ಅಂಕೋಲಾದಲ್ಲಿ ನಾಳೆ 1080 ಲಸಿಕೆ ಲಭ್ಯತೆ: ಇಂದು ಶೂನ್ಯ ಪಾಲಿಟಿವ್ ಕೇಸ್

ಅಂಕೋಲಾ ಸೆ 20: ತಾಲೂಕಿನಲ್ಲಿ ಸೋಮವಾರ ಯಾವುದೇ ಹೊಸ ಕೋವಿಡ್ ಪಾಸಿಟಿವ್ ಕೇಸ ದಾಖಲಾಗಿಲ್ಲ. ಈ ಮೂಲಕ 17 ಸಕ್ರಿಯ ಪ್ರಕರಣಗಳಿವೆ.

ಕ್ರಿಮ್ಸ್ ಕಾರವಾರ ಮತ್ತು ಕುಮಟಾದ ಖಾಸಗಿ ಆಸ್ಪತ್ರೆದಲ್ಲಿ ತಲಾ ಓರ್ವ ಸೋಂಕಿತರು ಚಿಕಿತ್ಸೆಗೊಳಪಟ್ಟಿದ್ದು, ಸೋಂಕು ಲಕ್ಷಣವುಳ್ಳ 15 ಜನರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಆರಂಭದಿಂದ ಈವರೆಗೆ ತಾಲೂಕಿನಲ್ಲಿ ಒಟ್ಟೂ 3676 ಸೋಂಕು ಪ್ರಕರಣಗಳು ಪತ್ರೆಯಾಗಿದ್ದು, ಒಟ್ಟೂ 72 ಕರೊನಾ ಸಾವಿನ ಪ್ರಕರಣಗಳು ದಾಖಲಾಗಿದೆ.

ಸೆ 21 ರ ಮಂಗಳವಾರ ಪುರಲಕ್ಕಿ ಬೇಣ ( 200), ಹಿ.ಪ್ರಾ ಶಾಲೆ ಗುಂಡಬಾಳ (100), ಹಿಪ್ರಾ ಶಾಲೆ ತಳಗದ್ದೆ (280)ತಾಲೂಕು ಆಸ್ಪತ್ರೆ (300), ಗ್ರಾಪಂ ಅಗಸೂರು (100), ಪ್ರಾ ಆ ಕೇಂದ್ರ ಹಾರವಾಡ (100) ಸೇರಿ ಒಟ್ಟೂ 1080 ಡೋಸ್ ಕೊವಿಡ್ ಲಸಿಕೆಗಳನ್ನು ಹಂಚಿಕೆ ಮಾಡಲಾಗಿದ್ದು,ಸಾರ್ವಜನಿಕರು ಲಸಿಕೆ ಪ್ರಯೋಜನ ಪಡೆದುಕೊಳ್ಳುವಂತೆ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version