Important
Trending

ಮನೆಯ ಮುಂಭಾಗದಲ್ಲಿ ಸಂಗ್ರಹಿಸಿಟ್ಟಿದ್ದ ಪಕ್ಕದ ಮನೆಯ ಅಡಿಕೆಯನ್ನೇ ಕದ್ದು ಸಿಕ್ಕಿಬಿದ್ದ: ಕೆಲಸ ಕೊಟ್ಟ ಮನೆಗೆ ದ್ರೋಹ ಬಗೆದವನೂ ಅಂದರ್

ಅಂಕೋಲಾ: ಅಡಿಕೆ ಕದ್ದ ಮಾನ ಆನೆ ಕೊಟ್ಟರೂ ಬಾರದು ಎಂಬ ಮಾತಿದೆ. ಆದರೂ ಅಡಿಕೆ ಕದಿಯಲು ಹೋದ ಆರೋಪದಡಿ ಸಿಹಿ ತಿನಿಸು ವ್ಯಾಪಾರಿ ಮತ್ತು ಆತನ ಜೊತೆ ಇನ್ನೊಬ್ಬ ಪೊಲೀಸ್ ಅತಿಥಿಗಳಾದ ಘಟನೆ ಅಂಕೋಲಾದಲ್ಲಿ ನಡೆದಿದೆ. ಅಂಕೋಲಾ ತಾಲೂಕಿನ ಗ್ರಾಮೀಣ ಭಾಗವಾದ ನೆವಳಸೆಯಲ್ಲಿ ರೈತನೊಬ್ಬ ತನ್ನ ತೋಟದ ಅಡಿಕೆ ಗಳನ್ನು ಸಂಗ್ರಹಿಸಿ ಮನೆಯ ಮುಂಭಾಗದಲ್ಲಿ ಇಟ್ಟಿದ್ದ .

ರಾತ್ರಿ ವೇಳೆ ಆತನಿಗೆ ಅರಿವಿಲ್ಲದಂತೆ ಅಡಿಕೆ ಚೀಲಗಳನ್ನು ಕಳ್ಳರು ಕದ್ದೊಯ್ದಿದ್ದರು. ತನ್ನ ಮನೆಯಲ್ಲಿದ್ದ ಅಡಿಕೆ ಕಳ್ಳತನವಾಗಿರುವ ಕುರಿತು ಮಾಲಕ ನೀಡಿದ್ದ ದೂರಿನನ್ವಯ ತನಿಖೆ ಕೈಗೊಂಡ ಪೋಲಿಸರು, ಕೆಲ ಸಾಕ್ಷಾಧಾರಗಳನ್ನು ಕಲೆಹಾಕಿ, ಈರ್ವರು ಶಂಕಿತರನ್ನು ವಿಚಾರಣೆ ಮಾಡಿ, ಪುನಃ ಮನೆಗೆ ಕಳುಹಿಸಿದ್ದು, ತದನಂತರವೂ ಅವರ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. 

ನೆವಳಸೆಯ ಆನಂದು ನಾಯ್ಕ ಮತ್ತು ಚಂದುಮಠದ ಮಾರುತಿ ಗೌಡ ಬಂಧಿತ ಆರೋಪಿಗಳಾಗಿದ್ದಾರೆ.. ಆನಂದು ನಾಯ್ಕ, ಕಳ್ಳತನ ನಡೆದ ಮನೆಯ ಪಕ್ಕದ ನಿವಾಸಿಯಾದ್ದು ಇನ್ನೋರ್ವ ಆರೋಪಿ ಮಾರುತಿ ಗೌಡ, ಕಳುವಾಗಿದ್ದ ಮಾಲೀಕನ ಹೊಸ ಮನೆಯ ನಿರ್ಮಾಣದಲ್ಲಿ ಕೆಲಸಗಾರನಾಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದ ಎನ್ನಲಾಗಿದೆ.                     

ಇವರಿಬ್ಬರೂ ಸೇರಿಕೊಂಡು ಗುರುವಾರ ತಡರಾತ್ರಿ ಮನೆಯ ಮುಂಭಾಗದಲ್ಲಿ ಸಂಗ್ರಹಿಸಿಟ್ಟ  ಅಡಿಕೆ ಚೀಲಗಳಲ್ಲಿ ಹಲವು ಚೀಲಗಳನ್ನು  ಕದ್ದೊಯ್ದಿದ್ದರು.   ನೆವಳಸೆಯ ಮಾದೇವ ಹುಲಿಯಾ ಗೌಡ ಎನ್ನುವವರ ಮುಕ್ತಾಯ ಹಂತದಲ್ಲಿರುವ ಮನೆಯಲ್ಲಿ ಮುಂಬಾಗಿಲನ್ನು ಅಳವಡಿಸಿರಲಿಲ್ಲ,  ಖಚಿತ ಸುಳಿವಿನ ಆಧಾರದ ಮೇಲೆ ಆರೋಪಿತರು ಕದ್ದ ಅಡಿಕೆ ಮಾರಾಟ ಮಾಡುವ ಯತ್ನ ನಡೆಸಿರುವಾಗಲೇ, ಅವರನ್ನು ಬಂಧಿಸಿದ ಪೊಲೀಸರು ಆರೋಪಿತರಿಂದ 1 ಕ್ಷಿಂಟಾಲ 38 ಕೆ.ಜಿ ತೂಕದ ಅಡಿಕೆ ಹಾಗೂ , ಅಡಿಕೆ ಸಾಗಾಟಕ್ಕೆ ಬಳಸಿದ ಹಳೆಯ ಕಾರ್ ಒಂದನ್ನು ವಶಪಡಿಸಿಕೊಂಡಿದ್ದಾರೆ.

ಈ ಕಾರ್ ಗೆ ಮುಂಬಂದಿ ನಂಬರ್ ಪ್ಲೇಟ್ ಸಹ ಇಲ್ಲವಾಗಿದ್ದು, ಹಿಂಬಂದಿ ಸೀಟ್ ಗಳನ್ನು ತೆರವು ಗೊಳಿಸಲಾಗಿದೆ. ಸಿಹಿ ತಿನಿಸು ವ್ಯಾಪಾರಸ್ಥ ಎನ್ನಲಾದ ಅನಂದ ನಾಯ್ಕ ಅಡಿಕೆ ಕದಿಯಲು ಹೋಗಿ ಕಹಿ ಅನುಭವ ಪಡುವಂತಾಯಿತೇ ಎಂಬ ಪ್ರಶ್ನೆಯ ನಡುವೆಯೇ, ಈ ಭಾಗದಲ್ಲಿ ಆಗಾಗ ಇಂತಹ ಚಿಕ್ಕ ಪುಟ್ಟ ಕಳ್ಳತನ ನಡೆದಿತ್ತಾದರೂ , ಪ್ರಕರಣ ದಾಖಲಾಗದೇ  ಅದಾವುದೋ ಕಳ್ಳರಿಗೆ ಲಂಗು ಲಗಾಮಿಲ್ಲವಾಗಿತ್ತು. ಈಗ ಪೋಲೀಸರ ತ್ವರಿತ ಕಾರ್ಯಾಚರಣೆ ಜನತೆಗೆ ಕೊಂಚ ನೆಮ್ಮದಿ ತಂದಿದೆ ಎನ್ನುವುದು ಕೆಲ ಸ್ಥಳೀಯರ ಅನಿಸಿಕೆಯಾಗಿದೆ.

ಒಂದೆಡೆ ಅಡಿಕೆಗೆ ಬಂದಿರುವ ಕೊಳೆರೋಗ ,ಇತ್ತೀಚಿಗೆ ಕಾಡಿದ ನೆರೆಹಾವಳಿ ಇನ್ನಿತರೆ ಕಾರಣಗಳಿಂದ ರೈತರಿಗೆ ಫಸಲು ದೊರೆಯುವುದೇ ಕಷ್ಟವಾಗಿದ್ದು,ಒಂದೊಮ್ಮೆ ಫಸಲು ದೊರೆತರು ಕಳ್ಳಕಾಕರಿಂದ ರಕ್ಷಿಸುವುದು ಸವಾಲಿನ ಕೆಲಸವಾಗಿದೆ.ಅಡಿಕೆಗೆ ಹೆಚ್ಚುತ್ತಿರುವ ಬೇಡಿಕೆಯಿಂದ ಮುಂದೆ ಬೆಲೆ ಹೆಚ್ಚಳವಾಗುವ ಸಾಧ್ಯತೆಯೂ ಇದ್ದು,ಕಳ್ಳರ ವಕ್ರದೃಷ್ಟಿ ಅಡಿಕೆ ಮೇಲೆ ಬೀಳುವಂತಾಗಿದೆ.

ಸಿಪಿಐ ಸಂತೋಷ ಶೆಟ್ಟಿ, ಪಿ.ಎಸೈ ಪ್ರವೀಣ ಕುಮಾರ, ಅಪರಾಧ ವಿಭಾಗದ ಹವಾಲ್ದಾರ ಮೋಹನದಾಸ ಶೇಣ್ವಿ, ಸಿಬ್ಬಂದಿಗಳಾದ ಮಂಜುನಾಥ ಲಕ್ಮಾಪುರ, ಭಗವಾನ ಗಾಂವಕರ, ಶೇಖರ ಸಿದ್ಧಿ, ಪರಮೇಶ, ಚಾಲಕ ಜಗದೀಶ ನಾಯ್ಕ ಸೇರಿದಂತೆ ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.                 

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581

Back to top button