“ನ್ಯಾಷನಲ್ ನ್ಯೂಟ್ರಿಶನ್ ವ್ಹೀಕ್” ಅಂಗವಾಗಿ ಹಂಗರ್ ಕಾರ್ಯಕ್ರಮ: 400 ಜನರಿಗೆ ಸಾಕಾಗುವಷ್ಟು ಅಕ್ಕಿ,ಬೇಳೆ,ಎಣ್ಣೆ,ತರಕಾರಿ ಇನ್ನಿತರ ಆಹಾರ ಸಾಮಗ್ರಿ ವಿತರಣೆ

ಹೊನ್ನಾವರ: ಲಯನ್ಸ ಕ್ಲಬ್  ವತಿಯಿಂದ “ನ್ಯಾಷನಲ್ ನ್ಯೂಟ್ರಿಶನ್ ವ್ಹೀಕ್” ಅಂಗವಾಗಿ ಹಂಗರ್ ಕಾರ್ಯಕ್ರಮವನ್ನು ತಾಲೂಕಿನ ಸರಳಗಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದ ಅಂಗವಾಗಿ ಸುಮಾರು 400 ಜನರಿಗೆ ಸಾಕಾಗುವಷ್ಟು ಅಕ್ಕಿ,ಬೇಳೆ,ಎಣ್ಣೆ,ತರಕಾರಿ ಇನ್ನಿತರ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ವಿನೋದ ನಾಯ್ಕಮಾತನಾಡಿ,ಗ್ರಾಮಾಂತರ ಪ್ರದೇಶದ ಬಡ ಜನತೆಗೆ ಅನುಕೂಲವಾಗಲೆಂದು ಇಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,ಹಸಿವು ಮುಕ್ತ ಸಮಾಜ ನಿರ್ಮಾಣದಲ್ಲಿ ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಪಾತ್ರ ಅತ್ಯಂತ ಹಿರಿದಾದದ್ದು ಎಂದರು.ಖಜಾಂಚಿ ಎಮ್.ಜೆ.ಎಫ್ ಲಯನ್ ಎಸ್.ಜೆ.ಕೈರನ್,ಝಡ್ ಸಿ ಎಮ್.ಜೆ.ಎಫ್ ಲಯನ್ ರಾಜೇಶ ಸಾಳೇಹಿತ್ತಲ್, ಲಯನ್ ಯೋಗೇಶ ರಾಯ್ಕರ್ ಮಾತನಾಡಿದರು. ಗ್ರಾಮ್ ಪಂಚಾಯತ್ ಸದಸ್ಯರಾದ ತಬರೈಜ ಖಾನ್,ಗಣೇಶೋತ್ಸವ ಸಮಿತಿಯ ನಾಗಪ್ಪ ಉಪ್ಪಾರ ಉಪಸ್ಥಿತರಿದ್ದರು. ಲಯನ್ ಎನ್.ಜಿ.ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ಸಹಕರಿಸಿದ ಸರ್ವರಿಗೂ ವಂದಿಸಿದರು.

ವಿಸ್ಮಯ ನ್ಯೂಸ್, ಹೊನ್ನಾವರ

Exit mobile version