Follow Us On

WhatsApp Group
Big News
Trending

ಗೊಂದಲದ ವಾತಾವರಣ: ಬೆಲೆ ಏರಿಕೆ ಬಿಸಿ: ಸಂಭ್ರಮ ಕಳೆದುಕೊಂಡ ಗಣೇಶೋತ್ಸವ

ಕಾರವಾರ: ಗಣೇಶೋತ್ಸವ ಬಗೆಗಿನ ಗೊಂದಲದ ವಾತಾವರಣ, ಬೆಲೆ ಏರಿಕೆ ಹಾಗೂ ಕೊರೊನಾ ಆತಂಕದಿಂದಾಗಿ ಈ ಬಾರಿಯ ಗಣೇಶ ಚತುರ್ಥಿ ಸಂಭ್ರಮ ಕಳೆ ಕಳೆದುಕೊಂಡಿದ್ದು, ಉತ್ತರಕನ್ನಡ ಜಿಲ್ಲೆಯ ಕಾರವಾರದ ಮಾರುಕಟ್ಟೆಗಳಲ್ಲಿ ಕೆಲವೇ ಕೆಲವು ಮಂದಿ ಉತ್ಸಾಹವಿಲ್ಲದೇ ಹಬ್ಬದ ಖರೀದಿಯಲ್ಲಿ ತೊಡಗಿಕೊಂಡಿದ್ದು ಕಂಡು ಬಂತು.

ಹೌದು, ಉತ್ತರಕನ್ನಡ ಜಿಲ್ಲೆಯ ಕರಾವಳಿಯ ಅದರಲ್ಲಿಯೂ ಕಾರವಾರದ ಗಣೇಶೋತ್ಸವ ಅಂದ್ರೆ ಈ ಮೊದಲಿನಿಂದಲೂ ಸಾಕಷ್ಟು ಪ್ರಸಿದ್ಧಿ ಪಡೆದಿತ್ತು. ಹಬ್ಬಕ್ಕೆ ವಾರ ಬಾಕಿ ಇರುವಾಗಲೇ ನಗರ ಪ್ರದೇಶಗಳಲ್ಲಿ, ಅಂಗಡಿ ಮುಂಗಟ್ಟುಗಳಲ್ಲಿ ಹಬ್ಬದ ಸಂಭ್ರಮ ಕಳೆ ಕಟ್ಟುತಿತ್ತು. ಆದರೆ ಕಳೆದೊಂದು ವರ್ಷದಿಂದ ಕೊರೊನಾ ಹೆಮ್ಮಾರಿ ಆತಂಕದ ಕಾರಣಕ್ಕೆ ಹಬ್ಬದ ಸಂಭ್ರಮವೇ ಇಲ್ಲದಂತಾಗಿದ್ದು, ಈ ಭಾರಿ ಕೂಡ ಅದೇ ಪರಿಸ್ಥಿತಿ ಮುಂದುವರಿದಿದೆ.

ನಗರದ ಬಹುತೇಕ ಮಾರುಕಟ್ಟೆಗಳಲ್ಲಿ ವ್ಯಾಪಾರಸ್ಥರು ಕಿಕ್ಕಿರಿದು ತುಂಬಿರುತ್ತಿದ್ದರಾದರೂ ಈ ಭಾರಿ ವ್ಯಾಪಾರಸ್ಥರ ಸಂಖ್ಯೆ ಕಡಿಮೆಯಾಗಿದೆ. ಹಬ್ಬ ನಾಳೆ ಇದ್ದರೂ ಕೂಡ ಬಹುತೇಕ ಮಾರುಕಟ್ಟೆಗಳಲ್ಲಿ ಜನಸಂದಣಿ ಕಡಿಮೆಯೇ ಇದೆ. ನಗರದ ಸವಿತಾ ಸರ್ಕಲ್, ಕೊಡಿಭಾಗದ ರಸ್ತೆ, ಮೀನು ಮಾರುಕಟ್ಟೆ ಎದುರು ಸ್ವಲ್ಪ ಪ್ರಮಾಣದಲ್ಲಿ ವ್ಯಾಪಾರಸ್ಥರಿದ್ದು, ಜನ ಖರೀದಿಯಲ್ಲಿ ತೊಡಗಿಕೊಂಡಿದ್ದಾರೆ.  

ಇನ್ನು ಈ ಮೊದಲು ಉತ್ತರಕರ್ನಾಟಕ ಭಾಗದಿಂದ ಬಂದು ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ಥರು ಕೊರೊನಾ ಕಾರಣಕ್ಕೆ ಮಾರುಕಟ್ಟೆಗಳು ಬಂದಾದ ಬಳಿಕ ಮತ್ತೆ ಓಪನ್ ಮಾಡದ ಕಾರಣ ಯಾರು ಕೂಡ ಆಗಮಿಸುತ್ತಿಲ್ಲ‌. ಇದರಿಂದ ಮಾರಾಟಕ್ಕೆ ಬಂದ ವ್ಯಾಪಾರಸ್ಥರು ಕೂಡ ಹೆಚ್ಚಿನ ಬೆಲೆಗೆ ತರಕಾರಿ, ಹೂ ಹಣ್ಣು ಮಾರಾಟ ಮಾಡುತ್ತಿದ್ದು ಗ್ರಾಹಕರಿಗೆ ಹಬ್ಬದ ಸಂದರ್ಭದಲ್ಲಿ ಕೈ ಸುಟ್ಟುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಇದಲ್ಲದೆ ಸರ್ಕಾರ ಕೂಡ ಕೊರೊನಾ ಆತಂಕದ ಕಾರಣಕ್ಕೆ ಕೊನೆ ಹಂತದಲ್ಲಿ ಗಣೇಶ ಚತುರ್ಥಿ ಮಾರ್ಗಸೂಚಿ ಪ್ರಕಟಿಸಿದ ಕಾರಣ ಜನ ಕೂಡ ಸಾಋವಜನಿಕವಾಗಿ ಗಣೇಶನನ್ನು ಪ್ರತಿಷ್ಠಾಪಿಸುವ ಕುರಿತು ಗೊಂದಲಕ್ಕೊಳಗಾಗಿದ್ದಾರೆ. ಇದಲ್ಲದೆ ಕೊರೊನಾ ಆತಂಕ ಕೂಡ ಜಿಲ್ಲೆಯಲ್ಲಿ ಹಬ್ಬದ ಸಂಭ್ರಮಕ್ಕೆ ಕೊಕ್ಕೆ ಹಾಕಿದಂತಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581

Back to top button