Follow Us On

WhatsApp Group
Trending

ಈ ಮಹಿಳೆಯ ಕಾಟ ತಡೆಯೋಕೆ ಆಗ್ತಿಲ್ಲ! ಈಕೆಯಿಂದ ಕಾಪಾಡುವಂತೆ ಪೊಲೀಸರ ಮೊರೆ ಹೋದ ಗ್ರಾಮಸ್ಥರು

ಸರಕಾರಿ ಕಟ್ಟಡ, ಅಂಗಡಿಯೇ ಈಕೆಗೆ ವಸತಿ ಗೃಹ: ಗ್ರಾಮಸ್ಥರು ಬೆಚ್ಚಿ ಬೀಳಲು ಕಾರಣ ಏನು ಗೊತ್ತಾ?


ಕಳೆದ ಒಂದು ವರ್ಷದಿಂದ ಈಕೆಯನ್ನು ಸಹಿಸಿಕೊಂಡು ಸಾಕಾಗಿದೆ ಹೋಗಿದೆ. ಇನ್ನು ಸಾಧ್ಯವೇ ಇಲ್ಲ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಅಯ್ಯೋ, ಈಕೆಯನ್ನು ಮನೆಗೆ ಕಳುಹಿಸಿ, ಉಪಟಳ ಸಹಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ. ಗ್ರಾಮಸ್ಥರು ಯಾಕೆ ಹೀಗೆ ಹೇಳ್ತಿದ್ದಾರೆ ನೋಡಿ?

ಕುಮಟಾ: ಈಕೆಯನ್ನು ಒಮ್ಮೆ ಸರಿಯಾಗಿ ನೋಡಿ. ನೋಡುವುದಕ್ಕೆ ಪಕ್ಕಾ ಸಾಧ್ವಿ ತರ ಕಾಣ್ತಾಳೆ. ಆದರೆ, ಈಕೆಯ ಅವಾಂತರ ಕಂಡು ಗ್ರಾಮಸ್ಥರೇ ಬೆಚ್ಚಿಬಿದ್ದಿದ್ದಾರೆ.

ಈಕೆಯ ಉಪಟಳ ತಾಳಲಾರದೆ, ಕಂಗಾಲಾಗಿದ್ದಾರೆ. ಈಕೆಯ ಉಪಟಳ ತಡೆಯೋಕೆ ಆಗ್ತಿಲ್ಲ ಎಂದು ಸಾರ್ವಜನಿಕರು, ಅಂಗಡಿಕಾರರು ಮಾತಾಡಿಕೊಳ್ತಿದ್ದಾರೆ.

ಈಕೆಯ ಹೆಸರು ಸಂಗೀತಾ. ಕಳೆದೊಂದು ವರ್ಷದಿಂದ ತಾಲೂಕಿನ ಮಿರ್ಜಾನ ಜನರಿಗೆ ಪರಿಚಯ. ಸರಕಾರಿ ಕಟ್ಟಡ, ಅಂಗಡಿಯೇ ಈಕೆಗೆ ವಸತಿ ಗೃಹವಾಗಿದೆ. ಅಲ್ಲೇ ಮಲಗುವುದು ಜೊತೆಗೆ ಅಲ್ಲಿಯೇ ಗಲಿಜು ಮಾಡುವುದು ಜಗಲವಾಡುವುದು ಹಾಗೂ ಇತರ ಕಾಯಕ ಮಾಡಿಕೊಂಡಿದ್ದಾಳೆ ಎಂಬ ಆರೋಪ ಕಳೆದ ಹಲವು ದಿನಗಳಿಂದ ಕೇಳಿಬರುತ್ತಿದೆ.

ಈಕೆಗೆ ಯಾರಾದರೂ ಗದರಿಸಲು ಮುಂದಾದರೆ ಬಾಯಿಗೆ ಬಂದ ಹಾಗೆ ಮಾತನಾಡಿ, ಹೆದರಿಸುತ್ತಾಳೆ. ಅಷ್ಟೆ ಅಲ್ಲ, ಪೋಲಿಸ್ ದೂರು ನೀಡುವುದಾಗಿ ಹೇಳುತ್ತಾರೆ. ಹೀಗಾಗಿ ಯಾರೂ ಈಕೆಯ ತಂಟೆಗೆ ಹೋಗ್ತಿಲ್ಲ. ಆದರೆ ಈ ಮಹಿಳೆ ಎಲ್ಲಿಯವಳು ಎನ್ನುವುದು ನಿಖರವಾಗಿ ತಿಳಿದಿಲ್ಲ..

ಸಾರ್ವಜನಿಕರ ದೂರಿನ ಮೇರೆಗೆ ಪೋಲಿಸರು ಸ್ಥಳಕ್ಕೆ ವಿಚಾರಿಸಿ, ಊರಿನ ಬಸ್ ಹತ್ತಿಸಿದ್ದರು. ಆದರೆ ಇದೀಗ ಮತ್ತೆ ಪ್ರತ್ಯಕ್ಷವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ ಈಕೆ. ಕೂಡಲೇ ಪಂಚಾಯತ ಸದಸ್ಯರಾದ ವಿನಾಯಕ ನಾಯ್ಕ ಹಾಗು ಸಾರ್ವಜನಿಕರಾದ ರಾಜು ನಾಯ್ಕ ಸೇರಿದಂತೆ ಹಲವರು ಸೇರಿ ಪೋಲಿಸರ ಗಮನಕ್ಕೆ ತಂದರು. ಈ ಮಹಿಳೆಯನ್ನು ಊರಿನಿಂದ ಹೊರಹಾಕಲು ಪೋಲಿಸರು ಹರಸಾಹಸವನ್ನೇ ಪಡಬೇಕಾಯಿತು.

ಇದಲ್ಲದೆ ಸರಕಾರಿ ಕಚೇರಿ ಹೊರಂಗಣವನ್ನೇ ವಸತಿಗೃಹ ಮಾಡಿಕೊಂಡಿದ್ದು, ಅಶುದ್ಧತೆಯ ತಾಣ ಮಾಡಿಕೊಂಡಿದ್ದಾಳೆ. ಈಕೆಯ ವಿಚಿತ್ರ ನಡವಳಿಕೆ ಜನರ ಆಕ್ರೋಶಕ್ಕೆ ಕಾರಣವಾಗಿದ್ದು , ಸಂಭಾವ್ಯ ಅನಾಹುತ ತಪ್ಪಿಸಲು ಪೋಲಿಸ ಇಲಾಖೆಯ ಮೊರೆ ಹೋಗಿದ್ದಾರೆ ಸಾರ್ವಜನಿಕರು.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581

Back to top button