ಕಲ್ಲು ತುಂಬಿದ ಲಾರಿಯೊಂದು ದನಕ್ಕೆ ಡಿಕ್ಕಿ: ಕಂದಕಕ್ಕೆ ಉರುಳಿ ಲಾರಿಯಡಿ ಸಿಲುಕಿದ ಕ್ಲೀನರ್: ಅಗ್ನಿಶಾಮಕ ಸಿಬ್ಬಂದಿಯ ಯಶಸ್ವಿ ಕಾರ್ಯಾಚರಣೆ
ಕುಮಟಾ: ಕಲ್ಲು ತುಂಬಿದ ಲಾರಿಯೊಂದು ದನಕ್ಕೆ ಡಿಕ್ಕಿ ಹೊಡೆದು, ನಂತರ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿದ್ದಂತಹ ತೋಟದಲ್ಲಿ ಪಲ್ಟಿಯಾದ ಘಟನೆ ಕುಮಟಾ ತಾಲೂಕಿನ ಹೊಲನಗದ್ದೆ ಬಳಿ ನಡೆದಿದೆ. ರಾತ್ರಿ 8 ಗಂಟೆ ಸುಮಾರಿಗೆ ಕಲ್ಲು ತುಂಬಿದ ಲಾರಿಯೊಂದು ಕುಮಟಾ ತಾಲೂಕಿನ ಬಾಡ ಮಾರ್ಗವಾಗಿ ಸಾಗುತ್ತಿರುವ ವೇಳೆ ಅಪಘಾತ ಸಂಭವಿಸಿದ್ದು, ಈ ಘಟನೆಯಲ್ಲಿ ದನವು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.
ಚಲಿಸುತ್ತಿದ್ದಂತಹ ಕಲ್ಲು ತುಂಬಿದ ಲಾರಿಗೆ ದನ ಅಡ್ಡಬಂದ ಪರಿಣಾಮ ಲಾರಿಯು ದನಕ್ಕೆ ದಿಕ್ಕಿ ಹೊಡೆದಿದೆ. ನಂತರ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತೋಟದಲ್ಲಿದ್ದ ಕಂದಕ್ಕೆ ಉರುಳಿ ಲಾರಿಯ ಕ್ಲೀನರ್ ಆಚೆ ಬರಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ತಕ್ಷಣವೇ ಕುಮಟಾ ಅಗ್ನಿಶಾಮಕ ಠಾಣೆಗೆ ಕರೆಮಾಡಿದ್ದು, ಕರೆಗೆ ಸ್ಪಂದಿಸಿ ಶೀಘ್ರವೇ ಸ್ಥಳಕ್ಕಾಗಮಿಸಿದ ಅಘ್ನಿಶಾಮಕ ಸಿಬ್ಬಂದಿಗಳು ಕ್ರೆನ್‌ನ ಮೂಲಕ ಪಲ್ಟಿಯಾಗಿದ್ದ ಲಾರಿಯನ್ನು ಮೆಲೆತ್ತಿ, ಲಾರಿಯ ಕ್ಲೀನರ್‌ನ್ನು ರಕ್ಷಿಸಿದ್ದಾರೆ.
ಲಾರಿ ಚಾಲಕ ಹಾಗೂ ಕ್ಲೀನರ್‌ಗೆ ಕೆಲ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಒಂದು ರಕ್ಷಣಾ ಕಾರ್ಯಾಚರಣೆಯಲ್ಲಿ ಕುಮಟಾ ಅಘ್ನಿಶಾಮಕ ಠಾಣಾಧಿಕಾರಿ ತಮ್ಮಯ್ಯ ಗೊಂಡ, ಸಿಬ್ಬಂದಿಗಳಾದ ಲಂಬೋದರ ಪಟಗಾರ, ಜಯಂತ ನಾಯ್ಕ, ನಾಗರಾಜ ಪಟಗಾರ, ರಾಜೇಶ ಮಡಿವಾಳ, ಮಹಾಬಲೇಶ್ವರ ಹರಿಕಂತ್ರ, ಗುರುನಾಥ ನಾಯ್ಕ, ದಿನೇಶ ಕುಮಾರ್ ಮುಂತಾದವರು ಇದ್ದರು.
ಬಾಡ ಮಾರ್ಗಕ್ಕೆ ಪ್ರತಿ ನಿತ್ಯ ಇದೇ ರೀತಿ ಹಲವಾರು ಕಲ್ಲು, ಮಣ್ಣು, ರೇತಿ ಮುಂತಾದ ವಾಹನ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರಾತ್ರಿಯ ವೇಳೆ ಓಡಾಡುತ್ತಿರುತ್ತದೆ. ರಸ್ತೆಯಲ್ಲಿ ಜಾನುವಾರುಗಳ ಜೊತೆಗೆ ಪಾದಚಾರಿಗಳು ಸಹ ಓಡಾಡುತ್ತಿರುತ್ತಾರೆ.
ಈ ವೇಳೆ ಇಂತಹ ವಾಹನಗಳು ಅತಿ ವೇಗವಾಗಿ ಬಂದರೆ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಆದ ಕಾರಣ ಈ ಕುರಿತು ಸಂಬoಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೆಕೆಂದು ಸಾರ್ವಜನಿಕ ವಲಯದ ಮಾತಾಗಿದೆ.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ.
ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581