Follow Us On

Google News
Big News
Trending

ಜಿಲ್ಲೆಯ ಜನತೆಗೆ ಸಿಹಿ ಸುದ್ದಿ: ಆರು ಕರೊನಾ ಸೋಂಕಿತರು ಬಿಡುಗಡೆ

ಆರು ಕರೊನಾ ಸೋಂಕಿತರು ಗುಣಮುಖ
ಕಾರವಾರದ ಕರೊನಾ ವಾರ್ಡ್ ನಿಂದ ಡಿಸ್ಚಾರ್ಜ್
ಸಕ್ರೀಯ ಕರೊನಾ ಸೋಂಕಿತರ ಸಂಖ್ಯೆ 32ಕ್ಕೆ ಇಳಿಕೆ
ಭಟ್ಕಳದಲ್ಲಿ ಸಂಪೂರ್ಣವಾಗಿ ಕರೊನಾ ನಿಯಂತ್ರಣಕ್ಕೆ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕರೊನಾ ಸೋಂಕಿತರು ಗುಣಮುಖರಾಗುವ ಪ್ರಮಾಣ ಹೆಚ್ಚಿದ್ದು, ಜಿಲ್ಲಾಡಳಿತದ, ವೈದ್ಯರ ಕಾರ್ಯವೈಖರಿಗೆ ಸಾರ್ವಜನಿಕರ ಮೆಚ್ಚುಗೆ ಕೇಳಿಬರುತ್ತಿದೆ. ಪಕ್ಕದ ಜಿಲ್ಲೆಗೆ ಹೋಲಿಸಿದ್ರೆ, ಕರೊನಾ ಸೋಂಕು ಜಿಲ್ಲೆಯಲ್ಲಿ ನಿಯಂತ್ರಣದಲ್ಲಿದೆ. ಭಟ್ಕಳದಲ್ಲಿ ಸಂಪೂರ್ಣವಾಗಿ ಕರೊನಾ ನಿಯಂತ್ರಣಕ್ಕೆ ಬಂದಿದ್ದು, ಹೊಸ ಪ್ರಕರಣ ಕಂಡುಬAದಿಲ್ಲವಾಗಿದೆ. ಅಲ್ಲದೆ, ಮಹಾರಾಷ್ಟçದಿಂದ ಬಂದವರಲ್ಲಿ ಮಾತ್ರ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಇವರೆಲ್ಲರೂ ಕ್ವಾರಂಟೈನ್‌ನಲ್ಲಿರುವುದರಿAದ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲವಾಗಿದೆ.
ಇದೀಗ, ಜಿಲ್ಲೆಯಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದ್ದ ಆರು ರೋಗಿಗಳು ಗುಣಮುಖರಾಗಿದ್ದು, ಕಾರವಾರದ ಮೆಡಿಕಲ್ ಕಾಲೇಜಿನ ಕರೊನಾ ವಾರ್ಡಿನಿಂದ ಬಿಡುಗಡೆ ಮಾಡಲಾಗಿದೆ. ಮೇ 18 ರಂದು ದಾಖಲಾಗಿದ್ದ 28 ವರ್ಷದ ಮಹಿಳೆ ,36 ವರ್ಷದ ಮಹಿಳೆ, 40 ವರ್ಷದ ಹಾಗು37 ವರ್ಷದ ಪುರುಷ,ಭಟ್ಕಳದ 27ವರ್ಷದ ಪುರುಷ , ಮೇ.14 ರಂದು ದಾಖಲಾಗಿದ್ದ ಕುಮಟಾ ಮೂಲದ 26 ವರ್ಷದ ವ್ಯಕ್ತಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಈ ಮೂಲಕ ಉತ್ತರಕನ್ನಡ ಜಿಲ್ಲೆಯಲ್ಲಿ ಸಕ್ರೀಯ ಕರೊನಾ ಸೋಂಕಿತರ ಸಂಖ್ಯೆ 32ಕ್ಕೆ ಇಳಿಕೆಯಾದಂತಾಗಿದೆ.

[sliders_pack id=”1487″]

Back to top button