ಕುಮಟಾ: ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗಾಂಧೀಜಯಂತಿ ಮತ್ತು ಲಾಲಬಹದ್ದೂರ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಚಾರ್ಯರಾದ ಡಾ: ಶ್ರೀಮತಿ ಪ್ರೀತಿ ಭಂಡಾರ್‌ಕರವರು ಗಾಂಧೀಜಿ ಯವರ ಮತ್ತು ಲಾಲಬಹದ್ದೂರ ಶಾಸ್ತಿçಯವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಇಂದಿನ ಸಮಾಜಕ್ಕೆ ಗಾಂಧೀಜಿಯವರ ಮೌಲ್ಯಗಳು, ಚಿಂತನೆಗಳು ಅಗತ್ಯ ಮತ್ತು ಶಾಸ್ತ್ರಿಯವರ ಸರಳತೆ ಮತ್ತು ಶ್ರೇಷ್ಠತೆ ಜೀವನದಲ್ಲಿ ಆದರ್ಶವನ್ನು ಕಲಿಯುವುದು ಸಾಕಷ್ಟಿದೆ ಎಂದು ಮಾತನಾಡಿದರು,
ಬೋಧಕ ಮತ್ತು ಬೋಧಕೇತರ ವೃಂದದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗಾಂಧೀಜಯಂತಿಯ ಪ್ರಯುಕ್ತ ಬಿ.ಇಡಿ. ಪ್ರಥಮ ಮತ್ತು ತೃತೀಯ ಸೆಮಿಸ್ಟರ್ ಶಿಕ್ಷಕ ವಿದ್ಯಾರ್ಥಿಗಳಿಗೆ ‘ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಗಾಂಧೀಜಿಯವರ ವಿಚಾರಧಾರೆಗಳ ಅಗತ್ಯತೆ’ ವಿಷಯದ ಕುರಿತು ಲಿಖಿತ ಪ್ರಬಂಧ ಸ್ಪರ್ದೆಯನ್ನು ಏರ್ಪಡಿಸಲಾಯಿತು.
ವಿಸ್ಮಯ ನ್ಯೂಸ್, ಕುಮಟಾ