ಸಮುದ್ರ ಸ್ನಾನಕ್ಕೆ ತೆರಳಿದ್ದ ವೈದ್ಯನಿಗೆ ಉಸಿರಾಟದ ತೊಂದರೆ: ಸಮಯ ಪ್ರಜ್ಞೆಯಿಂದ ತಪ್ಪಿತು ಅನಾಹುತ
ಗೋಕರ್ಣ: ಸಮುದ್ರದಲ್ಲಿ ಈಜಲು ತೆರಳಿದ್ದ ವೇಳೆ ಮುಳುಗುವ ಹಂತದಲ್ಲಿದ್ದ ಪ್ರವಾಸಿಗನನ್ನು ರಕ್ಷಣೆ ಮಾಡಿದ ಘಟನೆ ಇಲ್ಲಿನ ಕಡಲತೀರದಲ್ಲಿ ನಡೆದಿದೆ. ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಸುರೇಶ ತಮ್ಮ ಕುಟುಂಬದೊoಧಿಗೆ ಗೋಕರ್ಣಕ್ಕೆ ಆಗಮಿಸಿದ್ದರು. ಈ ವೇಳೆ ಇಲ್ಲಿನ ಮುಖ್ಯಕಡಲತೀರ ಸಮೀಪದ ಈಜಲು ತೆರಳಿದ್ದರು.
ಡಾ.ಸುರೇಶ ಸಮುದ್ರದಲ್ಲಿ ಈಜಲು ನೀರಿಗಿಳಿದಿದ್ದು, ಈ ವೇಳೆ ಅಲೆಗಳ ಅಬ್ಬರ ಹೆಚ್ಚಾದ ಪರಿಣಾಮ ಅಸ್ವಸ್ಥರಾಗಿ ಮುಳುಗುವ ಹಂತದಲ್ಲಿದ್ದರು. ಈ ವೇಳೆ ಇದನ್ನು ಗಮನಿಸಿದ ಜೊತೆಗಿದ್ದವರು ಕೂಡಲೇ ಅವರನ್ನು ರಕ್ಷಣೆ ಮಾಡಿ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ. ಉಪ್ಪು ನೀರು ಕುಡಿದ ಪರಿಣಾಮ ಅಸ್ವಸ್ಥರಾಗಿದ್ದ ಅವರಿಗೆ ಇಲ್ಲಿನ ವೈದ್ಯರು ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದ ಬಳಿಕ ಚೇತರಿಸಿಕೊಂಡಿದ್ದು, ಸಂಭಾವ್ಯ ಅನಾಹುತದಿಂದ ಪಾರಾಗಿದ್ದಾರೆ.
ವಿಸ್ಮಯ ನ್ಯೂಸ್, ಗೋಕರ್ಣ
ನಿಮ್ಮೂರಲ್ಲೂ ಸೂಪರ್ ಸ್ಟೋರ್ ಮಾಡಬೇಕೆ?
ಸ್ಟೋರ್ ಕಿಂಗ್, ಸ್ಮಾರ್ಟ್ ಸೂಪರ್ ಸ್ಟೋರ್: ನಿಮಗೆ ನೀವೆ ಮಾಲೀಕರಾಗಿ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ತಂತ್ರಜ್ಞಾನ ಚಾಲಿತ ಸೂಪರ್ ಮಾರ್ಕೆಟ್ ನಿರ್ಮಿಸಿ ಹಾಗು ತಿಂಗಳಿಗೆ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸಿರಿ. ಸಣ್ಣ ಮಟ್ಟದ ಬಂಡಾವಳ ಹೂಡಿಕೆ ಮಾಡಿ, ನಮ್ಮೊಂದಿಗೆ ಪಾಲುದಾರರಾಗಿ.. ನಿಮ್ಮೂರಲ್ಲೂ ಸೂಪರ್ ಮಾರ್ಕೆಟ್ ನಿರ್ಮಿಸಬೇಕೆಂದಿದ್ದರೆ, ಇದಕ್ಕಿಂತ ಒಳ್ಳೆಯ ಸುವರ್ಣಾವಕಾಶ ಇನ್ನೊಂದಿಲ್ಲ. ತಂತ್ರಜ್ಞಾನ, ಪ್ರಾಡೆಕ್ಟ್, ಲಾಜಿಸ್ಟಿಕ್ಟ್ ನಿಂದ ಹಿಡಿದು ಎಲ್ಲ ರೀತಿಯ ಬೆಂಬಲವನ್ನೂ ನಾವು ನಿಮಗೆ ನೀಡುತ್ತೇವೆ. ತಿಂಗಳಿಗೆ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸಿರಿ : 7338463571