Follow Us On

WhatsApp Group
Important
Trending

ಪ್ಲೈ ಓವರ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರಿಗೆ ಬೆಂಕಿ: ಸಂಪೂರ್ಣವಾಗಿ ಸುಟ್ಟು ಕರಕಲು

ಕಾರವಾರ: ಪ್ಲೈ ಓವರ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರೊಂದು ಸುಟ್ಟು ಕರಕಲಾದ ಘಟನೆ ನಗರದ ಆರ್.ಟಿ.ಓ ಕಚೇರಿ ಮುಂಭಾಗದಲ್ಲಿ ನಡೆದಿದೆ. ರಾತ್ರಿ ಈ ಘಟನೆ ನಡೆದಿದ್ದು ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಚಾಲಕನಿಗೆ ಚಿಕ್ಕಪುಟ್ಟ ಗಾಯಗಳಾಗಿದೆ.

ಗೋವಾದಿಂದ ಮಂಗಳೂರಿಗೆ ತೆರಳುತ್ತಿದ್ದ ಸ್ವೀಪ್ ಕಾರು ನಗರದ ಆರ್‌ಟಿಓ ಕಚೇರಿ ಸಮಿಪಿಸುತ್ತಿದ್ದಂತೆ ನಿಮಾರ್ಣಹಂತದಲ್ಲಿರುವ ಫೈ ಓವರ್ ಕಂಬಕ್ಕೆ ಗುದ್ದಿದೆ. ಈ ವೇಳೆ ಏಕಾಏಕಿ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು ಸಂಪೂರ್ಣ ಕರಕಲಾಗಿದೆ. ಮಂಗಳೂರಿನ ಮಹಮ್ಮದ್ ಅಶ್ರಫ್ ಎಂಬುವವರಿಗೆ ಸೇರಿದ ಕಾರು ಇದಾಗಿದೆ ಎಂಬುದು ತಿಳಿದುಬಂದಿದೆ. ಪ್ರಕರಣ ಸಂಚಾರ ಠಾಣೆಯಲ್ಲಿ ದಾಖಲಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

ಸಾನ್ವಿ ಕ್ಲಿನಿಕ್: ಸ್ಕಿನ್ ಕೇರ್ & ನೇಲ್ ಕೇರ್ ಸೆಂಟರ್: ಸಿದ್ದಿವಿನಾಯಕ ಸ್ಟೋರ್ಸ್ ಎದುರಿನ ರಸ್ತೆ, ಹೆಗಡೆ ಕ್ರಾಸ್, ಕುಮಟಾ. ಮೊಡವೆ, ತೊನ್ನು, ಕಪ್ಪುಕಲೆ,ಗಜಕರ್ಣ, ಅಲರ್ಜಿ, ಕುಷ್ಠರೋಗ, ಉರುಗಿನ ಸಮಸ್ಯೆ, ತಲೆಹೊಟ್ಟು, ಸೋರಿಯಾಸಿಸ್, ಕೂದಲಿನ ಸಮಸ್ಯೆ, ಗುಪ್ತ ರೋಗ ಸೇರಿದಂತೆ ಇತರೆ ಸಮಸ್ಯೆಗಳಿಗಾಗಿ ಸಂಪರ್ಕಿಸಿ. ಚರ್ಮದ ಶಸ್ತ್ರಚಿಕಿತ್ಸೆ , ಮೊಡವೆ ಕಲೆಯ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಎಲ್ಲಾ ರೀತಿಯ ಚರ್ಮರೋದ ಸಮಸ್ಯೆಗಳಿಗಾಗಿ ಸಂಪರ್ಕಿಸಿ; ಭೇಟಿಯಾಗುವ ವೇಳೆ: ಬೆಳಿಗ್ಗೆ 11-30 ರಿಂದ ಮಧ್ಯಾಹ್ನ 2,00 ಗಂಟೆ 3.30 ರಿಂದ ಸಂಜೆ 7 ಗಂಟೆ ವರೆಗೆ ವೈದ್ಯರ ಭೇಟಿ, ಸಲಹೆಗಾಗಿ ಸಂಪರ್ಕಿಸಿ: 8088310732

Back to top button