Follow Us On

WhatsApp Group
Important
Trending

ಮಹಿಳೆಯರ ಸ್ವಾವಲಂಬಿ ಬದುಕಿಗೆ‌ ಮುನ್ನುಡಿ: ಲಯನ್ಸ್ ನಿಂದ ಹೊಲಿಗೆ ತರಬೇತಿ ಕೇಂದ್ರ ಆರಂಭ

ಹೊನ್ನಾವರ :ಈ ವರ್ಷದ ‘ಲಯನ್ಸ್ ನಡೆ ಹಳ್ಳಿಯ ಕಡೆ’ ಯಾಗಿದ್ದು ಲಯನ್ಸ್ ಕ್ಲಬ್ ಹೊನ್ನಾವರದ ನೇತೃತ್ವದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಹಮ್ಮಿಕೊಳ್ಳುತ್ತಾ ಬಂದಿದೆ.

ಅದೇ ರೀತಿ ಇಂದು ಮಹಿಳಾ ಸಬಲೀಕರಣ ಕಾರ್ಯಕ್ರಮದಡಿಯಲ್ಲಿ, ಹೊಲಿಗೆ ತರಬೇತಿ ಕೇಂದ್ರವನ್ನು ಈ ಭಾಗದಲ್ಲಿ ತೆರೆಯುತ್ತಿದ್ದೇವೆ. ಇದರ ಪ್ರಯೋಜನವನ್ನು ಈ ಭಾಗದ ಮಹಿಳೆಯರು ಪಡೆಯುವ ಮೂಲಕ ಸ್ವಾವಲಂಬಿ ಬದುಕನ್ನು ಸಾಗಿಸುವಂತಾಗಲಿ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ವಿನೋದ್ ನಾಯ್ಕ ಮಾವಿನಹೊಳೆ ನುಡಿದರು.

ಇವರು ಸರಳಗಿ ಗ್ರಾಮದ ದೇವರಗದ್ದೆಯಲ್ಲಿ ಲಯನ್ಸ್ ಕ್ಲಬ್ ಹೊನ್ನಾವರದ ವತಿಯಿಂದ ತೆರೆದ ಹೊಲಿಗೆ ತರಬೇತಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ, 5 ಹೊಲಿಗೆ ಯಂತ್ರಗಳನ್ನು ಉಚಿತವಾಗಿ ಲಯನ್ಸ್ ಕ್ಲಬ್ ವತಿಯಿಂದ ತರಬೇತಿ ಕೇಂದ್ರಕ್ಕೆ ನೀಡಿ ಮಾತನಾಡುತ್ತಿದ್ದರು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಲಯನ್ ಉದಯ ನಾಯ್ಕ, ಖಜಾಂಚಿ ಎಮ್.ಜೆ.ಎಫ್ ಲಯನ್ ಎಸ್ ಜೆ ಕೈರನ್, ಜೋನ್ ಚೇರ್ಪರ್ಸನ್ ಎಮ್.ಜೆ.ಎಫ್ ಲಯನ್ ರಾಜೇಶ್ ಸಾಳೇಹಿತ್ತಲ್ ಮಾತನಾಡಿದರು. ವೇದಿಕೆಯಲ್ಲಿ ಸರಳಗಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಗಣಪತಿ ನಾಯ್ಕ ಉಪಸ್ಥಿತರಿದ್ದರು. ಲಯನ್ ಸರಿತಾ ಮೇಸ್ತ ಪ್ರಾರ್ಥಿಸಿದರು.

ಮಹಿಳಾ ಸಬಲೀಕರಣ ಸಮಿತಿ ಅಧ್ಯಕ್ಷರಾದ ಲಯನ್ ಸಜಿತಾ ಶಿವಪ್ರಸಾದ್ ಸ್ವಾಗತಿಸಿದರು. ಲಯನ್ ಎಂ ಜಿ ನಾಯ್ಕ ನಿರೂಪಿಸಿದರು. ಲಯನ್ ಶೈಲಾ ಶಾನಬಾಗ್ ಸರ್ವರನ್ನು ವಂದಿಸಿದರು. ಕಾರ್ಯಕ್ರಮದಲ್ಲಿ ಮೂವತ್ತಕ್ಕೂ ಹೆಚ್ಚು ಫಲಾನುಭವಿಗಳು, ಲಯನ್ಸ್ ಸದಸ್ಯರು,ಊರ ನಾಗರೀಕರು ಹಾಜರಿದ್ದರು.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ

Back to top button