ದಾರಿ ಮಧ್ಯೆ ಕಾಣೆಯಾಗಿದ್ದ ಮಾಂಗಲ್ಯ ಸರ ಕೊನೆಗೂ ಸಿಕ್ತು: ಆಟೋ ಚಾಲಕನ ಪ್ರಾಮಾಣಿಕತೆಗೊಂದು ಸಲಾಂ

ಪ್ರಾಮಾಣಿಕತೆ ಮೆರೆದ ಆಟೋ ಚಾಲಕನಿಗೊಂದು ಅಭಿನಂದನೆ ಸಲ್ಲಿಸಿ

ಕುಮಟಾ: ಬೆಳಿಗ್ಗೆ ಬ್ಯಾಂಕಿಗೆ ಹೋಗುವಾಗ ಕುಮಟಾ ಮಾರ್ಗ ಮಧ್ಯೆ ಮಾಂಗಲ್ಯ ಸರವನ್ನು  ಮಹಿಳೆಯೊಬ್ಬಳು ಕಳೆದುಕೊಂಡಿದ್ದಳು. ಮಾಂಗಲ್ಯ ಸರ ಹೇಗೆ ಬಿದ್ದಿದೆ? ಎಲ್ಲಿ ಬಿದ್ದಿದೆ ಎಂದು ಗೊತ್ತಿಲ್ಲವಾಗಿದ್ದು, ಆತಂಕಗೊಂಡಿದ್ದಳು. ಹಳದೀಪುರದಿಂದ‌ ಮಾದನಗೇರಿಗೆ ಹೋಗುವಾಗ ಮಾಂಗಲ್ಯ ಸರ ಕಾಣೆಯಾಗಿತ್ತು.

ಕಳೆದುಕೊಂಡ ಮಾಂಗಲ್ಯ ಸರದ ಹುಡುಕಾಟದಲ್ಲಿ ವಿಜೇತ್ ಷಲಿಲ್  ತೊಡಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಮಾಂಗಲ್ಯ ಕಳೆದುಕೊಂಡ ಬಗ್ಗೆ ” ನಮ್ಮ‌  ಯುಕೆ”  ಸೇರಿದಂತೆ ಹಲವೆಡೆ ಸಾಮಾಜಿಕ ಜಾಲತಾಣದಲ್ಲಿ ವಿಷಯ ಪ್ರಕಟಿಸಲಾಗಿತ್ತು.

ಇದನ್ನು‌ ನೋಡಿದ ಕುಮಟಾ ಬಸ್ ನಿಲ್ದಾಣದ ಆಟೋ ಚಾಲಕ ಶೋಕನಮಕ್ಕಿ ನಿವಾಸಿ ಮಂಜುನಾಥ ಪಟಗಾರ  ಮಾಂಗಲ್ಯ ಸರ ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿದರು. ಇದಾದ ಬಳಿಕ ಮಹಿಳೆಯನ್ನು ಆಟೋ ನಿಲ್ದಾಣ ಬಳಿ ಕರೆಯಿಸಿ ಅಲ್ಲೆಯೇ ಇದ್ದ  ಪೋಲಿಸ  ಸಿಬ್ಬಂದಿ ಸಮ್ಮಖದಲ್ಲಿ ಮಹಿಳೆಗೆ ಮಾಂಗಲ್ಯ ಸರ ಮರಳಿಸಲಾಯಿತು.

ದುಡ್ಡು, ಚಿನ್ನ ಅಂದರೆ ಬಾಯಿ ಬಾಯಿ ಬಿಡುವ ಇಂದಿನ‌ ದಿನಮಾನದಲ್ಲಿ , ತನಗೆ ಸಿಕ್ಕ ಚಿನ್ನದ ಸರ ಮರಳಿಸಿ ಪ್ರಮಾಣಿಕತೆ ಮರದ ಆಟೋ ಚಾಲಕನಿಗೊಂದು ಸಲಾಂ.  ನೀವೂ ಕಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿ.

ವಿಸ್ಮಯ ನ್ಯೂಸ್ ಕುಮಟಾ

ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581

Exit mobile version