್. ನಾಯಕ ಆಸ್ಪತ್ರೆ (200), ಆರ್ಯ ಮೆಡಿಕಲ್ ಸೆಂಟರ್ (300) ಡೋಸ್ ಕೋವಿಶೀಲ್ಡ ಲಸಿಕೆಗಳನ್ನು ಹಂಚಿಕೆ ಮಾಡಲಾಗುತ್ತಿದೆ..

ಅವುಗಳಲ್ಲಿ ಪ್ರಥಮ ಡೋಸ್  ಹಾಗೂ ,ದ್ವಿತೀಯ ಡೋಸ್ ಗಳು ಒಳಗೊಂಡಿದೆ. ವಿಕಲಚೇತನರರು , ಗರ್ಭಿಣಿಯರು ಹಾಗೂ  ಬಾಣಂತಿಯರಿಗೆ ವಿಶೇಷ ಪ್ರಾಧಾನ್ಯತೆಯಡಿ ಕೆಲ ಪ್ರಮಾಣದ ಲಸಿಕೆಗಳನ್ನು ಕಾಯ್ದಿರಿಸಲಾಗುತ್ತಿದ್ದು, ಫಲಾನು ಭವಿಗಳು ಲಸಿಕಾ ಮೇಳದ ಪ್ರಯೋಜನ ಪಡೆದುಕೊಳ್ಳುವಂತೆ, ಮತ್ತು ಸಾರ್ವಜನಿಕರು ಸಹಕರಿಸು ವಂತೆ,ತಾಲೂಕಾ ಆರೋಗ್ಯಾಧಿಕಾರಿ ಡಾ. ನಿತೀನ್ ಹೊಸ್ಮೇಲಕರ   ಪ್ರಕಟಣೆಯಲ್ಲಿ ತಿಳಿಸಿದ್ದಾರೆ.                 

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

Back to top button