Follow Us On

WhatsApp Group
Big News
Trending

ಮನೆಯಲ್ಲಿ ಪಲ್ಲಿ, ಜಿರಲೆ ಬರುತ್ತೆ! ಅಭಿಮಾನಿ ಮನೆಯಿಂದ ವಾಪಸ್ ಬೆಂಗಳೂರಿಗೆ ತೆರಳಿದ ಚಿತ್ರನಟಿ ವಿಜಯಲಕ್ಷ್ಮಿ: ಅಸಲಿಗೆ ನಡೆದಿದ್ದೇನು ನೋಡಿ?

ಹೊನ್ನಾವರ: ಅಭಿಮಾನಿಯೊಬ್ಬರು ಅಭಿಮಾನದಿಂದ ಸಂಕಷ್ಟದಲ್ಲಿದ್ದ ಚಿತ್ರನಟಿ ವಿಜಯಲಕ್ಷ್ಮಿಗೆ ತಾವೇ ಬಾಡಿಗೆ ಕೊಟ್ಟು ಮನೆ ಮಾಡಿಸಿಕೊಟ್ಟಿದ್ದರು.

ಆದರೆ, ಇಲ್ಲಿ ಒಂದು ವಾರದಿಂದ ಇದ್ದ ವಿಜಯಲಕ್ಷ್ಮಿ, ಇದೀಗ ಮನೆಯಲ್ಲಿ ಪಲ್ಲಿ, ಜಿರಲೆ ಬರುತ್ತದೆ. ಈ ಮನೆ ಸರಿಯಿಲ್ಲ ಎಂದು ಹೇಳಿಕೊಂಡು ತಾಯಿ ಮತ್ತು ಅಕ್ಕನನ್ನು ಕರೆದುಕೊಂಡು ಬೆಂಗಳೂರಿಗೆ ವಾಪಸ್ ತೆರಳಿದರು.

ಹೌದು, ಕೋವಿಡ್ ಸಮಯದಲ್ಲಿ ಆಸ್ಪತ್ರೆಯ ಬಿಲ್ ಕಟ್ಟಲಾಗದೇ ತೊಂದರೆಗೊಳಗಾಗಿದ್ದ ಚಿತ್ರ ನಟಿ ವಿಜಯಲಕ್ಷ್ಮಿ ತಾನು ಬದುಕುವುದಿಲ್ಲ ಸಹಾಯ ಬೇಕಿದೆ, ಉಳಿದುಕೊಳ್ಳಲು ನನಗೆ ಮನೆ ಬೇಕಿದೆ ಎಂದು ಸೋಷಿಯಲ್ ಮೀಡಿಯಾ ಮೂಲಕ ಕೇಳಿಕೊಂಡಿದ್ದಳು.

ಈ ವೇಳೆ ಇದನ್ನು ಗಮನಿಸಿದ್ದ ಉತ್ತರ ಕನ್ನಡ ಜಿಲ್ಲೆಯ ದೀಪಾ ತೂಕರಾಮ್ ನಾಯ್ಕ ರವರು ಅವರು, ವಿಜಯಲಕ್ಷ್ಮಿ ಯವರನ್ನು ಸಂಪರ್ಕ ಮಾಡಿ ಅವರ ಆಸ್ಪತ್ರೆ ಬಿಲ್ ಮೊತ್ತವನ್ನು ಬರಿಸಿ, ಹೊನ್ನಾವರದ ಕರ್ಕಿಯಲ್ಲಿದ್ದ ತಂದೆ ತುಕಾರಾಮ್ ರವರಿಗೆ ಕರೆ ವಿಷಯ ತಿಳಿಸಿ, ಮನೆಯ ವ್ಯವಸ್ಥೆ ಮಾಡಲು ತಿಳಿಸಿದ್ದರು.

ಮಗಳ ಕೋರಿಕೆಯಂತೆ ತುಕಾರಾಮ್ ರವರು ಕರ್ಕಿಯಲ್ಲಿ ತಮ್ಮದೇ ವೆಚ್ಚದಲ್ಲಿ ಬಾಡಿಗೆ ಮನೆ ಮಾಡಿ ಅವರ ಕುಟುಂಬವನ್ನು ನೋಡಿಕೊಂಡಿದ್ದಾರೆ. ಆದರೆ, ಇದೀಗ ಏಕಾಏಕಿ ಚಿತ್ರನಟಿ, ಲೈವ್ ನಲ್ಲಿ ಬಂದು ಮನೆ ಸರಿ ಇಲ್ಲ ಎಂದು ಹೇಳಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.

ವಿಜಯಲಕ್ಷ್ಮಿ ಅವರ ತಾಯಿ ಮತ್ತು ಅಕ್ಕ ಆರೋಗ್ಯ ಸರಿಯಾಗಿಲ್ಲ. ಹಾಸಿಗೆಯಲ್ಲೇ ಇರಬೇಕಾದ ದುಸ್ಥಿತಿ ಇದೆ. ಇದನ್ನೆಲ್ಲ ನೋಡಿದ ತುಕಾರಾಮ್ ರವರು ಇವರನ್ನು ಇಲ್ಲಿಯೇ ಆಶ್ರಮದಲ್ಲಿ ಬಿಡಿ. ನಾವು ನೋಡಿಕೊಳ್ಳುತ್ತೇವೆ. ನೀವು ಬೆಂಗಳೂರಿಗೆ ಹೋಗಿ ಸಿನಮಾ ದಲ್ಲಿ ಅವಕಾಶ ಪಡೆದು ನಿಮ್ಮ ವೃತ್ತಿಯನ್ನು ಮುಂದುವರೆಸುವoತೆ ಕೋರಿದ್ದಾರೆ.

ಆದರೆ, ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ವಾಪಸ್ ಬೆಂಗಳೂರಿಗೆ ಹೋಗುವ ನಿರ್ಧಾರ ಮಾಡಿದ್ದಾರೆ. ಹೀಗಾಗಿ ಕಾರನ್ನು ಮಾಡಿಸಿ ಕಳುಹಿಸಿಕೊಟ್ಟಿದ್ದಾರೆ.

ಅಲ್ಲದೆ ಸೋಸಿಯಲ್ ಮಿಡಿಯಾದಲ್ಲಿ ಮತ್ತೊಂದು ಪೋಸ್ಟ್ ಮಾಡಿ, ನಾನು ಬೆಂಗಳೂರಿಗೆ ಬರುತ್ತಿದ್ದೇನೆ. ಯಾರಾದರು ಸಹಾಯ ಮಾಡಿ, ಉಳಿದುಕೊಳ್ಳಲು ಮನೆಯ ವ್ಯವಸ್ಥೆ ಮಾಡಿ ಎಂದು ಕೋರಿದ್ದಾರೆ.

ವಿಸ್ಮಯ ನ್ಯೂಸ್, ಹೊನ್ನಾವರ

ನಿಮ್ಮೂರಲ್ಲೂ ಸೂಪರ್ ಸ್ಟೋರ್ ಮಾಡಬೇಕೆ? ಸ್ಟೋರ್ ಕಿಂಗ್, ಸ್ಮಾರ್ಟ್ ಸೂಪರ್ ಸ್ಟೋರ್: ನಿಮಗೆ ನೀವೆ ಮಾಲೀಕರಾಗಿ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ತಂತ್ರಜ್ಞಾನ ಚಾಲಿತ ಸೂಪರ್ ಮಾರ್ಕೆಟ್ ನಿರ್ಮಿಸಿ ಹಾಗು ತಿಂಗಳಿಗೆ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸಿರಿ. ಸಣ್ಣ ಮಟ್ಟದ ಬಂಡಾವಳ ಹೂಡಿಕೆ ಮಾಡಿ, ನಮ್ಮೊಂದಿಗೆ ಪಾಲುದಾರರಾಗಿ.. ನಿಮ್ಮೂರಲ್ಲೂ ಸೂಪರ್ ಮಾರ್ಕೆಟ್ ನಿರ್ಮಿಸಬೇಕೆಂದಿದ್ದರೆ, ಇದಕ್ಕಿಂತ ಒಳ್ಳೆಯ ಸುವರ್ಣಾವಕಾಶ ಇನ್ನೊಂದಿಲ್ಲ. ತಂತ್ರಜ್ಞಾನ, ಪ್ರಾಡೆಕ್ಟ್, ಲಾಜಿಸ್ಟಿಕ್ಟ್ ನಿಂದ ಹಿಡಿದು ಎಲ್ಲ ರೀತಿಯ ಬೆಂಬಲವನ್ನೂ ನಾವು ನಿಮಗೆ ನೀಡುತ್ತೇವೆ. ತಿಂಗಳಿಗೆ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸಿರಿ : 7338463571

Back to top button