ಶಿರಸಿ ಕುಮಟಾ ಹೆದ್ದಾರಿ ರಸ್ತೆ ಕಾಮಗಾರಿಗೆ ಇದ್ದ ಅಡೆತಡೆಯೊಂದು ನಿವಾರಣೆ – ಅರ್ಜಿ ವಜಾಗೊಳಿಸಿದ ಹೈಕೋರ್ಟ್
ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿರುವ ಶಿರಸಿ ಕುಮಟಾ ಹೆದ್ದಾರಿ ರಸ್ತೆ ಕಾಮಗಾರಿಗೆ ಇದ್ದ ಅಡೆತಡೆಯೊಂದು ನಿವಾರಣೆಯಾಗಿದೆ. ಈ ಕಾಮಗಾರಿ ನಡೆಸಲು ಪರಿಸರ ಇಲಾಖೆ ಅನುಮತಿ ಪಡೆದಿಲ್ಲ ಎಂದು ಖ್ಯಾತೆ ತೆಗೆದು ಕಾಮಗಾರಿ ನಿಲ್ಲಿಸಲು ಅವಕಾಶ ನೀಡುವಂತೆ ಬೆಂಗಳೂರಿನ ಖಾಸಗಿ ಸಂಸ್ಥೆ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ.
ಶಿರಸಿಯ ನಿಲೇಕಣಿಯಿಂದ ಕುಮಟಾ ತಾಲೂಕಿನ ದಿವಗಿ ಕ್ರಾಸ್ ವರೆಗಿನ 59 ಕಿಲೋಮೀಟರ್ ಉದ್ದದ ರಸ್ತೆಗೆ ಭಾರತ್ ಮಾಲಾ ಯೋಜನೆ ಅಡಿಯಲ್ಲಿ 440 ಕೋಟಿ ಅನುದಾನ ಮಂಜೂರಾಗಿದೆ. ಕಾಮಗಾರಿ ಶುರುವಾಗುತ್ತಿದ್ದಂತೆ ಬೆಂಗಳೂರಿನ ಖಾಸಗಿ ಸಂಸ್ಥೆ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿತ್ತು. ಇದೀಗ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದ್ದು, ಕಾಮಗಾರಿಗೆ ಇದ್ದ ಅಡೆತಡೆ ನಿವಾರಣೆಯಾಗಿದೆ.
ವಿಸ್ಮಯ ನ್ಯೂಸ್, ಕುಮಟಾ
ನಿಮ್ಮೂರಲ್ಲೂ ಸೂಪರ್ ಸ್ಟೋರ್ ಮಾಡಬೇಕೆ?
ಸ್ಟೋರ್ ಕಿಂಗ್, ಸ್ಮಾರ್ಟ್ ಸೂಪರ್ ಸ್ಟೋರ್: ನಿಮಗೆ ನೀವೆ ಮಾಲೀಕರಾಗಿ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ತಂತ್ರಜ್ಞಾನ ಚಾಲಿತ ಸೂಪರ್ ಮಾರ್ಕೆಟ್ ನಿರ್ಮಿಸಿ ಹಾಗು ತಿಂಗಳಿಗೆ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸಿರಿ. ಸಣ್ಣ ಮಟ್ಟದ ಬಂಡಾವಳ ಹೂಡಿಕೆ ಮಾಡಿ, ನಮ್ಮೊಂದಿಗೆ ಪಾಲುದಾರರಾಗಿ.. ನಿಮ್ಮೂರಲ್ಲೂ ಸೂಪರ್ ಮಾರ್ಕೆಟ್ ನಿರ್ಮಿಸಬೇಕೆಂದಿದ್ದರೆ, ಇದಕ್ಕಿಂತ ಒಳ್ಳೆಯ ಸುವರ್ಣಾವಕಾಶ ಇನ್ನೊಂದಿಲ್ಲ. ತಂತ್ರಜ್ಞಾನ, ಪ್ರಾಡೆಕ್ಟ್, ಲಾಜಿಸ್ಟಿಕ್ಟ್ ನಿಂದ ಹಿಡಿದು ಎಲ್ಲ ರೀತಿಯ ಬೆಂಬಲವನ್ನೂ ನಾವು ನಿಮಗೆ ನೀಡುತ್ತೇವೆ. ತಿಂಗಳಿಗೆ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸಿರಿ : 7338463571