

ಯುವಕರು ಇತ್ತಿಚಿನ ದಿನಗಳಲ್ಲಿ ಯಾವುದೋ ಸಣ್ಣ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು, ಸಾವಿಗೆ ಶರಣಾಗುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಆತುರದ ನಿರ್ಧಾರಕ್ಕೆ ಬಿದ್ದು ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ. ಎಲ್ಲೆಡೆ ಇಂಥ ಪ್ರಕರಣ ಕಂಡುಬರುತ್ತಿದೆ.

ಭಟ್ಕಳ: ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಯುವಕನೊರ್ವ ರೈಲ್ವೆ ಹಳಿಗೆ ತಲೆ ಕೊಟ್ಟು ಸಾವನ್ನಪ್ಪಿರುವ ಘಟನೆ ಬಸ್ತಿಯ ರೈಲ್ವೆ ಬ್ರಿಡ್ಜ್ ಸಮೀಪ ಬುಧುವಾರ ರಾತ್ರಿ ನಡೆದಿದೆ. ಮೃತ ಯುವಕ ಗಣೇಶ ಸುಬ್ರಾಯ್ ನಾಯ್ಕ ಬಸ್ತಿ ಎಣ್ಣೆಬೋಳೆ ದೇವಿಕಾನ ನಿವಾಸಿ ಎಂದು ತಿಳಿದು ಬಂದಿದೆ.

ಈತ ಕೆಲವು ವರ್ಷದಿಂದ ಮುರುಡೇಶ್ವರ ಮುತ್ತೂಟ್ ಫೈನಾನ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದ. ಯಾವುದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ರಾತ್ರಿ ಬಸ್ತಿಯ ರೈಲ್ವೆ ಬ್ರಿಡ್ಜ್ ಸಮೀಪ ರೈಲ್ವೆ ಹಳಿಗೆ ತಲೆಕೊಟ್ಟ ವೇಳೆ ಯಾವುದೋ ರೈಲು ಕುತ್ತಿಗೆ ಮದ್ಯ ಹಾದು ಹೋಗಿ ದೇಹದಿಂದ ಕುತ್ತಿಗೆ ಬೇರ್ಪಟ್ಟು ಸಾವನ್ನಪ್ಪಿದ್ದಾನೆ. ಈ ಕುರಿತು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

- ಕಡಲತೀರಕ್ಕೆ ತೇಲಿಕೊಂಡು ಬಂದ ಬೃಹತ್ ಹಡಗು
- ಭಾರೀ ಮಳೆ ಮುನ್ಸೂಚನೆ: ನಾಳೆ ಶಾಲೆಗಳಿಗೆ ರಜೆ ಘೋಷಣೆ
- ಜಿ.ಎಲ್.ಹೆಗಡೆಯವರಿಗೆ ಕಲಾರಂಗ ಪ್ರಶಸ್ತಿ : ಯಕ್ಷಮುಖಿಯಿಂದ ಸಂತಸ
- ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ
- ಜೂನ್ 14 ವಿಶ್ವ ರಕ್ತದಾನಿಗಳ ದಿನ
